ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಫೈನ್ಸ್ ಚಂಡಮಾರುತಕ್ಕೆ ಸಾವಿರಾರು ಮಂದಿ ಬಲಿ

By Mahesh
|
Google Oneindia Kannada News

ಮನಿಲಾ, ನ.10: ಫಿಲಿಪ್ಪೀನ್ಸ್ ಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ 1,200ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಟ್ಯಾಕ್ಲೋಬನ್ ನಗರದಲ್ಲಿ ಹೈಯಾನ್ ಚಂಡಮಾರುತದ ಪ್ರಭಾವವು ತೀವ್ರವಾಗಿದ್ದು, ಅಲ್ಲಿನ ರಸ್ತೆಬದಿಗಳಲ್ಲಿ ಮೃತದೇಹಗಳ ರಾಶಿಯೇ ಬಿದ್ದಿವೆ. ಸಾವಿನ ಸಂಖ್ಯೆ 10 ಸಾವಿರ ದಾಟುವ ಅಂದಾಜು ಮಾಡಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಹಾಗೂ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಸಂಪರ್ಕ ಕಡಿತಗೊಂಡ ಸ್ಥಳಗಳಿಗೆ ಈಗಷ್ಟೇ ಸೇನೆ ಧಾವಿಸಿದೆ. ಹಾಗಾಗಿ ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪಪ್ರಧಾನ ನಿರ್ದೇಶಕ ಕ್ಯಾ. ಜಾನ್ ಆಂಡ್ರೂಸ್ ಹೇಳಿದ್ದಾರೆ.

ಚಂಡಮಾರುತದಿಂದಾಗಿ 100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅನೇಕ ಮನೆಗಳು, ಕಟ್ಟಡಗಳು ನೆಲಸಮವಾಗಿವೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದೂ ಅವರು ತಿಳಿಸಿದ್ದಾರೆ. ಸದ್ಯ ಚಂಡಮಾರುತವು ವಿಯೆಟ್ನಾಂನತ್ತ ಚಲಿಸುತ್ತಿದ್ದು, ಅಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ.

ಚಂಡಮಾರುತ ತನ್ನೊಂದಿಗೆ 315 ಕಿ.ಮೀ ಗಾಳಿಯನ್ನೂ ಹೊತ್ತುತಂದಿದೆ. ಪರಿಣಾಮ ಸಮುದ್ರದಲ್ಲಿ ಸುನಾಮಿ ಮಾದರಿಯ ಅಲೆಗಳು ಎದ್ದಿದ್ದು, ಸಮುದ್ರದ ನೀರು ಕರಾವಳಿ ನಗರಗಳಲ್ಲಿ ಒಂದು ಕಿ.ಮೀ ಒಳಗೂ ನುಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಅಲ್ಲದೆ ಭಾರೀ ಪ್ರಮಾಣದ ಗಾಳಿ ಹೊಡೆತಕ್ಕೆ ಕಟ್ಟಡಗಳು ತರಗೆಲೆಯಂತೆ ಉರುಳಿದ್ದು, ಸಾವಿರಾರು ಮನೆಗಳು ಧ್ವಂಸವಾಗಿವೆ. ಟಾಕ್ಲಬನ್‌ ವಿಮಾನ ನಿಲ್ದಾಣವೂ ಭಾರೀ ನೀರು, ಕೆಸರಲ್ಲಿ ಮುಳುಗಿಹೋಗಿದೆ.

More than 10,000 feared dead in typhoon-ravaged Philippines

ಸರ್ಕಾರಿ ಅಂಕಿ ಅಂಶಗಳ ಪ್ರಕಾರ 36 ಪ್ರಾಂತ್ಯಗಳಲ್ಲಿ ಸುಮಾರು 40 ಲಕ್ಷ ಮಂದಿ ಚಂಡಮಾರುತದ ಆರ್ಭಟಕ್ಕೆ ನಲುಗಿದ್ದಾರೆ. ಸಾರಿಗೆ, ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಪರಿಹಾರ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಗಿದೆ. ಸರ್ಕಾರ ಸಾವನ್ನಪ್ಪಿದವರ ಸಂಖ್ಯೆ 150 ಎಂದು ಹೇಳಿದ್ದರೂ, ಸ್ಥಳೀಯ ರೆಡ್‌ಕ್ರಾಸ್‌ ಅಧಿಕಾರಿಗಳು ಸಾವಿನ ಸಂಖ್ಯೆ 1200 ದಾಟಲಿದೆ. ಚಂಡಮಾರುತಕ್ಕೆ ತುತ್ತಾದ ಪ್ರದೇಶಗಳ ಪೂರ್ಣ ಸಮೀಕ್ಷೆ ಬಳಿಕ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ 8 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಲೈಟೆ ಮತ್ತು ಸಮಾರ್‌ ದ್ವೀಪಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ಸಮುದ್ರದಲೆಗಳು 19 ಅಡಿ ಎತ್ತರಕ್ಕೆ ಅಪ್ಪಳಿಸಿದ್ದವು. ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ತಲುಪಲು ಇದೀಗ ರಕ್ಷಣಾ ತಂಡಗಳು ಹರಸಾಹಸ ಮಾಡುತ್ತಿದೆ. ಸಂತ್ರಸ್ತರಿಗೆ ಪರಿಹಾರ, ಆರ್ಥಿಕ ನೆರವು ನೀಡಲು ಬಯಸುವವರು ಈ ಕೆಳಗಿನ ವಿಳಾಸ ಬಳಸಬಹುದು.

• National Disaster Risk Reduction and Management Council (NDRRMC)
Account Name : NDRRMC Donated Funds
Account Numbers: 0435-021927-530 (US $ Account);
Swift Code : DBPHPHMM Account #36002016
Address: Development Bank of the Philippines (DBP), Camp Aguinaldo Branch, PVAO Compound, Camp Aguinaldo, Quezon City, Philippines 1110
Contact Person: Ms. Rufina A. Pascual
Contact Number: (632) 421-1920;911-5061 to 65 local 116
Email : [email protected]; website : http://www.ndrrmc.gov.ph

•Department of Social Welfare and Development (DSWD)
Account No.: 3124-0055-81
Bank Branch Address: Land Bank of the Philippines, Batasan, Quezon City, Philippines
Contact Person: Ms. Fe Catalina Ea
Contact No.: (632)931-8101 local 226; CP(632)918-628-1897
Website: http://www.dswd.gov.ph

•Philippine Red Cross (PRC)
http://www.redcross.org.ph; Tel. (632)527-0000
Banco De Oro: 10-453-0039482;
Swift Code: BNORPHMM
Metrobank: 151-2-15100218-2;
Swift Code: MBTCPHMM
Philippine National Bank: 3752 8350 0042;
Swift Code: PNBMPHMM
Unionbank of the Philippines: 1315 4000 0090;
Swift Code: UBPHPHMM

English summary
A super typhoon that destroyed entire towns across the Philippines is believed to have killed more than 10,000 people, authorities said today, which would make it the country's deadliest recorded natural disaster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X