ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ ಸುದ್ದಿ: ಲಕ್ಷಣಗಳಿಲ್ಲದಿದ್ದರೂ ಮಕ್ಕಳಿಗೆ ಕೊವಿಡ್-19 ಸೋಂಕು!

|
Google Oneindia Kannada News

ನವದೆಹಲಿ, ಡಿಸೆಂಬರ್.02: ಕೊರೊನಾವೈರಸ್ ಸೋಂಕು ಅಂಟಿದ್ದರೂ ಲಕ್ಷಣಗಳು ಮಾತ್ರ ಕಾಣಿಸುವುದಿಲ್ಲ. ಇದು ಜನಸಾಮಾನ್ಯರ ಕಥೆಯಲ್ಲ, ಬದಲಿಗೆ ಮಕ್ಕಳನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಕೊವಿಡ್-19 ತಗುಲಿರುವ ಬಹುಪಾಲು ಮಕ್ಕಳಲ್ಲಿ ಸೋಂಕಿನ ಲಕ್ಷಣಗಳೇ ಕಂಡು ಬರುವುದಿಲ್ಲ ಎಂದು ಅಧ್ಯಯನವೊಂದು ಸಾಬೀತುಪಡಿಸಿದೆ.

ಅಲ್ಬರ್ಟ್ ವಿಶ್ವವಿದ್ಯಾಲಯವು ನಡೆಸಿರುವ ವೈದ್ಯಕೀಯ ಅಧ್ಯಯನದಲ್ಲಿ ಆಘಾತಕಾರಿ ಅಂಶವೊಂದ ಬಯಲಾಗಿದೆ. ಕೊರೊನಾವೈರಸ್ ಸೋಂಕು ತಗುಲಿರುವ ಪ್ರತಿ ಮೂವರು ಮಕ್ಕಳಲ್ಲಿ ಒಂದು ಮಗುವಿಗೆ ಸೋಂಕಿನ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

2020ರೊಳಗೆ ಯುರೋಪಿನಲ್ಲಿ ಕೊರೊನಾವೈರಸ್ ಲಸಿಕೆ ಬಿಡುಗಡೆ? 2020ರೊಳಗೆ ಯುರೋಪಿನಲ್ಲಿ ಕೊರೊನಾವೈರಸ್ ಲಸಿಕೆ ಬಿಡುಗಡೆ?

ಕೊರೊನಾವೈರಸ್ ಸೋಂಕು ಸಮುದಾಯದ ಮಟ್ಟದಲ್ಲಿ ವೇಗವಾಗಿ ಹರಡುತ್ತಿರುವುದು ಬಹಳ ಕಳವಳಕಾರಿ ಅಂಶವಾಗಿದೆ. ಕೊವಿಡ್-19 ಸೋಂಕು ಹರಡುವಿಕೆ ಬಗ್ಗೆ ಜನರ ಅರಿವಿಗೂ ಕೂಡಾ ಬರುತ್ತಿಲ್ಲ ಎಂದು ಔಷಧಿ ಮತ್ತು ದಂಡ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಫಿನ್ಲೆ ಮ್ಯಾಕ್ ಆಲಿಸ್ಟರ್ ಹೇಳಿದ್ದಾರೆ.

ಲೆಕ್ಕಕ್ಕೆ ಸಿಗುವುದು 1200 ಕೊರೊನಾವೈರಸ್ ಪ್ರಕರಣ

ಲೆಕ್ಕಕ್ಕೆ ಸಿಗುವುದು 1200 ಕೊರೊನಾವೈರಸ್ ಪ್ರಕರಣ

ಅಲ್ಬರ್ಟ್ ನಲ್ಲಿ ಪ್ರತಿನಿತ್ಯ ಕನಿಷ್ಠ 1200 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಡುತ್ತಿದೆ. ಲೆಕ್ಕಕ್ಕೆ ಸಿಗುವುದು ಕೇವಲ 1200 ಹೊಸ ಪ್ರಕರಣಗಳಷ್ಟೇ ಆದರೂ, ಮಹಾಮಾರಿಯು ಸಮುದಾಯದಲ್ಲಿ ಹರಡುತ್ತಿದೆ. ಅದೆಷ್ಟೋ ಜನರಲ್ಲಿ ಕೊರೊನಾವೈರಸ್ ಸೋಂಕು ತಗುಲಿದ್ದರೂ ವೈದ್ಯಕೀಯ ತಪಾಸಣೆಯಿಲ್ಲದೇ ಆ ಪ್ರಕರಣಗಳು ವರದಿಯಾಗುತ್ತಿಲ್ಲ. ಸಾಕಷ್ಟು ಜನರಿಗೆ ಸೋಂಕು ತಗುಲಿರುವ ಬಗ್ಗೆ ಅವರಿಗೇ ಗೊತ್ತಿರುವುದಿಲ್ಲ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾವೈರಸ್ ಮೊದಲ ಅಲೆಯಲ್ಲಿ ಸಿಲುಕಿದ ಮಕ್ಕಳು

ಕೊರೊನಾವೈರಸ್ ಮೊದಲ ಅಲೆಯಲ್ಲಿ ಸಿಲುಕಿದ ಮಕ್ಕಳು

ಅಲ್ಬರ್ಟ್ ನಲ್ಲಿ ಕೊರೊನಾವೈರಸ್ ಮೊದಲ ಅಲೆಗೆ ಸಿಲುಕಿದ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಗಿತ್ತು. ಮ್ಯಾಕ್ ಅಲಿಸ್ಟರ್ ನೇತೃತ್ವದ ತಜ್ಞರ ತಂಡವು ಕಳೆದ ಮಾರ್ಚ್ ತಿಂಗಳಿನಿಂದ ಸಪ್ಟೆಂಬರ್ ವರೆಗಿನ ಮೊದಲ ಅಲೆಯಲ್ಲಿ 2463 ಮಕ್ಕಳಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿತ್ತು. ಈ ವೇಳೆ 1987 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 476 ಮಕ್ಕಳ ವೈದ್ಯಕೀಯ ವರದಿ ನೆಗೆಟಿವ್ ಬಂದಿತ್ತು. ಒಟ್ಟು 1987 ಕೊರೊನಾವೈರಸ್ ಸೋಂಕಿತ ಮಕ್ಕಳ ಪೈಕಿ ಶೇ.35.90ರಷ್ಟು ಮಕ್ಕಳಿಗೆ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಅಂದರೆ ಒಟ್ಟು 714 ಮಕ್ಕಳಿಗೆ ಸೋಂಕಿನ ಲಕ್ಷಣಗಳೇ ಕಾಣಿಸಿಕೊಂಡಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ವಯಸ್ಕರಿಗೆ ಹೋಲಿಸಿದ್ದಲ್ಲಿ ಮಕ್ಕಳ ಪ್ರಮಾಣ ವಿರಳ

ವಯಸ್ಕರಿಗೆ ಹೋಲಿಸಿದ್ದಲ್ಲಿ ಮಕ್ಕಳ ಪ್ರಮಾಣ ವಿರಳ

ಕೊರೊನಾವೈರಸ್ ಸೋಂಕು ಹರಡುವಿಕೆಯಲ್ಲಿ ವಯಸ್ಕರಿಗೆ ಹೋಲಿಕೆ ಮಾಡಿದರೆ ಮಕ್ಕಳು ಸೋಂಕು ಹರಡುವ ಪ್ರಮಾಣವು ವಿರಳವಾಗಿರುತ್ತದೆ. ಆದರೆ ಒಮ್ಮೆ ಸೋಂಕು ಮಕ್ಕಳಿಂದಲೇ ಅಂಟಿಕೊಂಡರೂ ಸಹ ಪರಿಣಾಮ ಮಾತ್ರ ಅಪಾಯಕಾರಿಯಾಗೇ ಇರುತ್ತದೆ. ಸೋಂಕಿನ ಲಕ್ಷಣಗಳಿಲ್ಲದ ಮಕ್ಕಳ ಸೀನುವಿಕೆ ಮತ್ತು ಹತ್ತಿರ ಕುಳಿತುಕೊಳ್ಳುವುದು, ಸ್ಪರ್ಶದಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ ಎಂದು ಮ್ಯಾಕ್ ಅಲಿಸ್ಟರ್ ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಕೊರೊನಾವೈರಸ್ ಸೋಂಕು ತಗುಲಿದ ಮಕ್ಕಳಲ್ಲಿ ಸಾಮಾನ್ಯವಾಗಿ ಗಂಟಲು ನೋವು, ಮೂಗು ಸ್ರವಿಸುವಿಕೆ ಮತ್ತು ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೊವಿಡ್-19 ಸೋಂಕು ತಗುಲಿದ ಶೇ.25ರಷ್ಟು ಮಕ್ಕಳಲ್ಲಿ ಕೆಮ್ಮು, ಶೇ.19ರಷ್ಟು ಮಕ್ಕಳಿಗೆ ಮೂಗು ಸ್ರವಿಸುವಿಕೆ ಮತ್ತು ಶೇ.16ರಷ್ಟು ಮಕ್ಕಳಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಮಕ್ಕಳಿಗೆ ಸಹಜವಾಗಿ ಸಣ್ಣ ವಯಸ್ಸಿನಲ್ಲಿರುವಾಗ ಹಲವು ರೀತಿಯ ವೈರಸ್ ಗಳಿಂದ ಅಪಾಯವನ್ನು ಎದುರಿಸುತ್ತಾರೆ. ಆದರೆ, ರುಚಿ ಮತ್ತು ವಾಸನೆ ಗೊತ್ತಾಗದಿರುವುದು, ಜ್ವರ, ತಲೆನೋವು, ವಾಂತಿ-ಬೇಧಿ, ಕೆಮ್ಮು ಮತ್ತು ಗಂಟಲು ನೋವು ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಆಗಿರುತ್ತವೆ.

ಗಂಟಲು ನೋವು, ಮೂಗಿನ ಸ್ರವಿಸುವಿಕೆ ಕೊರೊನಾ ಅಲ್ಲ

ಗಂಟಲು ನೋವು, ಮೂಗಿನ ಸ್ರವಿಸುವಿಕೆ ಕೊರೊನಾ ಅಲ್ಲ

ವಯಸ್ಕರಲ್ಲಿ ಕಾಣಿಸಿಕೊಳ್ಳುವ ಗಂಟಲು ನೋವು ಮತ್ತು ಮೂಗಿನ ಸ್ರವಿಸುವಿಕೆಯು ಕೊರೊನಾವೈರಸ್ ಸೋಂಕಿನ ಲಕ್ಷಣ ಆಗಿರುವುದಿಲ್ಲ. ಈ ಲಕ್ಷಣ ಇತರೆ ಸಾಮಾನ್ಯ ವೈರಸ್ ದಾಳಿಯಿಂದಲೂ ಕಾಣಿಸಿಕೊಳ್ಳುತ್ತವೆ. ಶೇ.84ರಷ್ಟು ವಯಸ್ಕರಲ್ಲಿ ಈ ರೋಗದ ಲಕ್ಷಣಗಳು ಕಂಡು ಬರುತ್ತವೆ ಎಂದು ವೈದ್ಯಕೀಯ ತಜ್ಞ ಮ್ಯಾಕ್ ಅಲಿಸ್ಟರ್ ತಿಳಿಸಿದ್ದಾರೆ. ಶ್ವಾಸಕೋಶ ಪ್ರದೇಶದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕೊವಿಡ್-19 ಲಕ್ಷಣಗಳ ಬಗ್ಗೆ ಜಾಗೃತಿ ವಹಿಸಿ

ಕೊವಿಡ್-19 ಲಕ್ಷಣಗಳ ಬಗ್ಗೆ ಜಾಗೃತಿ ವಹಿಸಿ

ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಈ ಎಲ್ಲ ಲಕ್ಷಣಗಳಿಗಿಂತಲೂ ಭಿನ್ನವಾಗಿರುತ್ತದೆ. ಮೂಗು ಸ್ರವಿಸುವಿಕೆ, ಗಂಟಲು ನೋವಿನ ಜೊತೆಗೆ ಜ್ವರ, ಕೆಮ್ಮು, ರುಚಿ ಮತ್ತು ವಾಸನೆ ಗುರುತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಲಕ್ಷಣವು ಕೊರೊನಾವೈರಸ್ ಸೋಂಕಿನ ಪ್ರಮುಖ ಲಕ್ಷಣವಾಗಿರುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದರೂ ಕೂಡಾ ಜನರು ಮನೆಯಲ್ಲೇ ಇರಬೇಕು. ತಮ್ಮ ಆರೋಗ್ಯದಲ್ಲಿ ಬದಲಾವಣೆ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತಿದ್ದಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವಲ್ಲಿ ಹೆಚ್ಚಿನ ಲಕ್ಷ್ಯ ವಹಿಸಬೇಕು ಎಂದು ಔಷಧಿ ಮತ್ತು ದಂಡ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಫಿನ್ಲೆ ಮ್ಯಾಕ್ ಆಲಿಸ್ಟರ್ ಹೇಳಿದ್ದಾರೆ.

English summary
More Than One-Third Of Kids Who Have COVID-19 Are Asymptomatic, Says Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X