ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕೆ ಸುದ್ದಿಗೆ ಹೊಸಬರಲ್ಲ, ಆದರೂ ಅಂದು ಕಣ್ಣೀರಾದದ್ದು ಸುಮ್ನೆ ಅಲ್ಲ!

|
Google Oneindia Kannada News

ಆಕೆ ಹೆಸರು ರಕೆಲ್ ಮಡೋ. ಎಂಎಸ್ ಎನ್ ಬಿಸಿ ಚಾನೆಲ್ ನಲ್ಲಿ ಸುದ್ದಿ ವಾಚಕಿ. ಸುದ್ದಿಯು ಆಕೆಗೆ ಹೊಸತಲ್ಲ. ಇನ್ನು ಭೀಕರ ಸುದ್ದಿಯನ್ನು ಜನರ ಮುಂದಿಡುವುದು ಕೂಡ ಹೊಸತಲ್ಲವೇ ಅಲ್ಲ. ಆದರೆ ಮೊನ್ನೆ ಮಂಗಳವಾರ ರಾತ್ರಿ ಆ ಸುದ್ದಿ ಬಗ್ಗೆ ಹೇಳುವಾಗ ಕಣ್ಣೀರಾದರು. ಗದ್ಗದಿತರಾದರು. ಇನ್ನೇನೋ ಬಾಕಿ ಇದೆ ಎನ್ನುವಾಗಲೇ ತಮ್ಮ ಮಾತು ನಿಲ್ಲಿಸಿಯೇ ಬಿಟ್ಟರು.

ಸಣ್ಣ ವಯಸ್ಸಿನ ಹಲವು ಮಕ್ಕಳನ್ನು ಅಮೆರಿಕದ ಟೆಕ್ಸಾಸ್ ನಲ್ಲಿರುವ ವಲಸಿಗರ ತಾಣಕ್ಕೆ ಕಳುಹಿಸಲಾಗುತ್ತಿದೆ ಎಂಬುದು ಆ ಸುದ್ದಿಯಾಗಿತ್ತು. ಪೋಷಕರಿಂದ ಬಲವಂತವಾಗಿ ದೂರ ಮಾಡಿ, ಆ ಮಕ್ಕಳನ್ನು ಅಲ್ಲಿಗೆ ಬಿಡುವುದು ಸುದ್ದಿ. ಮಡೋ ಎಪಿ ವರದಿಯನ್ನು ಓದಲು ಆರಂಭಿಸಿದರು, ಮಕ್ಕಳು ಮತ್ತು ಸಣ್ಣ ವಯಸ್ಸಿನ ಬಾಲಕರು ಎಂದು ಹೇಳುವಷ್ಟರಲ್ಲಿ ಧ್ವನಿ ಕಂಪಿಸಿತು. ಕಣ್ಣಂಚಿನಲ್ಲಿ ನೀರು.

MSNBC anchor Rachel Maddow get schoked up on Live TV

ಆದರೂ ಸುದ್ದಿ ಮುಂದುವರಿಸಲು ಯತ್ನಿಸಿದರು. ಗ್ರಾಫಿಕ್ ಹಾಕುವಂತೆ ತಮ್ಮ ತಂಡಕ್ಕೆ ಹೇಳಿದರು. ಇನ್ನು ಭಾವನೆಯನ್ನು ಹಿಡಿದಿಡಲು ಸಾಧ್ಯವೇ ಇಲ್ಲ ಎಂದೆನಿಸಿದಾಗ ತಮ್ಮ ಷೋ ಅವತ್ತಿಗೆ ಅಲ್ಲಿಗೇ ಕೊನೆ ಮಾಡಿದರು. ಆ ವಿಡಿಯೋ ಈಗ ವೈರಲ್ ಆಗಿದೆ.

ಆ ನಂತರ, ಘಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಆಕೆ ಕ್ಷಮೆ ಕೇಳಿದ್ದಾರೆ. ಟಿವಿಯಲ್ಲಿ ಇರುವಾಗ ಮಾತನಾಡಬೇಕಾದದ್ದು ನನ್ನ ಕೆಲಸ ಎಂದಿದ್ದಾರೆ. ತಾವು ಓದಬೇಕಿದ್ದ ವರದಿಯನ್ನು ಪೂರ್ತಿ ಮಾಡಿ ಎರಡನೇ ಕ್ಷಮೆಯ ಜತೆ ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದಾರೆ.

English summary
The acclaimed MSNBC anchor Rachel Maddow get shocked up on Live TV While Describing Children at "Tender Age" Migrant Shelters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X