ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿದ್ದಾರಂತೆ 40 ಸಾವಿರ ಅಗೋಚರ ಕೊರೊನಾ ರೋಗಿಗಳು..!

|
Google Oneindia Kannada News

ಬಿಜಿಂಗ್, ಏಪ್ರಿಲ್ 2: ನೋವೆಲ್ ಕೊರೊನಾ ವೈರಸ್ ಎಂಬ ಮಹಾಮಾರಿಯ ಹುಟ್ಟಿಗೆ ಕಾರಣವಾಗಿರುವ ಚೀನಾ ಜಗತ್ತಿನ ಇತರ ದೇಶಗಳ ಕೆಂಗೆಣ್ಣಿಗೆ ಗುರಿಯಾಗಿದೆ. ಕೋವಿಡ್ 19 ವೈರಸ್‌ಗೆ ಚೀನಾ ತನ್ನ ದೇಶದ 4 ಸಾವಿರಕ್ಕೂ ಹೆಚ್ಚು ಜನರನ್ನು ಕಳೆದುಕೊಂಡು, ಈಗ ಸ್ವಲ್ಪ ಸಹಜ ಸ್ಥಿತಿಗೆ ಬಂದು ನಿಂತಿದೆ.

ಆದರೆ, ಚೀನಾಕ್ಕೆ ಈಗ ಮತ್ತೊಂದು ಹೊಸ ತಲೆ ನೋವು ಪ್ರಾರಂಭವಾಗಿದೆ. ಬಾಹ್ಯದಲ್ಲಿ ಕೊರೊನಾ ವೈರಸ್‌ ರೋಗದ ಲಕ್ಷಣಗಳನ್ನು ತೋರಿಸಿದ ಹಾಗೆಯೇ, ಹೊಸ ಕೊರೊನಾ ರೋಗಿಗಳು ಚೀನಾದಲ್ಲಿ ಕಂಡು ಬಂದಿದ್ದಾರಂತೆ.

ಲಾಕ್‌ಡೌನ್: ಕಾಡಿನಲ್ಲಿ 3ಕಿಮೀ ನಡೆದು ದಿನಸಿ ತಲುಪಿಸಿದ ಡಿಸಿ..!ಲಾಕ್‌ಡೌನ್: ಕಾಡಿನಲ್ಲಿ 3ಕಿಮೀ ನಡೆದು ದಿನಸಿ ತಲುಪಿಸಿದ ಡಿಸಿ..!

ಸ್ವತಃ ಈ ವಿಷಯವನ್ನು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಖಚಿತ ಪಡಿಸಿದೆ. ಕೊರೊನಾ ಸೋಂಕು ತಗುಲಿದ್ದರೂ ರೋಗ ಲಕ್ಷಣಗಳು ಕಾಣಿಸಿಲ್ಲ ಎಂದು ಸುಮಾರು 40 ಸಾವಿರ ಮಂದಿಯನ್ನು ಚೀನಾ ಆಸ್ಪತ್ರೆಯಿಂದ ಹೊರಗೆ ಬಿಟ್ಟಿತ್ತಂತೆ. ಇದರಿಂದ ಕೊರೊನಾ ವಿಷಯದಲ್ಲಿ ಚೀನಾ ಕಳ್ಳಾಟ ಆಡುತ್ತಿದೆ ಎಂಬ ಜಗತ್ತಿನ ಇತರ ರಾಷ್ಟ್ರಗಳ ಅನುಮಾನಕ್ಕೆ ಪುಷ್ಠಿ ಸಿಕ್ಕಂತಾಗಿದೆ.

1600 ರೋಗಿಗಳು ಇದ್ದಾರಂತೆ

1600 ರೋಗಿಗಳು ಇದ್ದಾರಂತೆ

ಚೀನಾದಲ್ಲಿ ಕೊರೊನಾ ವೈರಸ್‌ನ ಕೆಂದ್ರಬಿಂದುವಾಗಿದ್ದ ಹುಬೇ ಪ್ರಾಂತ್ಯದ ವುಹಾನ್‌ ನಗರದಲ್ಲಿ ಕೊರೊನಾ ರೋಗ ನಿಯಂತ್ರಣಕ್ಕೆ ಬಂದ ಬಳಿಕ ಅಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿತ್ತು. ಆದರೆ, ಎನ್‌ಎಚ್‌ಸಿ ಪ್ರಕಾರ ಈಗ ಕೊರೊನಾ ಲಕ್ಷಣಗಳನ್ನು ತೋರಿಸದ ಕೊರೊನಾದ್ದೆ ಹೊಸ ರೀತಿಯ ಸುಮಾರು 1600 ರೋಗಿಗಳನ್ನು ಚೀನಾ ಸರ್ಕಾರ ಪತ್ತೆ ಮಾಡಿದೆಯಂತೆ. ಇದು ಚೀನಾದ ಚಿಂತೆಗೆ ಕಾರಣವಾಗಿದೆ. ಹೊರಗೆ ರೋಗ ಲಕ್ಷಣಗಳನ್ನು ತೋರಿಸದೆಯೇ ಕೊರೊನಾ ವೈರಸ್‌ ಹರಡುತ್ತಿರುವ ಇಂಥ ರೋಗಿಗಳು ಚೀನಾದಲ್ಲಿ ಮತ್ತೆ ಸೋಂಕನ್ನು ಹರಡಬಹುದು ಎಂದು ಅಂದಾಜಿಸಲಾಗಿದೆ.

40 ಸಾವಿರ ಮಂದಿಯನ್ನು ಮನೆಗೆ ಕಳುಹಿಸಿದ್ದರು

40 ಸಾವಿರ ಮಂದಿಯನ್ನು ಮನೆಗೆ ಕಳುಹಿಸಿದ್ದರು

ಆದರೆ, ಫೆಬ್ರವರಿ ಅಂತ್ಯದ ವೇಳೆಗೆ ಚೀನಾದಲ್ಲಿ ಕೊರೊನಾ ರೋಗ ಇದ್ದರೂ ಬಾಹ್ಯದಲ್ಲಿ ಕೊರೊನಾ ರೋಗ ಲಕ್ಷಣಗಳು ಕಾಣಿಸದ ಸುಮಾರು 40 ಸಾವಿರ ಮಂದಿ ಇದ್ದಿದ್ದು ದೃಢಪಟ್ಟಿತ್ತು. ರೋಗ ಲಕ್ಷಣಗಳು ಕಾಣಿಸಲಿಲ್ಲ ಎಂಬ ಕಾರಣಕ್ಕೆ ಸೋಂಕು ದೃಢಪಟ್ಟವರ ಅಧಿಕೃತ ಪಟ್ಟಿಗೆ ಚೀನಾ ಸರ್ಕಾರ ಇವರನ್ನು ಸೇರಿಸಿರಲಿಲ್ಲ. ಈ ಬಗ್ಗೆ ಹವು ಅಂತಾರಾಷ್ಟ್ರೀಯ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ.

ಅಗೋಚರ ರೋಗಿಗಳು

ಅಗೋಚರ ರೋಗಿಗಳು

ಕೊರೊನಾ ವೈರಸ್‌ ವಾಹಕರಾಗಿರುವ ಇಂತಹ ಅಗೋಚರ ರೋಗಿಗಳು ಮತ್ತೆ ದೊಡ್ಡ ಮಟ್ಟದ ರೋಗ ಹರಡುವ ಅಪಾಯವಿದೆ. ಆದ್ದರಿಂದ ಅಂಥವರ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ತೀರ್ಮಾನಿಸಲಾಗಿದೆ ಎಂದು ಎನ್‌ಎಚ್‌ಸಿ ಹೇಳಿದೆ. ಇಂಥ ಸೋಂಕಿತರು ಮತ್ತು ಅವರ ಸಮೀಪದ ಸಂಪರ್ಕಕ್ಕೆ ಬಂದಿರುವವರನ್ನು ಸರ್ಕಾರ ರೂಪಿಸಿರುವ ಪ್ರತ್ಯೇಕ ವಾಸದ ಸ್ಥಳದಲ್ಲಿ 14 ದಿನಗಳ ಕಾಲ ಇರಿಸಲಾಗುವುದು. ಸೋಂಕು ಇಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟ ಬಳಿಕವೇ ಹೊರಗೆ ಕಳುಹಿಸಲಾಗುವುದು ಎಂದು ಚೀನಾ ತಿಳಿಸಿದೆ.

ವೈದ್ಯಕೀಯ ನಿಗಾ ಇರಿಸಲಾಗಿದೆ

ವೈದ್ಯಕೀಯ ನಿಗಾ ಇರಿಸಲಾಗಿದೆ

ಹೊಸ ಬಗೆಯಲ್ಲಿ ಸೋಂಕು ಕಾಣಿಸಿದವರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ. ಇವರಲ್ಲಿ 205 ಜನ ವಿದೇಶ ಪ್ರಯಾಣ ಮಾಡಿದವರಿದ್ದಾರೆ. ಇಂಥ ರೋಗಿಗಳನ್ನು ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಎನ್‌ಎಚ್‌ಸಿ ತಿಳಿಸಿದೆ.

English summary
More Than 40000 Invisible Corona Symptomes People Ditected In China. China National Health Commission Confirms it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X