ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಾಣು ಶಸ್ತ್ರಾಸ್ತ್ರ: ವಿಶ್ವದ ದೊಡ್ಡಣ್ಣನನ್ನೇ ಸೈಡ್ ಹೊಡೆದ ರಷ್ಯಾ

|
Google Oneindia Kannada News

ನವದೆಹಲಿ, ಫೆಬ್ರವರಿ.07: ವಿಶ್ವದಲ್ಲೇ ಅತಿಹೆಚ್ಚು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶಗಳ ಪೈಕಿ ಅಮೆರಿಕಾ ಈಗ ಅಗ್ರಸ್ಥಾನದಲ್ಲಿ ಉಳಿದಿಲ್ಲ. ವಿಶ್ವದ ದೊಡ್ಡಣ್ಣನನ್ನೇ ಸೈಡ್ ಹೊಡೆದಿರುವ ರಷ್ಯಾ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಏರಿದೆ.

ವಿಶ್ವದ 10ಕ್ಕೂ ಹೆಚ್ಚು ದೇಶಗಳು ಸುಮಾರು 14 ಸಾವಿರ ಪರಮಾಣು ಸಿಡಿತಲೆಗಳನ್ನು ಹೊಂದಿವೆ. ಈ ಪೈಕಿ ಶೇಕಡಾ 90ರಷ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ರಷ್ಯಾ ಮತ್ತು ಅಮೆರಿಕಾ ಎರಡು ರಾಷ್ಟ್ರಗಳೇ ಹೊಂದಿವೆ ಎಂದು ತಿಳಿದು ಬಂದಿದೆ.

ಭಾರತ, ಪಾಕಿಸ್ತಾನವನ್ನು ಅಣ್ವಸ್ತ್ರ ದೇಶಗಳೆಂದು ನಾವು ಪರಿಗಣಿಸಲ್ಲ: ಚೀನಾಭಾರತ, ಪಾಕಿಸ್ತಾನವನ್ನು ಅಣ್ವಸ್ತ್ರ ದೇಶಗಳೆಂದು ನಾವು ಪರಿಗಣಿಸಲ್ಲ: ಚೀನಾ

ಅತಿಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿರುವ ರಷ್ಯಾ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕಾ ಎರಡನೇ ಸ್ಥಾನದಲ್ಲಿದೆ. ಇನ್ನು, ಭಾರತವು ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಹಾಗಾದರೆ ಯಾವ್ಯಾವ ದೇಶಗಳು ಎಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂಬುದರ ಪಟ್ಟಿ ಇಲ್ಲಿದೆ.

Most Nuclear Warheads Contries List, Russia In Top

ಪರಮಾಣು ಸಿಡಿತಲೆಗಳನ್ನು ಹೊಂದಿದ ದೇಶಗಳ ಪಟ್ಟಿ:

- 1ನೇ ಸ್ಥಾನ - ರಷ್ಯಾ, 6850 ಪರಮಾಣು ಸಿಡಿತಲೆಗಳು

- 2ನೇ ಸ್ಥಾನ - ಯುನೆಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, 6,185 ಪರಮಾಣು ಸಿಡಿತಲೆಗಳು

- 3ನೇ ಸ್ಥಾನ - ಫ್ರಾನ್ಸ್, 300 ಪರಮಾಣು ಸಿಡಿತಲೆಗಳು

- 4ನೇ ಸ್ಥಾನ - ಚೀನಾ, 280 ಪರಮಾಣು ಸಿಡಿತಲೆಗಳು

- 5ನೇ ಸ್ಥಾನ - ಇಂಗ್ಲೆಂಡ್, 215 ಪರಮಾಣು ಸಿಡಿತಲೆಗಳು

- 6ನೇ ಸ್ಥಾನ - ಪಾಕಿಸ್ತಾನ, 145 ಪರಮಾಣು ಸಿಡಿತಲೆಗಳು

- 7ನೇ ಸ್ಥಾನ - ಭಾರತ, 135 ಪರಮಾಣು ಸಿಡಿತಲೆಗಳು

- 8ನೇ ಸ್ಥಾನ - ಇಸ್ರೇಲ್, 80 ಪರಮಾಣು ಸಿಡಿತಲೆಗಳು

- 9ನೇ ಸ್ಥಾನ - ಉತ್ತರ ಕೊರಿಯಾ, 15 ಪರಮಾಣು ಸಿಡಿತಲೆಗಳು

English summary
Most Nuclear Warheads Contries List, Russia In Top. India In Seventh Rank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X