• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನಸ ಸರೋವರ ಯಾತ್ರೆಗೆ ರಾಹುಲ್ ರನ್ನು ಕರೆಸಿಕೊಂಡಿದ್ದು ಯಾರು?!

|
   ರಾಹುಲ್ ಗಾಂಧಿಯನ್ನ ಕೈಲಾಸ ಮಾನಸ ಸರೋವರ ಯಾತ್ರೆಗೆ ಕರೆದದ್ದು ಯಾರು ಎಂದು ಟ್ವಿಟ್ಟರ್ ನಲ್ಲಿ ಬಹಿರಂಗ

   ಕಠ್ಮಂಡು, ಸೆಪ್ಟೆಂಬರ್ 05: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ಯಾತ್ರೆಗೆ ಕರೆಸಿಕೊಂಡಿದ್ದು ಯಾರು ಗೊತ್ತೆ?

   ಸ್ವತಃ ಕೈಲಾಸ ಪರ್ವತ! ಹೌದು, ಹಾಗೆಂದು ಅವರೇ ಟ್ವೀಟ್ ಮಾಡಿದ್ದಾರೆ. ಆಗಸ್ಟ್ 31 ರಂದು ಕೈಲಾಸ ಮಾನಸ ಸರೋವರ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ, ಕೈಲಾಸ ಪರ್ವತ ಮತ್ತು ಮಾನಸ ಸರೋವರ ಸುಂದರ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

   ಕೈಲಾಸ ಮಾನಸ ಯಾತ್ರೆಗೂ ಮುನ್ನ ಮಾಂಸಾಹಾರ ಸೇವಿಸಿದರೇ ರಾಹುಲ್?

   ಏಪ್ರಿಲ್ 26 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕೆಂದು ಹುಬ್ಬಳ್ಳಿಗೆ ಬಂದಿದ್ದ ರಾಹುಲ್ ಗಾಂಧಿ ಅವರ ವಿಮಾನ ಭಾರೀ ಅವಘಡದಿಂದ ಪಾರಾಗಿತ್ತು. ಅದಕ್ಕಾಗಿ ದೇವರ ಆಶೀರ್ವಾದ ಪಡೆಯಲು ರಾಹುಲ್ ಗಾಂಧಿ ಈ ಯಾತ್ರೆ ಕೈಗೊಂಡಿದ್ದಾರೆ.

   'ನನ್ನನ್ನು ಕರೆಸಿಕೊಂಡಿದ್ದು ಕೈಲಾಸ ಪರ್ವತ'

   "ಒಬ್ಬ ಮನುಷ್ಯ ಕೈಲಾಸ ಪರ್ವತಕ್ಕೆ ಹೋಗಬೇಕೆಂದರೆ, ಕೈಲಾಸ ಪರ್ವತವೇ ಆತನನ್ನು ಕರೆಸಿಕೊಳ್ಳುತ್ತದೆ. ನನಗೂ ಇಂಥ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಈ ಸುಂದರ ಯಾತ್ರೆಯ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

   ಅಸತೋ ಮಾ ಸದ್ಗಮಯ... ರಾಹುಲ್ ಗಾಂಧಿ ಹೊಸ ಟ್ವೀಟ್!

   'ಇಲ್ಲೆಲ್ಲೂ ದ್ವೇಷವಿಲ್ಲ!'

   'ಮಾನಸಸರೋವರದ ನೀರು ಶುದ್ಧ, ಪವಿತ್ರ ಮತ್ತು ಶಾಂತ. ಅದು ಎಲ್ಲವನ್ನೂ ನೀಡುತ್ತದೆ, ಆದರೆ ಏನನ್ನೂ ಕಿತ್ತುಕೊಳ್ಳುವುದಿಲ್ಲ. ಅದನ್ನು ಯಾರು ಬೇಕಾದರೂ ಕುಡಿಯಬಹುದು. ಇಲ್ಲಿ ಯಾವುದೇ ದ್ವೇಷವಿಲ್ಲ. ಇದಕ್ಕೆಂದೇ ನಾವು ಭಾರತೀಯರು ನೀರನ್ನು ಪೂಜಿಸುತ್ತೇವೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

   20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಇದ್ದ ವಿಮಾನ ಪತನವಾಗುತ್ತಿತ್ತು!

   ಮಾಂಸಾಹಾರದ ವಿವಾದ

   ಮಾಂಸಾಹಾರದ ವಿವಾದ

   ಮಾನಸ ಸರೋವರಕ್ಕೆ ತೆರಳುವ ಮುನ್ನ ನೇಪಾಳದ ಕಟ್ಮಂಡುವಿನ ಹೊಟೇಲ್ ವೊಂದರಲ್ಲಿ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಈ ಕುರಿತು ಬಿಜೆಪಿ ಮುಖಂಡರಲ್ಲಿ ಕೆಲವರು ರಾಹುಲ್ ಗಾಂಧಿ ಅವರ ಕಾಲೆಳೆಯುತ್ತಿದ್ದರು. ಆದರೆ ರಾಹುಲ್ ಮಾಂಸಾಹಾರವನ್ನು ಆರ್ಡರ್ ಮಾಡಿರಲೇ ಇಲ್ಲ ಎಂದು ನೇಪಾಳದ ಹೊಟೇಲ್ ಸ್ಪಷ್ಟೀಕರಣ ನೀಡಿತ್ತು.

   ರಾಹುಲ್ ಮಾನಸ ಸರೋವರ ಯಾತ್ರೆಗೆ ಹೋದರೆ ತಪ್ಪೇನು?

   ರಾಹುಲ್ ಗಾಂಧಿ ಅವರ ಮಾನಸ ಸರೋವರ ಯಾತ್ರೆಯ ಬಗ್ಗೆ ಬಿಜೆಪಿ ಮತ್ತು ಆರೆಸ್ಸಿಗರು ಇಷ್ಟೆಲ್ಲ ತಲೆಕೆಡಿಸಿಕೊಳ್ಳುತ್ತಿರುವುದೇಕೆ? ರಾಹುಲ್ ಗಾಂಧಿಯವರು ಯಾತ್ರೆಗೆ ಹೋದರೆ ತಪ್ಪೇನು? ಕೈಲಾಸ ಮಾನಸ ಸರೋವರ ಯಾತ್ರೆ ಕೇವಲ ಬಿಜೆಪಿ, ಆರೆಸ್ಸೆಸ್ಸಿಗರಿಗೆ ಮಾತ್ರ ಸಂಬಂಧಿಸಿದ್ದೇ? ಎಲ್ಲ ವಿಷಯವನ್ನು ವಿವಾದವಾಗಿಸುವುದೇಕೆ ಎಂದು ಟ್ವಿಟ್ಟರ್ ನಲ್ಲಿ ಕೆಲವರು ಪ್ರಶ್ನಿಸಿದ್ದಾರೆ.

   English summary
   Congress President Rahul Gandhi's latest tweet on his Kailash Mansarovar Yatra: A man goes to Kailash when it calls him. I am so happy to have this opportunity and to be able to share what I see on this beautiful journey with all of you.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X