ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ-ಉಕ್ರೇನ್ ಸಂಘರ್ಷ: ರಷ್ಯಾದ 5,300 ಮಂದಿ ಸೈನಿಕರು ಸತ್ತಿದ್ದಾರೆ ಎಂದ ಉಕ್ರೇನ್

|
Google Oneindia Kannada News

ಕೀವ್, ಫೆಬ್ರವರಿ 28: ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಲ್ಲಿ ರಷ್ಯಾದ 5,300 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ. ಉಕ್ರೇನ್ ನೊಂದಿಗಿನ ಯುದ್ಧದಲ್ಲಿ 5,300 ರಷ್ಯಾದ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂಬ ಗುಪ್ತಚರ ಮಾಹಿತಿ ನೀಡಿದೆ. ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಸಾವು- ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ರಷ್ಯಾದ ಆಕ್ರಮಣ ಸಮಯದಲ್ಲಿ 14 ಮಕ್ಕಳು ಸೇರಿದಂತೆ 325 ಉಕ್ರೇನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ.

ರಷ್ಯಾ-ಉಕ್ರೇನ್ ಸಂಘರ್ಷ: 24 ಗಂಟೆ ನಿರ್ಣಾಯಕ ಎಂದ ವೊಲೊಡಿಮಿರ್ರಷ್ಯಾ-ಉಕ್ರೇನ್ ಸಂಘರ್ಷ: 24 ಗಂಟೆ ನಿರ್ಣಾಯಕ ಎಂದ ವೊಲೊಡಿಮಿರ್

ಭಾನುವಾರದಂದು ಉಕ್ರೇನ್ ಸಶಸ್ತ್ರ ಪಡೆಗಳಲ್ಲಿ ಆದ ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತನ್ನ ಪಡೆಗಳು ಉಕ್ರೇನಿಯನ್ ಮಿಲಿಟರಿ ಸೌಕರ್ಯಗಳನ್ನು ಮಾತ್ರ ಗುರಿಯಾಗಿಸಿವೆ ಕೊಂಡಿವೆ ಎಂದು ರಷ್ಯಾ ಹೇಳಿಕೊಂಡಿದೆ.

More than 5,000 Russian Soldiers Killed, Claims Ukraines Defence inistry

ಕಳೆದ ಐದು ದಿನಗಳಿಂದ ರಷ್ಯಾ ಉಕ್ರೇನ್ ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಚಾರಣೆಯಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ವಿಮಾನಗಳು-29, ಹೆಲಿಕಾಪ್ಟರ್ ಗಳು-29, ಟ್ಯಾಂಕರ್ ಗಳು -191, ಶಸ್ತ್ರ ಸಜ್ಜಿತ ಸಿಬ್ಬಂದಿ ವಾಹನಗಳು -816, ಕ್ಯಾನನ್-74, ಕ್ಷಿಪಣಿ ವ್ಯವಸ್ಥೆ-1, ಎಂಎಲ್ ಆರ್ ಎಸ್ ಬಿಎಂ-21 ವಾಹನಗಳು -291 ಇಂಧನ ಟ್ಯಾಂಕ್ ಗಳು-60, ಹಡಗು, ದೋಣಿಗಳು-2, ವಿಮಾನ ವಿರೋಧಿ ಯುದ್ಧ ವ್ಯವಸ್ಥೆ-5 ಸಿಬ್ಬಂದಿ ಸುಮಾರು 5,300 ಸೈನಿಕರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಉಕ್ರೇನ್ ನ ಸಶಸ್ತ್ರ ಪಡೆಗಳ ಜನರಲ್ ಸ್ಯಾಟ್ಫ್ ತನ್ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ರಷ್ಯಾ ಅನುಭವಿಸಿದ ಸಾವು ನೋವುಗಳ ಧೀರ್ಘ ಪಟ್ಟಿಯನ್ನು ಅಪ್ ಲೋಡ್ ಮಾಡಿದ್ದಾರೆ.

ರಷ್ಯಾ ಹಾಗೂ ಉಕ್ರೇನ್ ನಡುವೆ ಶಾಂತಿಯುತ ಮಾತುಕತೆ ಶುರುವಾಗಿದೆ. ಸುಮಾರು ಒಂದು ವಾರದ ಸುಧೀರ್ಘ ಯುದ್ಧದ ಬಳಿಕ ರಷ್ಯಾ ಮತ್ತು ಉಕ್ರೇನ್ ಕೊನೆಗೂ ಮಾತುಕತೆಗೆ ಕುಳಿತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಜತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ನೇತೃತ್ವದ ನಿಯೋಗ ಮಾತುಕತೆ ನಡೆಸುತ್ತಿದೆ.

ತಮ್ಮ ದೇಶದ ಮೇಲೆ ಆಕ್ರಮಣ ಮಾಡುವ ವಿಚಾರದಲ್ಲಿ ರಷ್ಯಾದೊಂದಿಗೆ ಬೆಲಾರಸ್ ಕೂಡ ಕೈಜೋಡಿಸಿದ್ದರಿಂದ ಬೆಲಾರಸ್‌ನಲ್ಲಿ ಮಾತುಕತೆಗೆ ಸಿದ್ಧವಿಲ್ಲ ಎಂದು ಉಕ್ರೇನ್ ಹೇಳಿತ್ತು.

ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದ ಬಳಿಕ ಬೆಲಾರಸ್‌ನ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಅಧ್ಯಕ್ಷ ಒಪ್ಪಿಕೊಂಡಿದ್ದಾರೆ.

ಉಕ್ರೇನ್ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು, ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿತ್ತು. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿತ್ತು ಎನ್ನಲಾಗಿದೆ.

ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಕೂಡ ಪ್ರಸ್ತಾಪಿಸಿ ಬೇರೆಡೆಗೆ ಮಾತುಕತೆಗೆ ಸಿದ್ಧ ಎಂದಿದ್ದರು.

English summary
Kiev's defence ministry claims that more than 5,000 Russian soldiers have been killed in the first four days of fighting in Ukraine, BBC reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X