ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರೆಕ್ಕಿಂಗ್ ನಿರ್ಬಂಧ ಹೇರಿದ ನೇಪಾಳ, ಟಿಬೇಟ್, ಚೀನಾ

|
Google Oneindia Kannada News

ಕಠ್ಮಂಡು, ಮಾರ್ಚ್ 17: ಕೊರೊನಾವೈರಸ್ ಭೀತಿಯಿಂದ ನೇಪಾಳ, ಮ್ಯಾನ್ಮಾರ್, ಭೂತನ್ ಗಡಿಯನ್ನು ಭಾರತ ಬಂದ್ ಮಾಡಿದೆ. ಇದಾದ ಬಳಿಕ ಚೀನಾ ಹಾಗೂ ನೇಪಾಳ ಕೂಡಾ ಗಡಿಯಲ್ಲಿ ಭದ್ರತೆ ಹೆಚ್ಚಿಸಿವೆ. ಈ ನಡುವೆ ಈ ಬೇಸಿಗೆ ಸೀಸನ್ ನಲ್ಲಿ ಮೌಂಟ್ ಎವೆರೆಸ್ಟ್ ಸೇರಿದಂತೆ ಇತರೆ ಪರ್ವತ ಪ್ರದೇಶಗಳಲ್ಲಿ ಚಾರಣ, ಸುತ್ತಾಟವನ್ನು ನಿರ್ಬಂಧಿಸಲಾಗಿದೆ. ಚೀನಾ ತನ್ನ ಗಡಿಯಲ್ಲಿ ಎಲ್ಲಾ ರೀತಿಯ ಪರ್ವತಾರೋಹಣ ಚಟುವಟಿಕೆಗಳನ್ನು ಬಂದ್ ಮಾಡಿದ್ದು, ಯಾವುದೇ ದೇಶದವರಿಗೂ ಅನುಮತಿ ನೀಡುತ್ತಿಲ್ಲ.

Recommended Video

Italy reports 3,590 more coronavirus cases, its biggest one-day increase

ಕಳೆದ ವರ್ಷ ಇದೇ ಅವಧಿಯಲ್ಲಿ 885 ಮಂದಿ ಎವೆರೆಸ್ಟ್ ಸಮ್ಮಿಟ್ ಮಾಡಿದ್ದರು. ಈ ಪೈಕಿ 644 ಮಂದಿ ನೇಪಾಳ ಕಡೆಯಿಂದ 241 ಮಂದಿ ಟಿಬೇಟ್ ಕಡೆಯಿಂದ ಆರೋಹಣ ಮಾಡಿದ್ದರು. ಸದ್ಯಕ್ಕೆ ನೇಪಾಳದಿಂದ ಸಾಗರಮಾತಾ ಅಥವಾ ಚೋಮೋಲ್ಮುಂಗಾ ಪರ್ವತಾರೋಹಣಕ್ಕೆ ಕೆಲವರಿಗೆ ಅನುಮತಿ ನೀಡಲಾಗಿದೆ. ಕೆಲವು ಟ್ರೆಕ್ಕಿಂಗ್ ನಿರ್ವಹಣಾ ಸಂಸ್ಥೆಗಳು ನೋಂದಣಿಯನ್ನು ಬಂದ್ ಮಾಡಿವೆ. ಟ್ರೆಕ್ಕರ್ಸ್ ಪ್ರವಾಸ ಇತಿಹಾಸ, ವೈದ್ಯಕೀಯ ಪರೀಕ್ಷೆ ನಂತರ ಅನುಮತಿಗಾಗಿ ಅರ್ಜಿ ಹಾಕಲಾಗುತ್ತಿದ್ದೇವೆ ಎಂದು ನೇಪಾಳ ಟ್ರೆಕ್ ಅಂಡ್ ಟೂರ್ ಆಪರೇಟರ್ ಗಣೇಶ್ ಸಿಂಕಾಡಾ ಅವರು ಒನ್ಇಂಡಿಯಾಕ್ಕೆ ತಿಳಿಸಿದರು.

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

ಮೌಂಟ್ ಎವೆರೆಸ್ಟ್ ಉತ್ತರ ಭಾಗದಿಂದ ಆರೋಹಣವನ್ನು ಚೀನಾ ಬಂದ್ ಮಾಡಿದೆ, ಬೇರೆ ಮಾರ್ಗ ಹಿಡಿಯಬೇಕು ಎಂದು ಆಸ್ಟ್ರೀಯಾ ಮೂಲಕ ಲೂಕಸ್ ಫರ್ಟೆಂಬ್ಯಾಕ್ ಹೇಳಿದ್ದಾರೆ.

Nepal, China shuts down Everest over coronavirus

ಟಿಬೇಟ್ ನಲ್ಲಿ ಜನವರಿಯಿಂದಲೇ ಪ್ರವಾಸಿಗರಿಗೆ ಪ್ರವೇಶ ನಿಷೇಧಗೊಳಿಸಲಿದೆ. ಚೀನಾದ ಪ್ರಮುಖ ಟ್ರೆಕ್ ಆಪರೇಟರ್ ಅಲ್ಪೆಂಗ್ಲೋ ಎಕ್ಸ್ ಪೆಡಿಷನ್ ಈ ಸೀಸನ್ ಎವೆರೆಸ್ಟ್ ಆರೋಹಣ ಬಂದ್ ಮಾಡಿದೆ. ಚೀನಾ- ಟಿಬೇಟ್ ಮೌಂಟನಿರಿಂಗ್ ಅಸೋಸಿಯೇಷನ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ಈ ಸೀಸನ್ ನಲ್ಲಿ 23 ಮಂದಿ ಬುಕ್ ಮಾಡಿದ್ದರು. ಎರಡು ತಂಡಗಳು ಈಗಾಗಲೇ ಕ್ಯಾನ್ಸಲ್ ಮಾಡಿವೆ. ಈ ಬಾರಿ 8 ರಿಂದ 10 ಮಂದಿ ಎವೆರೆಸ್ಟ್ ತನಕ ಹೋಗಿ ಬರಬಹುದು ಎಂಡು ಪಯೋನಿರ್ ಅಡ್ವೆಂಚರ್ ನ ಪಸಂಗ್ ತೆಂಜೆ ಶೇರ್ಪಾ ಹೇಳಿದ್ದಾರೆ. ಏಪ್ರಿಲ್ -ಮೇ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಅನುಮತಿ ಸಿಗಬಹುದು, ನೇಪಾಳದಲ್ಲಿ ಸದ್ಯಕ್ಕೆ ಒಂದೇ ಒಂದು ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿದೆ. ಕೊರೊನಾಪೀಡಿತ 8 ರಾಷ್ಟ್ರಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

English summary
Nepal, China has cancelled permits for Mount Everest because of the coronavirus, expedition organisers said, ahead of the spring climbing season on the world's highest peak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X