• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಲಿಬಾನಿ ಉಗ್ರರಿಗೆ ಹೊಸ ನಾಯಕನಾದ ಯಾಕೂಬ್!

|

ಕಾಬೂಲ್, ಜೂನ್ 03: ಒಸಾಮಾ ಬಿನ್ ಲಾಡೆನ್ ಬಲಗೈ ಬಂಟ ಮುಲ್ಲಾ ಒಮರ್ ಮಗ ಮುಲ್ಲಾ ಯಾಕೂಬ್ ಕೈಗೆ ಈಗ ತಾಲಿಬಾನಿ ಉಗ್ರ ಸಂಘಟನೆಯ ಪೂರ್ಣ ಜವಾಬ್ದಾರಿ ಸಿಕ್ಕಿದೆ. ಕೊವಿಡ್ 19 ನಿಂದ ಅನೇಕ ಉಗ್ರ ಮುಖಂಡರು ಕಂಗಾಲಾಗಿದ್ದಾರೆ. ಉಗ್ರ ಚಟುವಟಿಕೆಗಳು ನಿಂತಿವೆ.

ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶಕ ರಹಮತುಲ್ಲಾ ನಬಿಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕ್ವೆಟ್ಟಾದಲ್ಲಿರುವ ಹಿರಿಯ ನಾಯಕರನ್ನು ದುರ್ಬಲಗೊಳಿಸಲು ಪಾಕಿಸ್ತಾನದ ಐಎಸ್ಐ ಯತ್ನಿಸುತ್ತಿದ್ದು, ಸದ್ಯಕ್ಕೆ ಮುಲ್ಲಾ ಯಾಕೂಬ್ ತಾಲಿಬಾನಿಗಳಿಗೆ ನಾಯಕರಾಗಿದ್ದಾರೆ ಎಂದಿದ್ದಾರೆ.

ಒಸಾಮಾ ಬಿನ್ ಲಾಡೆನ್ 'ಸೆಕ್ಸ್ ಫೈಲ್ಸ್' ಬಚ್ಚಿಟ್ಟ ಅಮೆರಿಕ

ತಾಲಿಬಾನ್ ಉಗ್ರ ಸಂಘಟನೆಯ ಕಮ್ಯಾಂಡರ್ ಮುಲ್ಲಾ ಒಮರ್ ಸಾವಿನ ಸುದ್ದಿಯನ್ನು ಹಲವು ವರ್ಷಗಳ ಬಚ್ಚಿಡಲಾಗಿತ್ತು. ತಾಲಿಬಾನ್ ನಾಯಕ ಒಮರ್ ಗುಂಡಿನ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ ಎಂದು ಅಫ್ಘಾನ್ ನ್ಯೂಸ್ ಔಟ್ ಲೆಟ್, ಟಿಒಎಲ್‌ಒ ನ್ಯೂಸ್ 2011ರಲ್ಲಿ ವರದಿ ಮಾಡಿತ್ತು. ಅಫ್ಘಾನಿಸ್ತಾನದ ಉತ್ತರ ವಾಜಿರಸ್ತಾನ್‌ನಲ್ಲಿ ಮುಲ್ಲಾ ಒಮರ್ ಸಾವನ್ನಪ್ಪಿದ್ದಾನೆ, ಈತನನ್ನು ಅಮೆರಿಕದ ಯೋಧರು ಕೊಂದಿರಬಹುದು ಎನ್ನಲಾಗಿತ್ತು.

ಆದರೆ, ತೆಹ್ರೆಕ್-ಇ-ತಾಲಿಬಾನ್ ಮುಲ್ಲಾ ಒಮರ್ ಸಾವನ್ನು ನಿರಾಕರಿಸಿತ್ತು. ಅಮೆರಿಕದ ತನಿಖಾ ಏಜೆನ್ಸಿ ಎಫ್‌ಬಿಐಗೆ ಒಸಾಮಾ ನಂತರ ಮುಲ್ಲಾ ಒಮರ್ ಎರಡನೇ ಟಾರ್ಗೆಟ್ ಆಗಿದ್ದ. 2001ರಲ್ಲಿ ಅಮೆರಿಕ ಜೋಡಿ ಕಟ್ಟಡದ ಮೇಲೆ ದಾಳಿ ನಡೆಸಿದ ನಂತರ ಈತನೇ ಲಾಡೆನ್‌ನನ್ನು ಗೌಪ್ಯವಾಗಿಟ್ಟಿದ್ದ ಎಂಬ ಸುದ್ದಿಯಿದೆ.

English summary
Mullah Omar's son Mullah Yakub has taken over as the interim commander of the Taliban in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X