ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕೃತಿ ಜೊತೆ ಲೀನವಾದ ಪರ್ವತಾರೋಹಿ ಮಸ್ತಾನ್

By Mahesh
|
Google Oneindia Kannada News

ನವದೆಹಲಿ, ಏ.4: ಪ್ರತಿಯೊಬ್ಬ ಪರ್ವತಾರೋಹಿಗೂ ಅತಿ ಹೆಚ್ಚು ಎತ್ತರದ ಸಮೀಟ್ ಪೂರ್ಣಗೊಳಿಸಬೇಕು ಎಂಬ ಗುರಿ ಇರುತ್ತದೆ. ಸಮುದ್ರಮಟ್ಟದಿಂದ ಎತ್ತರಕ್ಕೆ ಏರುತ್ತಿದ್ದಂತೆ ಪ್ರಾಣವಾಯು ಕೈಗೊಡುತ್ತಿರುತ್ತದೆ, ನಿರಂತರವಾಗಿ ಪ್ರಕೃತಿ ಜೊತೆ ಕಾದಾಡುತ್ತಾ ಜೀವ ಉಳಿಸಿಕೊಂಡರೆ ಅದೇ ದೊಡ್ಡ ಸಾಧನೆ. ಭಾರತದ ಖ್ಯಾತ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರು ಅಂಡೇಸ್ ಪರ್ವತಕ್ಕೆ ಅರ್ಪಿತವಾಗಿ ಬಿಟ್ಟಿದ್ದಾರೆ.

ಆಂಧ್ರಪ್ರದೇಶ ಮೂಲದ ಈ ಸಾಹಸಿ ಅತ್ಯಂತ ವೇಗವಾಗಿ ಏಳು ಸಮೀಟ್ ಪೂರೈಸಿದ ಖ್ಯಾತ ಹೊಂದಿದ್ದರು.ಅರ್ಜೆಂಟಿನಾ ಮತ್ತು ಚಿಲಿ ನಡುವಿನ ಎತ್ತರದ ಪರ್ವತಗಳನ್ನು ಹತ್ತಲು ಆರಂಭಿಸಿದ್ದ ಮಸ್ತಾನ್ ಅವರು ಮಾ.24ರಿಂದ ಕಾಣೆಯಾಗಿದ್ದರು. ಮಸ್ತಾನ್ ಅವರನ್ನು ಹುಡುಕಿಕೊಡುವಂತೆ ವಿದೇಶಾಂಗ ಸಚಿವಾಲಯ, ಭಾರತ ಸರ್ಕಾರಕ್ಕೆ ಆಗ್ರಹಿಸಿ ಮಸ್ತಾನ್ ಅವರ ಗೆಳೆಯರು ಫೇಸ್ ಬುಕ್ ನಲ್ಲಿ ಅಭಿಯಾನ ಆರಂಭಿಸಿದ್ದರು. [ವಿಡಿಯೋ: ಸಾಹಸಿ ಮಲ್ಲಿ ಮಸ್ತಾನ್ ಸಾವಿನ ಸುದ್ದಿ]

ನಂತರ ಅರ್ಜೆಂಟೀನಾ ಮತ್ತು ಚಿಲಿ ನಡುವಿನ ಆಂಡೆಸ್ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ತಂಡ ಶೋಧ ಕಾರ್ಯಾಚರಣೆ ನಡೆಸಲಾಯಿತು. ಅದರೆ, ಶನಿವಾರ ಮಸ್ತಾನ್ ಮೃತದೇಹ ಪತ್ತೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಆಂಡಸ್ ಪರ್ವತ ಶ್ರೇಣಿಯ ಸಮುದ್ರಮಟ್ಟದಿಂದ 21,478 ಅಡಿ ಎತ್ತರವಿರುವ ಸೆರೊ ಟ್ರೆಸ್ ಕ್ರೂಸ್ ಸರ್ ಪರ್ ಪರ್ವತಾರೋಹಣಕ್ಕೆ ಮಸ್ತಾನ್ ಮುಂದಾಗಿದ್ದರು. ಆಂಧ್ರಪ್ರದೇಶದ ನೆಲ್ಲೂರು ಮೂಲದ ತಿರುಪತಿ ನಿವಾಸಿ 40 ವರ್ಷ ವಯಸ್ಸಿನ ಮಸ್ತಾನ್ ಅವರು ಅನೇಕ ದಾಖಲೆಗಳನ್ನು ನಿರ್ಮಿಸಿ ಯುವ ಪರ್ವತಾರೋಹಿಗಳಿಗೆ ಸ್ಪೂರ್ತಿಯಾಗಿದ್ದರು.

ಅನೇಕ ದಾಖಲೆಗಳನ್ನು ನಿರ್ಮಿಸಿದ್ದ ಮಸ್ತಾನ್

ಅನೇಕ ದಾಖಲೆಗಳನ್ನು ನಿರ್ಮಿಸಿದ್ದ ಮಸ್ತಾನ್

ಆಂಡಸ್ ಪರ್ವತ ಶ್ರೇಣಿಯ ಸಮುದ್ರಮಟ್ಟದಿಂದ 21,478 ಅಡಿ ಎತ್ತರವಿರುವ ಸೆರೊ ಟ್ರೆಸ್ ಕ್ರೂಸ್ ಸರ್ ಪರ್ ಪರ್ವತಾರೋಹಣಕ್ಕೆ ಮಸ್ತಾನ್ ಮುಂದಾಗಿದ್ದರು. ಆಂಧ್ರಪ್ರದೇಶದ ನೆಲ್ಲೂರು ಮೂಲದ ತಿರುಪತಿ ನಿವಾಸಿ 40 ವರ್ಷ ವಯಸ್ಸಿನ ಮಸ್ತಾನ್ ಅವರು ಅನೇಕ ದಾಖಲೆಗಳನ್ನು ನಿರ್ಮಿಸಿ ಯುವ ಪರ್ವತಾರೋಹಿಗಳಿಗೆ ಸ್ಪೂರ್ತಿಯಾಗಿದ್ದರು.

ವಿಶ್ವ ದಾಖಲೆ ನಿರ್ಮಿಸಿದ ಭಾರತದ ವೀರ

ವಿಶ್ವ ದಾಖಲೆ ನಿರ್ಮಿಸಿದ ಭಾರತದ ವೀರ

2006ರಲ್ಲಿ 172 ದಿನಗಳಲ್ಲಿ (ಜ.19 ರಿಂದ ಜು.10) ವಿಶ್ವ ಅತಿ ಎತ್ತರದ ಪರ್ವತ ಗಳ 7 ಸಮೀಟ್ ಪೂರೈಸಿ ದಾಖಲೆ ಬರೆದಿದ್ದರು. ಇವುಗಳಲ್ಲಿ ಉತ್ತರ ಅಮೆರಿಕದ ಮೌಂಟ್‌ ದೆನಾಲಿ, ಅಂಟಾರ್ಟಿಕಾದ ಮೌಂಟ್‌ ವಿನ್ಸರ್‌ ಮಾಸ್ಸಿಫ್‌, ಆಸ್ಟ್ರೇಲಿಯಾದ ಕೊಸಸಿಯೋಸ್ಕೋ ಮತ್ತು ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಸೇರಿದೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ವ್ಯಕ್ತಿ. ಆಂಧ್ರಪ್ರದೇಶ ಹಾಗೂ ಭಾರತದಿಂದ ಈ ಪರ್ವತಗಳನ್ನು 2002ರ ಐಐಎಂ ಪಾಸ್ ಔಟ್ ಆಗಿದ್ದ ಮಸ್ತಾನ್ ಅವರು ಐಐಟಿ ಖರಗ್ ಪುರದ ಪದವೀಧರರೂ ಆಗಿದ್ದರು.

ವಿದೇಶಾಂಗ ಇಲಾಖೆಯಿಂದ ಅಧಿಕೃತ ಹೇಳಿಕೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರಿಂದ ಟ್ವೀಟ್

ಟ್ವಿಟ್ಟರ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಕೆ

ಭಾರತದ ಪರ್ವತಾರೋಹಿ ಮಸ್ತಾನ್ ಸಾವಿಗೆ ಕಂಬನಿ ಮಿಡಿದ ಟ್ವಿಟ್ಟರ್ ಲೋಕದ ಪ್ರಜೆಗಳು

ಸಾಹಸಿಗಳ ಬದುಕಿನ ಕಥೆ ಇಷ್ಟೆ

ಸಾಹಸಿಗಳ ಬದುಕಿನ ಕಥೆ ಇಷ್ಟೆ.. ಅದರೆ, ಸಾಹಸ ಯಾತ್ರೆಯ ನಡುವಿನಲ್ಲೇ ಸಾವನ್ನಪ್ಪುವುದು ಕೂಡಾ ಸಾಧನೆ. ಅದರೆ, ಭಾರತ ಸರ್ಕಾರದಿಂದ ಇಂಥ ಸಾಹಸಿಗಳಿಗೆ ಹೆಚ್ಚಿನ ನೆರವು ಅಗತ್ಯವಿದೆ ಎಂದು ಮಸ್ತಾನ್ ಅವರ ಸೋದರಿ ಡಾ. ದರೋಸಮ್ಮ ಅಭಿಪ್ರಾಯಪಟ್ಟಿದ್ದಾರೆ.

ಮಸ್ತಾನ್ ಅವರ ಬದುಕಿನ ಪ್ರಮುಖ ಸಾಧನೆಗಳು

ಮಸ್ತಾನ್ ಅವರ ಬದುಕಿನ ಪ್ರಮುಖ ಸಾಧನೆಗಳ ಪರಿಚಯ ಇಲ್ಲಿದೆ

English summary
Top Indian mountaineer Malli Mastan Babu, who had achieved the feat of becoming the "fastest seven summiteer" in the world has been found dead. Babu was missing since March 24 after he went on a climb up the Andes high mountains between Argentina and Chile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X