ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿ ಮಾಸ್ಟರ್ ಮೈಂಡ್ ಲಖ್ವಿ ಬಂಧನ

|
Google Oneindia Kannada News

ಲಾಹೋರ್, ಜನವರಿ 02: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್ ಎ ತೊಯಿಬಾ (ಎಲ್ ಇಟಿ) ಸಂಘಟನೆಯ ಕಾರ್ಯಾಚರಣಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಯನ್ನು ಶನಿವಾರ ಪಾಕಿಸ್ತಾನದಲ್ಲಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ 61 ವರ್ಷದ ಲಖ್ವಿ ಮೇಲೆ ಲಾಹೋರ್ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಭಯೋತ್ಪಾದಕರಿಗೆ ನೆರವು ನೀಡಲು ಲಖ್ವಿ ಔಷಧಾಲಯ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಔಷಧಾಲಯದ ಮೂಲಕ ಲಖ್ವಿ ಹಾಗೂ ಇನ್ನಿತರರು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದರು ಎನ್ನಲಾಗಿದೆ.

26/11 ಮುಂಬೈ ದಾಳಿ ಮಾಸ್ಟರ್‌ಮೈಂಡ್ ಬಗ್ಗೆ ಮಾಹಿತಿ ಕೊಟ್ಟರೆ 5 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕಾ26/11 ಮುಂಬೈ ದಾಳಿ ಮಾಸ್ಟರ್‌ಮೈಂಡ್ ಬಗ್ಗೆ ಮಾಹಿತಿ ಕೊಟ್ಟರೆ 5 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕಾ

ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖ್ವಿ 2015ರಿಂದಲೂ ಜಾಮೀನಿನ ಮೇಲೆ ಇದ್ದ. ಶನಿವಾರ ಈತನನ್ನು ಬಂಧಿಸಲಾಗಿದ್ದು, ಪಾಕಿಸ್ತಾನದ ಯಾವ ಸ್ಥಳದಲ್ಲಿ ಈತನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಭಯೋತ್ಪಾದನಾ ನಿಗ್ರಹ ಇಲಾಖೆ ಬಹಿರಂಗಪಡಿಸಿಲ್ಲ. ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Mumbai Attack Mastermind Zaki ur Rehman Lakhvi Arrested In Pakistan

ನವೆಂಬರ್ 26, 2008ರಂದು ಮುಂಬೈನ 12 ಪ್ರದೇಶಗಳಲ್ಲಿ ದಾಳಿ ಮಾಡಿದ ಪಾಕಿಸ್ತಾನ ಮೂಲದ 10 ಉಗ್ರರು ಹತ್ಯಾಕಾಂಡವನ್ನು ಸೃಷ್ಟಿಸಿದ್ದರು. ತಾಜ್ ಮಹಲ್ ಹೋಟೆಲ್, ಒಬೆರಾಯ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ (ಚಾಬಾದ್) ಮನೆ, ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ಮೇಲೆ ನಡೆದ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು.

English summary
Mumbai attack mastermind and Lakshar-e-Taiba (LeT) operations commander Zaki-ur-Rehman Lakhvi was arrested in Pakistan on terror financing charges,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X