ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಜಾಂಬಿಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿ ಪಡೆದ 'ಇದಾಯಿ' ಚಂಡಮಾರುತ

|
Google Oneindia Kannada News

ಬೀರಾ, ಮಾರ್ಚ್ 19: ಆಫ್ರಿಕಾ ಖಂಡದ ಮೊಜಾಂಬಿಕ್‌ನಲ್ಲಿ 'ಇದಾಯಿ' ಭೀಕರ ಚಂಡಮಾರುತಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ವಿದ್ಯುತ್‌ ಸಂಪರ್ಕ ಕಡಿಗೊಂಡಿದ್ದು, ಸೇತುವೆಗಳು ಮುಳುಗಡೆಯಾಗಿವೆ. ಚಿಮಾನಿಮನಿ ಜಿಲ್ಲೆಯಲ್ಲಿ ಕನಿಷ್ಠ 25 ಮನೆಗಳು ಹಾನಿಗೊಳಗಾಗಿವೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಚಿಮಾನಿಮಾನಿ ಜಿಲ್ಲೆಯ ಸಂಸತ್‌ ಸದಸ್ಯ ಜೋಶುವಾ ಸಾಕ್ಕೊ ತಿಳಿಸಿದ್ದಾರೆ.

ಅಮೆರಿಕದಲ್ಲಿ'ಬಾಂಬ್ ಸೈಕ್ಲೋನ್' ಅಬ್ಬರ: 1,339 ವಿಮಾನಗಳ ಹಾರಾಟ ಸ್ಥಗಿತ ಅಮೆರಿಕದಲ್ಲಿ'ಬಾಂಬ್ ಸೈಕ್ಲೋನ್' ಅಬ್ಬರ: 1,339 ವಿಮಾನಗಳ ಹಾರಾಟ ಸ್ಥಗಿತ

ಇದಾಯಿ ಚಂಡಮಾರುತದಿಂದ ಮೊಜಾಂಬಿಕ್ ಗಡಿಯಲ್ಲಿರುವ ಮ್ಯಾನಿಕಲ್ಯಾಂಡ್‌ ಪ್ರಾಂತ್ಯದ ಸಾವಿರಾರು ಜನರ ಬದುಕು ಅಸ್ತವ್ಯಸ್ತಗೊಂಡಿದೆ.

More than 1,000 feared dead in Mozambique storm

ಚಂಡಮಾರುತದಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಳಾಗಿದೆ. ಅನೇಕ ಕಡೆ ಸಂಪರ್ಕ ಕಡಿದು ಹೋಗಿದೆ ಮತ್ತು ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಸಾಮಾನ್ಯ ಕಾರ್ಯಗಳ ಮೇಲೂ ಬಹಳ ಕೆಟ್ಟ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

ಇನ್ನು ಪಂಗ್ಯು ಮತ್ತು ಬುಜಿ ನದಿಗಳ ಪ್ರವಾಹದಿಂದ ಅನೇಕ ಗ್ರಾಮಗಳು ಕಣ್ಮರೆಯಾಗಿವೆ. ನದಿಗಳ ನೀರಿನಲ್ಲಿ ದೇಹಗಳು ತೇಲುತ್ತಿರುವುದು ಸಾಮಾನ್ಯವಾಗಿದ್ದು, ಪ್ರವಾಹ ಮತ್ತು ಚಂಡಮಾರುತದಂತಹ ವಿಕೋಪಗಳಿಂದ ಜನರ ಜೀವ ಕಾಪಾಡುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇದಲ್ಲದೆ ಗುರುವಾರ ರಾತ್ರಿ ಉಂಟಾದ ಭೂಕುಸಿತದಿಂದಾಗಿ 84 ಕ್ಕಿಂತ ಹೆಚ್ಚು ಸಾವು ಅಧಿಕೃತವಾಗಿ ದಾಖಲಾಗಿದೆ ಎಂದು ವಿಪತ್ತು ನಿರ್ವಹಣಾ ರಾಷ್ಟ್ರೀಯ ಸಂಸ್ಥೆ ತಿಳಿಸಿದೆ. ಈ ಘಟನೆ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಪರಿಸ್ಥಿತಿಯು ಹೆಚ್ಚು ಗಂಭೀರವಾಗಿದೆ ಎಂದು ಹೇಳಿದರು.

ಹಾಗೆಯೇ ರಕ್ಷಣಾ ಮತ್ತು ಭದ್ರತಾ ಪಡೆಗಳು ಕಾಣೆಯಾದವರಿಗಾಗಿ ಹುಡುಕಾಟದಲ್ಲಿ ನಿರತವಾಗಿವೆ. ರಕ್ಷಣಾ ಸಹಾಯಕ್ಕಾಗಿ ಹೆಲಿಕಾಪ್ಟರ್ ಮತ್ತು ವಿಮಾನಗಳು ವಾಯು ಸಂಪನ್ಮೂಲ ಸೇವೆಯನ್ನು ತ್ವರಿತವಾಗಿ ಬಳಸಿಕೊಂಡು ಮಾನವೀಯ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
More than a thousand people are feared to have died in a cyclone that smashed into Mozambique last week, while scores were killed and more than 200 are missing in neighbouring Zimbabwe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X