ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಿನ್ನ ಸಿಕ್ತು ಚಿನ್ನ': ಗುದ್ದಲಿ ಹಿಡಿದು ಬೆಟ್ಟದತ್ತ ಓಡಿದ ಗ್ರಾಮಸ್ಥರು!

|
Google Oneindia Kannada News

ಲುಹಿಹಿ, ಮಾರ್ಚ್ 7: ಆಫ್ರಿಕಾದಲ್ಲಿನ ಕಾಂಗೊ ಗಣರಾಜ್ಯದಲ್ಲಿ ಜನರು ಗುದ್ದಲಿ, ಚೀಲಗಳನ್ನು ಹಿಡಿದು ಬೆಟ್ಟದತ್ತ ಗುಂಪುಗೂಡಿ ಓಡುತ್ತಿದ್ದಾರೆ. ಅಲ್ಲಿನ ಮಣ್ಣು ಅಗೆದು ಹಿಡಿ ಹಿಡಿಯಾಗಿ ಅದನ್ನು ಸೋಸಿ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ. ಆ ಮಣ್ಣಿನಲ್ಲಿ ಅಂತಹದು ಏನಿದೆ? ಅದು ಬರಿಯ ಮಣ್ಣಲ್ಲ. 'ಚಿನ್ನದ ಮಣ್ಣು'!

ನಿಜ ಕಾಂಗೋದ ಸೌತ್ ಕಿವು ಪ್ರಾಂತ್ಯದ ಗ್ರಾಮವೊಂದರ ಬೆಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪಗಳು ಇರುವುದು ಪತ್ತೆಯಾಗಿದೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಸುತ್ತಮುತ್ತಲಿನಿಮದಲೂ ದಂಡುಕಟ್ಟಿಕೊಂಡು ಬಂದ ಜನರು ಮಣ್ನು ಅಗೆದು ಚಿನ್ನ ಅರಸತೊಡಗಿದ್ದಾರೆ. ಇದು ದೊಡ್ಡ ಸಂಘರ್ಷ, ಅನಾಹುತಗಳಿಗೆ ಎಡೆಮಾಡಿಕೊಡುವ ಅಪಾಯ ಅರಿತ ಅಧಿಕಾರಿಗಳು, ಈ ಭಾಗದಲ್ಲಿ ಗಣಿಗಾರಿಕೆ ಮಾಡುವುದನ್ನು ನಿಷೇಧಿಸಿದ್ದಾರೆ.

ಮಂಡ್ಯದಲ್ಲಿ ಅಲ್ಪ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಮಂಡ್ಯದಲ್ಲಿ ಅಲ್ಪ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆ

ಕಾಂಗೋದ ಸೌತ್ ಕಿವು ಪ್ರಾಂತ್ಯದ ಲುಹಿಹಿ ಗ್ರಾಮದ ಬೆಟ್ಟದಲ್ಲಿ ಚಿನ್ನ ಸಮೃದ್ಧಿಯಾಗಿ ಇರುವುದು ಪತ್ತೆಯಾಗಿದೆ. ಇದನ್ನು ತಿಳಿದ ಗ್ರಾಮಸ್ಥರು ಅಲ್ಲಿ ದೌಡಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬೆಟ್ಟದ ಮಣ್ಣಿನಲ್ಲಿ ಶೇ 60-90ರಷ್ಟು ಚಿನ್ನವಿದೆ ಎಂದು ಹೇಳಲಾಗಿದೆ. ಮುಂದೆ ಓದಿ.

ವಿಡಿಯೊ ವೈರಲ್

ಗ್ರಾಮಸ್ಥರು ಗುದ್ದಲಿ ಮತ್ತು ಇತರೆ ಉಪಕರಣಗಳಿಂದ ಭೂಮಿಯನ್ನು ಅಗೆದು ಮಣ್ಣಿನಿಂದ ಚಿನ್ನ ಹೊರತೆಗೆಯುವುದರಲ್ಲಿ ಮಗ್ನರಾಗಿರುವುದು, ಇನ್ನು ಕೆಲವರು ತಮ್ಮ ಕೈಯಲ್ಲಿಯೇ ಮಣ್ಣು ಕೆದಕುವುದು ಮತ್ತೊಂದು ವಿಡಿಯೋದಲ್ಲಿ ಕಾಣಿಸಿದೆ.

ಗಣಿಗಾರಿಕೆಗೆ ನಿಷೇಧ

ಪ್ರಾಂತ್ಯದ ರಾಜಧಾನಿ ಬುಕಾವುದಿಂದ 50 ಕಿಮೀ ದೂರದಲ್ಲಿರುವ ಸಣ್ಣ ಗ್ರಾಮವಾದ ಲುಹಿಹಿಯಲ್ಲಿ ಚಿನ್ನದ ನಿಕ್ಷೇಪ ಇರುವುದು ಫೆಬ್ರವರಿಯಲ್ಲಿ ಪತ್ತೆಯಾಗಿತ್ತು. ಹೀಗೆ ಅಲ್ಲಿ ಮಣ್ಣು ಅಗೆಯುವವರ ಸಂಖ್ಯೆ ಹೆಚ್ಚಿದ್ದರಿಂದ ಆ ಹಳ್ಳಿಯ ಜನತೆ ಗೊಂದಲ, ಉಗ್ವೇದಗಳಿಗೆ ಒಳಗಾಗಿದ್ದರು. ಜನ ಈ ಚಟುವಟಿಕೆ ತಡೆಯಲು ಅಲ್ಲಿ ಮಣ್ಣು ಅಗೆದು ಚಿನ್ನ ಅರಸುವುದನ್ನು ನಿಷೇಧಿಸಲಾಗಿದೆ ಎಂದು ಸೌತ್ ಕಿವು ಗಣಿಕಾರಿಗೆ ಸಚಿವ ವೆನಾಂತ್ ಬರುಮೆ ಮುಹಿಗಿರ್ವಾ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?

ಮನೆಯಲ್ಲಿ ಚಿನ್ನ ಸಿದ್ಧ!

ಮನೆಯಲ್ಲಿ ಚಿನ್ನ ಸಿದ್ಧ!

'ರಿಪಬ್ಲಿಕ್ ಆಫ್ ಕಾಂಗೊದ ವಿಡಿಯೋ ಇದು. ಈ ದೇಶದ ಕೆಲವು ಗ್ರಾಮಗಳ ಜನರಿಗೆ ದೊಡ್ಡ ಅಚ್ಚರಿ ಕಾದಿತ್ತು. ಇಡೀ ಪರ್ವತ ಚಿನ್ನದಿಂದ ತುಂಬಿಕೊಂಡಿರುವುದು ಪತ್ತೆಯಾಗಿದೆ. ಜನರು ಭೂಮಿ ಅಗೆದು ಮಣ್ಣು ತೆಗೆದು ತಮ್ಮ ಮನೆಗಳಿಗೆ ಸಾಗಿಸಿ ಅಲ್ಲಿ ಕೊಳೆ ತೊಳೆದು ಚಿನ್ನ ಪಡೆದುಕೊಂಡಿದ್ದಾರೆ' ಎಂದು ಪತ್ರಕರ್ತ ಅಹ್ಮದ್ ಅಲ್ಗೊಹ್ಬರಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ನೋಂದಾಯಿತರಿಗೆ ಮಾತ್ರ ಅವಕಾಶ

ನೋಂದಾಯಿತರಿಗೆ ಮಾತ್ರ ಅವಕಾಶ

ಆಫ್ರಿಕಾದ ದೇಶಗಳಲ್ಲಿ ಕಸುಬುದಾರ ಚಿನ್ನದ ಗಣಿಗಾರಿಕೆ ಸಾಮಾನ್ಯವಾಗಿದೆ. ಇಲ್ಲಿ ಗಣಿಗಳಿಂದ ಖನಿಜ ಹೊರತೆಗೆಯಲು ವಿಶೇಷ ಯಂತ್ರಗಳಿಲ್ಲ. ಬದಲಾಗಿ ಸಾಮಾನ್ಯ ಗುದ್ದಲಿ, ಪಿಕಾಸಿಗಳನ್ನೇ ಅನೇಕ ಕಡೆ ಬಳಸಲಾಗುತ್ತದೆ. ಇಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವುದರಿಂದ ಸೂಕ್ತ ನೋಂದಾಯಿತ ಗಣಿ ಕಂಪೆನಿಗಳು ಮಾತ್ರವೇ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತದೆ. ಅಲ್ಲಿಯವರೆಗೂ ಇಲ್ಲಿ ಜನರು ಮಣ್ಣು ಅಗೆದು ಚಿನ್ನ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

English summary
A mountain of gold rich was discovered in Republic of Congo. Villagers seen flooding the mountain for mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X