ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕನ್ನು ಕೊಲ್ಲಲು ಬರಲಿದೆ ಮೌತ್ ಸ್ಪ್ರೇ

|
Google Oneindia Kannada News

ಕೊರೊನಾ ವೈರಸ್‌ಗೆ ಲಸಿಕೆ ಹಾಗೂ ಚಿಕಿತ್ಸೆ ಸಂಶೋಧನೆ ನಡಯುತ್ತಿರುವ ಬೆನ್ನಲ್ಲೇ ಸ್ವೀಡನ್ ಕಂಪನಿಯೊಂದು ಸೋಂಕು ಹರಡುವಿಕೆ ತಡೆಯುವುದರ ಬಗ್ಗೆ ಹೊಸ ಔಷಧಿಯ ಸಂಶೋಧನೆ ಮಾಡಿದೆ.

Recommended Video

ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ | Oneindia Kannada

ಸ್ವೀಡನ್ ಫಾರ್ಮಾ ಕಂಪನಿಯೊಂದು ಸಂಶೋಧನೆ ಮಾಡಿರುವ ಮೌತ್ ಸ್ಪ್ರೇನಿಂದ ಶೇ.98.3ರಷ್ಟು ಕೊರೊನಾ ಸೋಂಕನ್ನು ಕೊಲ್ಲಬಹುದಾಗಿದೆ ಎಂದು ಹೇಳಿದೆ.

9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಸಜ್ಜಾದ ಬ್ರಿಟನ್9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಸಜ್ಜಾದ ಬ್ರಿಟನ್

ಕೊರೊನಾ ಮೊದಲ ಹಾಗೂ ಎರಡನೇ ಹಂತದಲ್ಲಿರುವ ಸೋಂಕಿತರು ಈ ಸ್ಪ್ರೇ ಬಳಸುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ಸಧ್ಯಕ್ಕೆ ಲಸಿಕೆ ಸಿಗದೆ ಇರುವ ಹಿನ್ನೆಲೆಯಲ್ಲಿ ರೋಗ ಹರಡುವಿಕೆಯನ್ನು ತಡೆಯಲು ಇದು ಉತ್ತಮ ವಿಧಾನ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಸ್ವೀಡನ್ ಕಂಪನಿಯಿಂದ ಪ್ರಯೋಗ

ಸ್ವೀಡನ್ ಕಂಪನಿಯಿಂದ ಪ್ರಯೋಗ

ಸ್ವೀಡನ್ ಕಂಪನಿ ಆಂಜಿಮೆಟಿಕಾ ಈ ಸಂಶೋಧನೆ ಮಾಡಿದ್ದು, ಈ ಮೌತ್ ಸ್ಪ್ರೇಗೆ ಕೋಲ್ಡ್‌ಜೈಮ್ ಎಂದು ನಾಮಕರಣ ಮಾಡಿದೆ. ಈಗಾಗಲೇ ನೂರು ಜನರ ಮೇಲೆ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಸುಮಾರು 20 ನಿಮಿಷಗಳಲ್ಲಿ ವೈರಸ್ ಸಾಯಲಿದೆ

ಸುಮಾರು 20 ನಿಮಿಷಗಳಲ್ಲಿ ವೈರಸ್ ಸಾಯಲಿದೆ

ಸುಮಾರು 20 ನಿಮಿಷದಲ್ಲಿ ವೈರಸ್ ಸಾಯಲಿದೆ. ಇದರಿಂದ ಆರಂಭಿಕ ಹಂತದ ಕೊರೊನಾ ಸೋಂಕಿತರು ಸೋಂಕು ಹರಡುವುದು ತಪ್ಪಲಿದೆ. ಜತೆಗೆ ದೇಹದ ಇತರೆ ಭಾಗಗಳಿದೆ ಕೊರೊನಾ ವೈರಸ್ ಹರಡುವುದನ್ನು ಕೂಡ ತಪ್ಪಿಸಿಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಮೌತ್ ಸ್ಪ್ರೇನಿಂದ ಯಾವುದೇ ಅಡ್ಡ ಪರಿಣಾಮವಿಲ್ಲ

ಮೌತ್ ಸ್ಪ್ರೇನಿಂದ ಯಾವುದೇ ಅಡ್ಡ ಪರಿಣಾಮವಿಲ್ಲ

ವಿಜ್ಞಾನಿಗಳು ಹೇಳುವ ಪ್ರಕಾರ ಮೌತ್ ಸ್ಪ್ರೇನಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ, ಅಮೆರಿಕದ ಕಂಪನಿ ಜೊತೆಗೆ ಸೇರಿ ಈ ಸಂಶೋಧನೆ ಮಾಡಿದೆ. ಸಧ್ಯದಲ್ಲೇ ಮಾರುಕಟ್ಟೆಗೆ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸೋಂಕು ಹರಡುವಿಕೆ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ

ಸೋಂಕು ಹರಡುವಿಕೆ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ

ಸೋಂಕು ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲಾಗದದ್ದರೂ ಕೆಲ ಪ್ರಮಾಣದಲ್ಲಿ ರೋಗ ಹರಡುವಿಕೆಯನ್ನು ತಡೆಗಟ್ಟ ಬಹುದು. ಲಕ್ಷಣಗಳಿಲ್ಲದಿದ್ದರೂ ಸೋಂಕು ಇರುವಂಥವರು ಈ ಸ್ಪ್ರೇಯನ್ನು ಬಳಸುವುದರಿಂದ ಸೋಂಕು ಬೇರೆಯವರಿಗೆ ಹರಡುವುದನ್ನು ತಡೆಗಟ್ಟಬಹುದಾಗಿದೆ. ಆದರೆ ಈ ಮೌತ್ ಸ್ಪ್ರೇ ದರವೆಷ್ಟು, ಸಾಮಾನ್ಯ ಜನರು ಇದನ್ನು ಕೊಳ್ಳಬಹುದೇ ಎಂಬುದರ ಕುರಿತು ಇನ್ನೂ ಮಾಹಿತಿ ಬರಬೇಕಿದೆ.

English summary
Making a revolutionary claim, Swedish scientists say that one of their homegrown drugs, used to beat common cold can effectively root out 98.3% of COVID-19 causing viruses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X