ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ್ ಉಗ್ರರಿಗೆ ಇವನೇ ಅನ್ನ-ನೀರು ಕೊಡುವುದು

|
Google Oneindia Kannada News

ದೆಹಲಿ, ಡಿಸೆಂಬರ್.11: ಬೆಂಕಿಯ ಜ್ವಾಲೆ ತನ್ನ ಸುತ್ತಲಿನ ಪ್ರದೇಶವನ್ನು ಸುಡುವ ಮೊದಲು ತಾನಿರುವ ಜಾಗವನ್ನು ಸುಡುತ್ತದೆ ಎಂಬ ಮಾತಿಗೆ ಪಾಕಿಸ್ತಾನ್ ಉತ್ತಮ ಉದಾಹರಣೆ. ವಿಶ್ವದಲ್ಲಿ ಭಯೋತ್ಪಾದನೆಗೆ ಅನ್ನ-ನೀರು ನೀಡಿ ಪೋಷಿಸುತ್ತಿದೆ. ಇಂಥದೊಂದು ಗಂಭೀರ ಆರೋಪ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಂತೆ ಕಾಣುತ್ತಿದೆ.

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯದ್ ನನ್ನು ಸಾಚಾ ಎನ್ನುತ್ತಿದ್ದ ಪಾಕಿಸ್ತಾನ್ ಪ್ರಪಂಚದ ಎದುರು ತಲೆ ತಗ್ಗಿಸಿ ನಿಲ್ಲುವಂತೆ ಆಗಿದೆ. ಅಂಥದೊಂದು ಮಹತ್ವದ ಆದೇಶವನ್ನು ಪಾಕಿಸ್ತಾನ ಲಾಹೋರ್ ನ ಭಯೋತ್ಪಾದನಾ ನಿಗ್ರಹ ಕೋರ್ಟ್ ಆದೇಶ ಹೊರಡಿಸಿದೆ.

ಉಗ್ರ ಹಫೀಜ್ ಗೆ ಜೀವ ಬೆದರಿಕೆ; ಪ್ರಕರಣ ಲಾಹೋರ್ ಗೆ ವರ್ಗಾವಣೆಉಗ್ರ ಹಫೀಜ್ ಗೆ ಜೀವ ಬೆದರಿಕೆ; ಪ್ರಕರಣ ಲಾಹೋರ್ ಗೆ ವರ್ಗಾವಣೆ

ಭಾರತದಲ್ಲಿ ರಕ್ತಪಾತ ನಡೆಸಿದ ಜಮಾತ್-ಉದ್-ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯದ್ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳನ್ನು ಸಾಕಿ ಸಲಹುತ್ತಿದ್ದಾನೆ ಎಂದು ಲಾಹೋರ್ ಕೋರ್ಟ್ ಹೇಳಿದೆ. ಐದು ನಕಲಿ ಕಂಪನಿಗಳ ಹೆಸರಿನಲ್ಲಿ ಉಗ್ರ ಸಂಘಟನೆಗಳಿಗೆ ಹಫೀಜ್ ಸಯ್ಯದ್ ಆರ್ಥಿಕ ನೆರವು ನೀಡುತ್ತಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಜೆಯುಡಿ ಮುಖ್ಯಸ್ಥನ ವಿರುದ್ಧ ದೋಷಾರೋಪ

ಜೆಯುಡಿ ಮುಖ್ಯಸ್ಥನ ವಿರುದ್ಧ ದೋಷಾರೋಪ

ಪಾಕಿಸ್ತಾನದ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪಗಳ ಪಟ್ಟಿಯಲ್ಲಿ ಸಯ್ಯದ್ ಹಫೀಜ್ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ನಕಲಿ ಸಂಘ-ಸಂಸ್ಥೆಗಳ ಮೂಲಕ ಉಗ್ರರಿಗೆ ಹಾಗೂ ಉಗ್ರ ಚಟುವಟಿಕೆಗಳಿಗೆ ಹಣ ಸಂದಾಯ ಮಾಡುತ್ತಿದ್ದ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಮುಂಬೈ ದಾಳಿಕೋರನ ಮೇಲೆ 23 ಪ್ರಕರಣ

ಮುಂಬೈ ದಾಳಿಕೋರನ ಮೇಲೆ 23 ಪ್ರಕರಣ

ಸಯ್ಯದ್ ಹಫೀಜ್ ವಿರುದ್ಧ ಪಾಕಿಸ್ತಾನ್ ಪೊಲೀಸರೇ 23 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಭಯೋತ್ಪಾದನಾ ನಿಗ್ರಹ ಇಲಾಖೆಯ ಪಂಜಾಬ್ ವಿಭಾಗದ ಪೊಲೀಸರು ಕಳೆದ ಜುಲೈ.17ರಂದು ಉಗ್ರ ಸಂಘಟನೆಗಳಿಗೆ ಹಣ ಸಂದಾಯ ಮಾಡಿರುವ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ಟ್ರಸ್ಟ್ ಗಳ ಹೆಸರಿನಲ್ಲಿ ಉಗ್ರರಿಗಾಗಿ ಹಣ ಸಂಗ್ರಹ

ಟ್ರಸ್ಟ್ ಗಳ ಹೆಸರಿನಲ್ಲಿ ಉಗ್ರರಿಗಾಗಿ ಹಣ ಸಂಗ್ರಹ

ಲಾಹೋರ್, ಗುಜ್ರನ್ ವಾಲಾ, ಮಲ್ತಾನ್ ಪ್ರದೇಶದಲ್ಲಿ ಟ್ರಸ್ಟ್ ಹಾಗೂ ಎನ್ ಪಿಓ (NPO) ಕಂಪನಿಗಳ ಹೆಸರಿನಲ್ಲಿ ಹಣ ಸಂಗ್ರಹಿಸಲಾಗುತ್ತಿತ್ತು. ಹೀಗೆ ಸಂಗ್ರಹಿಸಿದ ಹಣವನ್ನೆಲ್ಲ ಉಗ್ರ ಸಂಘಟನೆಗಳಿಗೆ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ರೀತಿಯ ನಕಲಿ ಸಂಸ್ಥೆಗಳೇ ಸಯ್ಯದ್ ಹಫೀಜ್ ನ ಬಂಡವಾಳವಾಗಿತ್ತು ಎಂದು ಶಂಕಿಸಲಾಗಿದೆ.

ನಕಲಿ ಕಂಪನಿಗಳ ಹೆಸರಿನಲ್ಲಿ ಉಗ್ರರಿಗೆ ನೆರವು

ನಕಲಿ ಕಂಪನಿಗಳ ಹೆಸರಿನಲ್ಲಿ ಉಗ್ರರಿಗೆ ನೆರವು

ಅಲ್-ಅನಾಫ್ ಟ್ರಸ್ಟ್, ದ್ವಾತುಲ್ ಇರ್ಷಾದ್ ಟ್ರಸ್ಟ್, ಮೌಜ್ ಬಿನ್ ಜಬಲ್ ಟ್ರಸ್ಟ್ ಹೆಸರಿನಲ್ಲಿ ಮೊದಲು ಹಣ ಸಂಗ್ರಹಿಸಲಾಗುತ್ತಿತ್ತು. ನಂತರ ಅದೇ ಹಣವನ್ನು ಉಗ್ರ ಸಂಘಟನೆ ಹಾಗೂ ಉಗ್ರ ಚಟುವಟಿಕೆಗಳಿಗೆ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಲಷ್ಕರ್-ಇ-ತೊಯ್ಬಾ ಹಾಗೂ ಜಮಾತ್ ಉದ್ ದವಾ ಅಂಗಸಂಸ್ಥೆ ಆಗಿರುವ ಫಲಾಹಿ-ಇ-ಇನ್ಸಾನಿಯತ್ ಫೌಂಡೇಶನ್ ನ ಆರ್ಥಿಕ ಮೂಲ ಹಾಗೂ ಖರ್ಚು-ವೆಚ್ಚದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

English summary
Mumbai Terror Attack Mastermind In Hardship: Lahore Court Indicted Hafiz Saeed On Terror Financing Charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X