ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಜಾಕಸ್ತಾನ ತೈಲಾಗಾರ ಗಲಾಟೆಯಲ್ಲಿ ಸಿಲುಕಿಕೊಂಡಿರುವ 150ಕ್ಕೂ ಅಧಿಕ ಭಾರತೀಯರು

|
Google Oneindia Kannada News

ಕಜಾಕಸ್ತಾನ್, ಜು.1:ಕಜಾಕಸ್ಥಾನದ ತೈಲಾಗಾರದ ಗಲಾಟೆಯಲ್ಲಿ 150ಕ್ಕೂ ಅಧಿಕ ಭಾರತೀಯರು ಸಿಲುಕಿಕೊಂಡಿದ್ದಾರೆ. ಸ್ಥಳೀಯ ಕೆಲಸಗಾರರು ಹಾಗೂ ಕೆಲ ಗುಂಪುಗಳ ಮಧ್ಯೆ ಕಜಾಕಸ್ತಾನ್ ತೈಲಾಗಾರದಲ್ಲಿ ಜಗಳ ಆರಂಭವಾಗಿದ್ದು ಇದು ಹಿಂಸಾಚಾರದತ್ತ ತಿರುಗುತ್ತಿದೆ.

ಇದರಲ್ಲಿ 150ಕ್ಕೂ ಅಧಿಕ ಕೇರಳಿಗರು ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನಿವಾಸಿ ಕೇರಳಿಗರ ಇಲಾಖೆಗೆ ತುರ್ತು ಕ್ರಮಕ್ಕೆ ಸೂಚಿಸಿದ್ದಾರೆ.

ಇರಾನ್-ಅಮೆರಿಕ ಯುದ್ಧ ಸನ್ನಿವೇಶ; ಭಾರತದ ತೈಲ ಸಂಗ್ರಹ 9.5 ದಿನಕ್ಕೆಇರಾನ್-ಅಮೆರಿಕ ಯುದ್ಧ ಸನ್ನಿವೇಶ; ಭಾರತದ ತೈಲ ಸಂಗ್ರಹ 9.5 ದಿನಕ್ಕೆ

ಕೇರಳ ಸರ್ಕಾರಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ಕೂಡ ಸಾಥ್ ನೀಡಿದ್ದು, ಖಜಾಕಸ್ಥಾನ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ.

More than 150 Keralites trapped in Kazakhstan biggest oil field
ಘಟನೆಗೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಎಸ್ ಮುರಳೀಧರನ್ ಟ್ವೀಟ್ ಮಾಡಿದ್ದು, ಎಲ್ಲಾ ಭಾರತೀಯರು ಸುರಕ್ಷಿತರಾಗಿದ್ದಾರೆ, ಜಗಳದಲ್ಲಿ ಭಾರತೀಯರು ಪಾಲ್ಗೊಂಡಿಲ್ಲ, ಯಾವುದೇ ಭಾರತೀಯರಿಗೆ ಗಾಯವಾಗಿರುವ ಮಾಹಿತಿ ಕೂಡ ಇಲ್ಲ. ಭಾರತೀಯರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಜಾಕಸ್ಥಾನದ ಅತಿದೊಡ್ಡ ತೈಲಾಗಾರದಲ್ಲಿ ಸ್ಥಳೀಯ ಕಾರ್ಮಿಕರು ಹಾಗೂ ವಿದೇಶಿ ಎಂಜಿನಿಯರ್‌ಗಳ ಮಧ್ಯೆ ಮಾತಿನ ಚಕಮಕಿಯೇ ಈ ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಮಹಿಳಾ ಸಿಬ್ಬಂದಿ ಒಬ್ಬರಿಗೆ ಸಂಬಂಧಿಸಿದ ವಾಟ್ಸಪ್ ಸಂದೇಶವು ಈ ಹೊಡೆದಾಟಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಎಂಜಿನಿಯರ್‌ಗಳೂ ಸೇರಿ 30ಕ್ಕೂ ಅಧಿಕ ಸಿಬ್ಬಂದಿಗೆ ಗಾಯವಾಗಿದೆ.
ಘಟನೆ ಕುರಿತು ಸ್ಥಳೀಯ ಸರ್ಕಾರ ತನಿಖೆಗೆ ಆದೇಶಿಸಿದೆ.

English summary
More than 150 Indians trapped in Kazakhstan biggest oil field, This incident nearly 30 arab people got injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X