• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಕರ್ ವಿಜೇತ ನಟ ಮಾರ್ಗನ್ ಫ್ರೀಮನ್ ಗೆ ಆಘಾತ, ಸೂತಕ

By Mahesh
|

ನ್ಯೂಯಾರ್ಕ್, ಆಗಸ್ಟ್ 16: ಆಸ್ಕರ್ ವಿಜೇತ ನಟ, ಕಂಚಿನ ಕಂಠದ ಮಾರ್ಗನ್ ಫ್ರೀಮನ್ ಅವರ ಮನೆಯಲ್ಲಿ ಸೂತಕ ಆವರಿಸಿದೆ. ಮಾರ್ಗನ್ ಅವರ ಮಲ ಮೊಮ್ಮಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

33 ವರ್ಷ ವಯಸ್ಸಿನ ಎ ಡೆನಾ ಹಿನ್ಸ್ ಅವರನ್ನು ಭಾನುವಾರ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. 911ಕ್ಕೆ ಕರೆ ಬಂದ ಮೇಲೆ ಪೊಲೀಸರು ಹೋಗಿ ನೋಡಿದಾಗ ಡಬ್ಲ್ಯೂ 162ನೇ 400ನೇ ಬ್ಲಾಕ್ ಬಳಿಯ ಆಕೆಯ ಮನೆಯ ರಸ್ತೆ ಹತ್ತಿರ ರಕ್ತಸಿಕ್ತವಾಗಿ ಬಿದ್ದಿದ್ದ ಹಿನ್ಸ್ ದೇಹ ಕಾಣಿಸಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಡಿಪಾರ್ಟ್ಮೆಂಟ್ ಹೇಳಿದೆ. ಘಟನೆಗೆ ಸಂಬಂಧಿಸಿದಂತೆ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ.

ಮಾರ್ಗನ್ ಅವರ ಮೊದಲ ಪತ್ನಿಯಿಂದ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರೂ ಮಕ್ಕಳು, ಮೊಮ್ಮಕ್ಕಳ ಜೊತೆ ಒಳ್ಳೆ ಸಂಪರ್ಕ ಹೊಂದಿದ್ದರು. ಹಿನ್ಸ್ ಅವರನ್ನು ತಮ್ಮ ಮೊಮ್ಮಗಳಂತೆ ಕಾಣುತ್ತಿದ್ದರು. ಇದು ಘೋರ ದುರಂತ ಎಂದಿರುವ ಮಾರ್ಗನ್ ತಮ್ಮ ದುಃಖವನ್ನು ಫೇಸ್ ಬುಕ್ ನಲ್ಲಿ ತೋಡಿಕೊಂಡಿದ್ದಾರೆ.

I want to acknowledge the tremendous outpouring of love and support my family has received regarding the tragic and senseless passing of my granddaughter Edena Hines. Thank you from the bottom of my heart. -M

Posted by Morgan Freeman on16 August 2015

ನ್ಯೂಯಾರ್ಕಿನ ವಿಶ್ವವಿದ್ಯಾಲಯವೊಂದರಿಂದ ನಟನೆಯಲ್ಲಿ ಪದವಿ ಪಡೆದುಕೊಂಡಿದ್ದ ಹಿನ್ಸ್ ಅವರು ಮಾರ್ಗನ್ ಫ್ರೀಮನ್ ಅವರ ಮೊದಲ ಪತ್ನಿ ಜೆನೆಟ್ ಆಡಾಯಿರ್ ಬ್ರಾಡ್ ಶಾ ಅವರ ಮೊಮ್ಮಗಳು, ಮಾರ್ಗನ್ ಹಾಗೂ ಬ್ರಾಡ್ ಶಾ ಅವರು 12 ವರ್ಷದ ದಾಂಪತ್ಯದ ನಂತರ 1979ರಲ್ಲಿ ವಿಚ್ಛೇದನ ಪಡೆದು ಬೇರ್ಪಟ್ಟಿದ್ದರು.

(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oscar-winning actor Morgan Freeman's step-granddaughter has died in New York City from stab wounds, according to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more