ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಸಾವಿರ ಸೀಲ್‌ಗಳ ಸಾವು, ಹವಾಮಾನ ವೈಪರಿತ್ಯ ಕಾರಣ..?

|
Google Oneindia Kannada News

ಆಸ್ಟ್ರೇಲಿಯಾ ದ್ವೀಪ ತಾಸ್ಮೇನಿಯಾ ಕಡಲಿನಲ್ಲಿ ತಿಮಿಂಗಿಲಗಳ ಮಾರಣಹೋಮ ನಡೆದು ತಿಂಗಳು ಕಳೆಯುವ ಮೊದಲೇ ಮತ್ತೊಂದು ಆಘಾತಕಾರಿ ಸುದ್ದಿ ಆಫ್ರಿಕಾದಿಂದ ಹೊರಬಿದ್ದಿದೆ. ನಮೀಬಿಯಾ ಕಡಲ ತೀರದಲ್ಲಿ 7 ಸಾವಿರಕ್ಕೂ ಹೆಚ್ಚು ಸೀಲ್‌ (ನೀರುನಾಯಿ) ಗಳ ದೇಹ ಪತ್ತೆಯಾಗಿದೆ. ನಮೀಬಿಯಾ ಕಡಲ ತೀರ ಸೀಲ್‌ಗಳ ಸಂತಾನೋತ್ಪತ್ತಿ ತಾಣವಾಗಿದ್ದು ಇಲ್ಲಿ ಸಾವಿರಾರು ಸೀಲ್‌ಗಳು ವಾಸಿಸುತ್ತವೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಸೀಲ್‌ಗಳು ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೆ ಮರಿಗಳಿಗೆ ಜನ್ಮ ನೀಡುತ್ತವೆ.

ಈ ಕಾರಣಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ನೀರು ನಾಯಿಗಳು ನಮೀಬಿಯಾ ಕಡಲ ತೀರಕ್ಕೆ ಬರುತ್ತವೆ. ಆದರೆ ಮರಿಗಳಿಗೆ ಜನ್ಮ ನೀಡುವ ಮೊದಲೇ ಸಾವಿರಾರು ಸೀಲ್‌ಗಳ ಮಾರಣಹೋಮ ನಡೆದಿದೆ. ಈ ಘಟನೆ ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದ್ದು, ಘಟನೆಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆ ನಡೆದಿರುವ ಕಡಲ ತೀರ ಟೂರಿಸ್ಟ್ ಸ್ಪಾಟ್ ಕೂಡ ಆಗಿದ್ದು, ಜನರು ಬೀಚ್ ಬಳಿಯೂ ಸುಳಿಯದಂತಾಗಿದೆ.

1994ರಲ್ಲೂ ಇದೇ ರೀತಿ ಆಗಿತ್ತು
ನಮೀಬಿಯಾದಲ್ಲಿ ಸೀಲ್‌ಗಳ ಮಾರಣಹೋಮ ನಡೆಯುತ್ತಿರುವುದು ಇದೇ ಮೊದಲಲ್ಲ. ಬರೋಬ್ಬರಿ 26 ವರ್ಷಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಆಗಲೂ ಸಾವಿರ ಸಾವಿರ ಸೀಲ್‌ಗಳು ಮೃತಪಟ್ಟಿದ್ದವು. 1994ರಲ್ಲಿ 10 ಸಾವಿರ ಸೀಲ್‌ಗಳು ಮೃತಪಟ್ಟು, 15 ಸಾವಿರ ಭ್ರೂಣಗಳು ಭೂಮಿಗೆ ಬರುವ ಮೊದಲೇ ಕಣ್ಣುಮುಚ್ಚಿದ್ದವು. ಈ ಘಟನೆ ಸಂಭವಿಸಿ ಎರಡೂವರೆ ದಶಕಗಳು ಕಳೆಯುವ ಒಳಗಾಗಿ ಮತ್ತೆ ಅಂತಹದ್ದೇ ದಾರುಣ ಘಟನೆಗೆ ನಮೀಬಿಯಾ ಕಡಲ ತೀರ ಸಾಕ್ಷಿಯಾಗಿರುವುದು ದುರಂತ.

More Than 7 Thousand Seals Found Dead In Namibia

ಘಟನೆಗೆ ಹವಾಮಾನ ವೈಪರಿತ್ಯ ಕಾರಣ..?
ಘಟನೆ ಬಗ್ಗೆ ಸಂಪೂರ್ಣ ವರದಿ ಸಿಗದೇ ಇದ್ದರೂ, ಮೇಲ್ನೋಟಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಆಹಾರ ಕೊರತೆಯೂ ಸೀಲ್‌ಗಳ ಸಾವಿಗೆ ಕಾರಣವಾಗಿರಬಹುದು ಎಂಬ ವಾದ ಕೂಡ ಕೇಳಿಬಂದಿದೆ. ಇಷ್ಟೆಲ್ಲದರ ಮಧ್ಯೆ ಸೀಲ್‌ಗಳಿಗೆ ಬ್ಯಾಕ್ಟೀರಿಯಾಗಳ ಸೋಂಕು ತಗುಲಿ, ಈ ರೀತಿ ಸಾಮೂಹಿಕವಾಗಿ ಸಾವನ್ನಪ್ಪಿರಬಹುದು ಎಂಬುದು ಇನ್ನೂ ಕೆಲವರ ವಾದ. ಆದರೆ ಈ ಘಟನೆಗೆ ನಿಖರವಾದ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ನಮೀಬಿಯಾ ಸರ್ಕಾರ ಸೂಕ್ತ ತನಿಖೆಗೆ ಮುಂದಾಗಿದೆ.

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

ಜಾಗತಿಕ ತಾಪಮಾನಕ್ಕೆ ಇನ್ನೆಷ್ಟು ಬಲಿ..?
ಕಾಡು ನಾಶವಾಗಿದ್ದಾಯಿತು, ಧ್ರುವ ಪ್ರದೇಶ ಕರಗಿ ನೀರಾಯಿತು. ಇಷ್ಟೆಲ್ಲದರ ನಡುವೆ ಸಾಗರಗಳ ಮೇಲೂ ಹವಾಮಾನ ವೈಪರಿತ್ಯದ ಪರಿಣಾಮ ಎಥೇಚ್ಛವಾಗಿ ಪ್ರಭಾವ ಬೀರುತ್ತಿದೆ. ಪ್ರಮುಖವಾಗಿ ಸೀಲ್‌ಗಳು ಹಾಗೂ ತಿಮಿಂಗಿಲಗಳು ಈ ವೈಪರಿತ್ಯದ ಪರಿಣಾಮ ಎದುರಿಸುತ್ತಿವೆ. ಅತ್ತ ಧ್ರುವ ಪ್ರದೇಶದಲ್ಲಿ ಹಿಮ ಕರಡಿಗಳ ಸಂತತಿ ನಾಶವಾಗುವ ಸ್ಥಿತಿ ತಲುಪಿದೆ. ಇನ್ನೊಂದೆಡೆ ಸಾವಿರ ಸಾವಿರ ತಿಮಿಂಗಿಲಗಳ ಕಳೆಬರ ಕಡಲ ತೀರಕ್ಕೆ ತೇಲುತ್ತಾ ಬರುವುದು ಮಾಮೂಲಾಗಿದೆ. ಇಷ್ಟೆಲ್ಲಾ ಆತಂಕಗಳ ನಡುವೆ ಸೀಲ್‌ಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರಾಣ ಬಿಡುತ್ತಿರುವುದು ಮಾನವನ ದುರಾಸೆಗೆ ಹಿಡಿದ ಕೈಗನ್ನಡಿಯಾಗಿದೆ.

English summary
More than 7 thousand Cape fur seals found dead at a breeding colony in Namibia. First two weeks of October, large numbers of seals are found died suspectly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X