ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.8 ರಂದು ಮೌಂಟ್‌ ಎವೆರೆಸ್ಟ್‌ನ ಪರಿಷ್ಕೃತ ಎತ್ತರ ಘೋಷಣೆ

|
Google Oneindia Kannada News

ಕಠ್ಮಂಡು,ಡಿಸೆಂಬರ್ 07: ವಿಶ್ವದ ಅತಿ ಎತ್ತರ ಶಿಖರ ಮೌಂಟ್‌ ಎವೆರೆಸ್ಟ್‌ನ ಪರಿಷ್ಕೃತ ಎತ್ತರವನ್ನು ನೇಪಾಳ ಸರ್ಕಾರ ಡಿ.8 ರಂದು ಬಿಡುಗಡೆ ಮಾಡಲಿದೆ.

Recommended Video

ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

2015ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನೇಪಾಳ ಭೂಕಂಪನದ ಬಳಿಕ ಮೌಂಟ್ ಎವರೆಸ್ಟ್ ನ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂದು ತಜ್ಞರು ಶಂಕಿಸಿದ್ದರು.

ಮೌಂಟ್ ಎವರೆಸ್ಟ್ ಮರು ಅಳತೆಗೆ ಆಗಮಿಸಿದ ಚೀನಾ ತಂಡ ಮೌಂಟ್ ಎವರೆಸ್ಟ್ ಮರು ಅಳತೆಗೆ ಆಗಮಿಸಿದ ಚೀನಾ ತಂಡ

ಇದೇ ಕಾರಣಕ್ಕೆ ನೇಪಾಳ ಸರ್ಕಾರ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆಯುವ ಯೋಜನೆ ಕೈಗೆತ್ತಿಕೊಂಡಿತ್ತು, ಪರ್ವತದ ಎತ್ತರವನ್ನು ಪುನಃ ಅಳೆಯಲು ನೇಪಾಳಿ ಅಧಿಕಾರಿಗಳು ಮತ್ತು ತಜ್ಞರನ್ನು ನಿಯೋಜಿಸುವಾಗ, ನೇಪಾಳ ಸರ್ಕಾರವು ತನ್ನ ದೇಶೀಯ ಪ್ರಯತ್ನಗಳಲ್ಲಿ ಚೀನಾದೊಂದಿಗೆ ಸಮನ್ವಯ ಸಾಧಿಸಿತು.

Mount Everest: Nepal To Announce Revised Height On December 8

2019 ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೇಪಾಳ ಭೇಟಿಯ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳು ಜಂಟಿಯಾಗಿ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

ವಿಶ್ವದ ಅತೀ ಎತ್ತರದ ಶಿಖರದ ನಿಜವಾದ ಎತ್ತರವನ್ನು ನೇಪಾಳ ಸರ್ಕಾರ ಘೋಷಣೆ ಮಾಡಲಿದೆ. ಇದಕ್ಕಾಗಿಯೇ ಮಂಗಳವಾರ ನೇಪಾಳ ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಕಾರ್ಯಕ್ರಮದ ಕುರಿತು ವಿಶೇಷ ಆಹ್ವಾನ ನೀಡಿದೆ. ಈ ಕಾರ್ಯಕ್ರಮದಲ್ಲಿ ನೇಪಾಳದ ಸರ್ವೇ ಇಲಾಖೆ ಮಂಗಳವಾರ ಮೌಂಟ್ ಎವರೆಸ್ಟ್ ನ ಅಧಿಕೃತ ಎತ್ತರವನ್ನು ಘೋಷಣೆ ಮಾಡಲಿದೆ.

ಇದೇ ಕಾರ್ಯಕ್ರಮದಲ್ಲಿ ಮೌಂಟ್ ಎವರೆಸ್ಟ್ ನ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿದ್ದವರನ್ನು ಕೂಡ ಸನ್ಮಾನಿಸಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಘೋಷಣೆ ಮಾಡಲಾಗಿದೆ ಎಂದು ಹಿಮಾಲಯದ ಸಮೀಕ್ಷಾ ವಿಭಾಗದ ಉಪ ಮಹಾನಿರ್ದೇಶಕ ಸುಶೀಲ್ ನರಸಿಂಗ್ ರಾಜ್‌ಭಂಡಾರಿ ಹೇಳಿದ್ದಾರೆ.

ಇನ್ನು 1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದಿತ್ತು. ಅಂದು ಸರ್ವೇ ಆಫ್ ಇಂಡಿಯಾ ಘೋಷಣೆ ಮಾಡಿದ್ದ 8,848 ಮೀಟರ್ ಎತ್ತರವೇ ಮೌಂಟ್ ಎವರೆಸ್ಟ್ ನ ಅಂಗೀಕರಿಸಲ್ಪಟ್ಟ ಮತ್ತು ಗುರುತಿಸಲ್ಪಟ್ಟ ಎತ್ತರವಾಗಿದೆ.

ಇದೀಗ ಈ ಸರ್ವೇ ಕಾರ್ಯ ಮುಕ್ತಾಯವಾಗಿದ್ದು, ಮಂಗಳವಾರ ಅಧಿಕೃತವಾಗಿ ಶಿಖರದ ಎತ್ತರವನ್ನು ಘೋಷಣೆ ಮಾಡಲಾಗುತ್ತದೆ.

English summary
After working for a year on processing data regarding the measurement of the world's highest peak, Nepal on Tuesday will announce the newly-measured height of Mount Everest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X