ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅಗ್ಗದ ಕ್ಯಾನ್ಸರ್ ಔಷಧಕ್ಕೆ ಚೀನಾದಲ್ಲಿ ಭಾರೀ ಬೇಡಿಕೆ

|
Google Oneindia Kannada News

ಚೀನಾವು ಅಲ್ಲಿನ ಸರಕಾರಿ ಆಸ್ಪತ್ರೆಗಳಿಗೆ ಕ್ಯಾನ್ಸರ್ ಔಷಧಗಳೂ ಸೇರಿ ಡಜನ್ ಗಟ್ಟಲೆ ಔಷಧಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ದೀರ್ಘ ಕಾಲದ ಚರ್ಚೆಯ ನಂತರ ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿಗಳಿಗೆ ಚೀನಾವು ಆ ದೇಶದಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡಿತ್ತು.

ಅಲ್ಲಿನ ರೋಗಿಗಳ ಮೇಲೆ ಹೊರೆ ತಗ್ಗಿಸುವ ಕಾರಣಕ್ಕೆ ಚೀನಾದ ಸರಕಾರಿ ಆಸ್ಪತ್ರೆಗಳಲ್ಲಿ ವಿದೇಶಿ ಔಷಧಗಳು ನೂರು-ಸಾವಿರಗಟ್ಟಲೆ ಬ್ಯಾಚ್ ಗಳಲ್ಲಿ ದೊರೆಯುತ್ತವೆ. ಹೊಸದಾಗಿ ಹದಿನೇಳು ಕ್ಯಾನ್ಸರ್ ಔಷಧಗಳನ್ನು ಚೀನಾದ ರಾಷ್ಟ್ರೀಯ ಮೂಲಭೂತ ವೈದ್ಯಕೀಯ ವಿಮೆಯಲ್ಲಿ ಕಳೆದ ವರ್ಷದ ಅಕ್ಟೋಬರ್ ನಿಂದ ಸೇರ್ಪಡೆ ಮಾಡಲಾಗಿದೆ. ಸದ್ಯಕ್ಕೆ ಆ ದೇಶದ ಅರ್ಧಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳಲ್ಲಿ ಔಷಧಗಳು ಲಭ್ಯವಿವೆ.

40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ 40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ

ಈ ಎಲ್ಲ ಮಾಹಿತಿಯನ್ನು ಅಲ್ಲಿನ ಆರೋಗ್ಯ ಆಯೋಗವೇ ನೀಡಿದ್ದರೂ ಆಮದು ಮಾಡಿಕೊಂಡ ಔಷಧಗಳು ಯಾವ ದೇಶಗಳವು ಎಂಬ ಮಾಹಿತಿ ಇಲ್ಲ. ಆದರೆ ಅವುಗಳು ಭಾರತದ್ದಲ್ಲ ಎಂಬುದು ಮಾತ್ರ ತಿಳಿದುಬಂದಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

More demand for effective, cheap cancer drugs of India in China

ಕಳೆದ ವರ್ಷ ಆಕಾಶ ನೀಡಲಾದ ನಲವತ್ತೆಂಟು ಹೊಸ ಔಷಧಗಳ ಪಟ್ಟಿಯೊಳಗೆ ಕ್ಯಾನ್ಸರ್ ಸೇರಿದಂತೆ ಅಪರೂಪದ ಕಾಯಿಲೆಯ ಹದಿನೇಳು ಔಷಧಗಳು ಒಳಗೊಂಡಿವೆ. ಚೀನಿ ಮಾರುಕಟ್ಟೆಯಲ್ಲಿ ದೊರೆಯುವ ಇತರ ಪರ್ಯಾಯ ಔಷಧಗಳಿಗಿಂತ ಇವು ಅಗ್ಗ. ಭಾರತದ ಔಷಧಗಳು ಅದರಲ್ಲೂ ಕ್ಯಾನ್ಸರ್ ಗೆ ಇರುವ ಔಷಧಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚು.

ಜಗತ್ತಿನಲ್ಲೇ ಅತಿ ದೊಡ್ಡ ಕ್ಯಾನ್ಸರ್ ಗಡ್ಡೆ ಆಪರೇಷನ್, ತೂಕ ಗೊತ್ತಾ? ಜಗತ್ತಿನಲ್ಲೇ ಅತಿ ದೊಡ್ಡ ಕ್ಯಾನ್ಸರ್ ಗಡ್ಡೆ ಆಪರೇಷನ್, ತೂಕ ಗೊತ್ತಾ?

ಏಕೆಂದರೆ, ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆ ವೆಚ್ಚ ಬಲು ದುಬಾರಿ. ಆದ್ದರಿಂದ ಅಗ್ಗದ ಹಾಗೂ ಪರಿಣಾಮಕಾರಿ ಭಾರತೀಯ ಔಷಧಗಳು ಆ ಬೇಡಿಕೆಯನ್ನು ಪೂರೈಸುತ್ತವೆ. ಆದರೆ ಭಾರತದ ಜೆನರಿಕ್ ಔಷಧಗಳನ್ನು ಚೀನಾಗೆ ಆಮದು ಮಾಡಲು ಸುಲಭವಾಗುವಂತೆ ನಿಯಮ ರೂಪಿಸಲು ಒಪ್ಪಿಗೆ ಸಿಕ್ಕಿಲ್ಲ.

English summary
China has imported dozens of new drugs including cancer medicines for government hospitals while it engages New Delhi in long-drawn negotiations to allow Indian pharmaceuticals access to the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X