ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿಸ್ ಶ್ರೀಲಂಕಾ'ಳ ಕಿರೀಟ ಕಸಿದು ರನ್ನರ್‌ಅಪ್‌ಗೆ ತೊಡಿಸಿದ ಮಾಜಿ ವಿಜೇತೆ!: ವೈರಲ್ ವಿಡಿಯೋ

|
Google Oneindia Kannada News

ಕೊಲಂಬೋ, ಏಪ್ರಿಲ್ 8: ಶ್ರೀಲಂಕಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದರ ವಿಜೇತರನ್ನು ಬದಲಿಸಿದ ಘಟನೆ ತೀವ್ರ ಗದ್ದಲ ಸೃಷ್ಟಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾನುವಾರ ನಡೆದ ಸ್ಪರ್ಧೆಯಲ್ಲಿ ಪುಷ್ಪಿಕಾ ಡಿ ಸಿಲ್ವಾ ಅವರು ಮಿಸ್ ಶ್ರೀಲಂಕಾ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಅವರು ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಕಿರೀಟ ಮುಡಿಗೇರಿಸಿಕೊಂಡ ಕೆಲವೇ ಸಮಯದಲ್ಲಿ ಮಿಸ್ ವರ್ಲ್ಡ್ ಮತ್ತು 2019ರ ಮಿಸ್ ಶ್ರೀಲಂಕಾ ವಿಜೇತೆ ಕ್ಯಾರೊಲಿನ್ ಜೂರಿ ಅವರು ಪುಷ್ಪಿಕಾ ಅವರಿಂದ ಕಿರೀಟ ಕಿತ್ತು ಅದನ್ನು ಮೊದಲ ರನ್ನರ್ ಅಪ್ ತಲೆಯ ಮೇಲೆ ಇರಿಸಿದ್ದಾರೆ.

ಮಿಸ್ ಇಂಡಿಯಾ ಕಿರೀಟ ಧರಿಸಿದ ತೆಲಂಗಾಣದ ಇಂಜಿನಿಯರ್ಮಿಸ್ ಇಂಡಿಯಾ ಕಿರೀಟ ಧರಿಸಿದ ತೆಲಂಗಾಣದ ಇಂಜಿನಿಯರ್

ಪುಷ್ಪಿಕಾ ಅವರನ್ನು ವಿಜೇತೆ ಎಂದು ಘೋಷಿಸಿದಾಗ ಸಂಪ್ರದಾಯದಂತೆ ಮಾಜಿ ಮಿಸ್ ಶ್ರೀಲಂಕಾ ಕ್ಯಾರೊಲಿನ್ ಜೂರಿ ಅವರು ವೇದಿಕೆ ಮೇಲೆ ತೆರಳಿ ಕಿರೀಟ ತೊಡಿಸಿದ್ದರು. ಪುಷ್ಪಿಕಾ ಸಂಭ್ರಮದಿಂದ ಫೋಟೊಗಳಿಗೆ ಪೋಸ್ ನೀಡಿದ್ದರು. ಆದರೆ ಪುನಃ ವೇದಿಕೆ ಮೇಲೆ ಏರಿದ ಕ್ಯಾರೊಲಿನ್, ಮಿಸ್ ಶ್ರೀಲಂಕಾ ಪದವಿಯನ್ನು ವಿವಾಹಿತ ಮಹಿಳೆಯರಿಗೆ ಮಾತ್ರವೇ ಪಡೆಯಬಹುದು. ಪುಷ್ಪಿಕಾ ಅವರು ವಿಚ್ಚೇದಿತೆಯಾಗಿರುವುದರಿಂದ ಅವರು ಇದಕ್ಕೆ ಅರ್ಹರಲ್ಲ ಎಂದು ಹೇಳಿದರು.

 Mrs World 2019 Caroline Jurie Snatches Mrs Sri Lanka Winners Crown Off Her Head

'ನೀವು ವಿವಾಹಿತರಾಗಿರಬೇಕು ಮತ್ತು ವಿಚ್ಚೇದನ ಪಡೆದುಕೊಂಡಿರಬಾರದು ಎಂಬ ನಿಯಮವಿದೆ. ಹೀಗಾಗಿ ಈ ಕಿರೀಟವು ಮೊದಲ ರನ್ನರ್ ಅಪ್‌ಗೆ ಸಿಗಬೇಕು ಎಂದು ನಾನು ನನ್ನ ಮೊದಲ ನಡೆ ಅನುಸರಿಸುತ್ತೇನೆ' ಎಂದ ಕ್ಯಾರೊಲಿನ್, ಪುಷ್ಪಿಕಾ ಅವರಿಂದ ಕಿರೀಟ ಕಸಿದು ಮೊದಲ ರನ್ನರ್ ಅಪ್‌ಗೆ ತೊಡಿಸಿದರು. ಇದರಿಂದ ಅವಮಾನಿತರಾದ ಪುಷ್ಪಿಕಾ ವೇದಿಕೆಯಿಂದ ಸೀದಾ ಹೊರನಡೆದರು.

'ಇದು ಶ್ರೀಲಂಕಾ ಮಾತ್ರವಲ್ಲ, ಜಗತ್ತಿನಲ್ಲಿಯೇ ಮೊದಲ ಬಾರಿ ನಡೆದ ಘಟನೆ ಎನಿಸುತ್ತದೆ. ನನ್ನ ತಲೆಯಿಂದ ಕಿರೀಟ ಕಸಿದುಕೊಂಡು ಎಲ್ಲರೆದುರು ಅವಮಾನಿಸಿದಾಗಲೂ ನಾನು ತಲೆ ಎತ್ತಿ ನಡೆದಿದ್ದೆ. ನಾನು ವಿಚ್ಚೇದಿತಳಲ್ಲ. ಹಾಗೆ ಆಗಿದ್ದರೆ ಅದರ ಮಾಹಿತಿಯನ್ನು ಧೈರ್ಯವಾಗಿ ನೀಡುತ್ತಿದ್ದೆ' ಎಂದು ಪುಷ್ಪಿಕಾ ತಿಳಿಸಿದ್ದಾರೆ.

ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಬೀದರ್ ಬೆಡಗಿ ನಿಶಾಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಬೀದರ್ ಬೆಡಗಿ ನಿಶಾ

ಈ ಗಲಾಟೆ, ಗದ್ದಲಗಳ ಬಳಿಕ ಕಿರೀಟವನ್ನು ಪುಷ್ಪಿಕಾ ಅವರಿಗೆ ಮಂಗಳವಾರ ಮರಳಿಸಲಾಗಿದೆ ಎಂದು ಮಿಸ್ ಶ್ರೀಲಂಕಾ ವರ್ಲ್ಡ್‌ನ ರಾಷ್ಟ್ರೀಯ ನಿರ್ದೇಶಕ ಚಂಡಿಮಾಲ್ ಜಯಸಿಂಘೆ ತಿಳಿಸಿದ್ದಾರೆ. 'ಕ್ಯಾರೊಲಿನ್ ಜೂರಿ ಅವರು ವೇದಿಕೆಯಲ್ಲಿ ವರ್ತಿಸಿದ ಬಗೆ ಅವಮಾನಕರ. ಮಿಸ್ ವರ್ಲ್ಡ್ ಸಂಸ್ಥೆಯು ಈಗಾಗಲೇ ಇದರ ಬಗ್ಗೆ ತನಿಖೆ ಆರಂಭಿಸಿದೆ' ಎಂದು ಅವರು ಹೇಳಿದ್ದಾರೆ.

English summary
Mrs World 2019 Caroline Jurie snatches Mrs Sri Lanka winner Pushpika De Silva's crown off her head and awrded it to the first runner up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X