ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಮೇಲೆ 4ಜಿ ಮೊಬೈಲ್ ನೆಟ್ವರ್ಕ್!

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 28: 'ಚಂದಮಾಮನನ್ನು ತೋರಿಸಿ ಮಕ್ಕಳಿಗೆ ಊಟ ಮಾಡಿಸುವ ಕಾಲ ಹಳೆಯದಾಯ್ತು. ಇನ್ಮುಂದೆ ಚಂದ್ರನಿಗೆ ಕರೆ ಮಾಡಿ, ಚೆಂದದ ಎಚ್ ಡಿ ಗುಣಮಟ್ಟದ ವಿಡಿಯೋ ತರೆಸಿಕೊಳ್ಳಬಹುದಾದ ಕಾಲ ದೂರವಿಲ್ಲ'

ಚಂದ್ರನ ಅಂಗಳದ ಮೇಲೆ 4ಜಿ ಮೊಬೈಲ್ ನೆಟ್ವರ್ಕ್ ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ಮುಂದಿನ ವರ್ಷ ಈ ವೇಳೆಗೆ ಚಂದ್ರನಿಂದ ವಿಡಿಯೋ ನಿರೀಕ್ಷಿಸಬಹುದು. ವೋಡಾಫೋನ್, ನೋಕಿಯಾ ಹಾಗೂ ಕಾರು ಉತ್ಪಾದಕ ಸಂಸ್ಥೆ ಔಡಿ(Audi) ಸಂಸ್ಥೆ ಈ ಯೋಜನೆಯಲ್ಲಿ ಜಂಟಿಯಾಗಿ ತೊಡಗಿಕೊಂಡಿವೆ.

ಜರ್ಮನಿಯ ಬರ್ಲಿನ್ ಮೂಲದ ವಿಜ್ಞಾನಿಗಳ ಕನಸಿನ ಮೂನ್ ಮಿಷನ್ ಯೋಜನೆಗೆ ಖಾಸಗಿ ಸಂಸ್ಥೆಗಳು ಹಣ ಹೂಡಿಕೆ ಮಾಡಿವೆ. ಹೀಗಾಗಿ, ಮುಂದಿನ ವರ್ಷ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಸಿಗಲಿದೆ. ವೊಡಾಫೋನ್ ಜರ್ಮನಿ ಈ ಗೆ ಕೈಹಾಕಿದೆ. ನಾಸಾ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟು 50 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಜಾರಿಯಲ್ಲಿದೆ

Moon to get 4G mobile network to stream HD video back to Earth

ಬರ್ಲಿನ್ ಮೂಲದ ಕಂಪನಿ ಪಿಟಿಎಸ್ ಸೈಂಟಿಸ್ಟ್ಸ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ರಾಬರ್ಟ್ ಬೊಹ್ಮೆ ಅವರು ಈ ಬಗ್ಗೆ ಮಾತನಾಡಿ, ಕೇಪ್ ಕ್ಯಾನವರಲ್ ನಿಂದ 2019ರಲ್ಲಿ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಇದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಮೊಟ್ಟ ಮೊದಲ ಎಚ್ ಡಿ ವಿಡಿಯೋ ಫೀಡ್ ಚಂದ್ರನಿಂದ ಭೂಮಿಗೆ ಸಿಗಲಿದ್ದು, ಬರ್ಲಿನ್ ನ ಮಿಷನ್ ಕಂಟ್ರೋಲ್ ಕೇಂದ್ರದಿಂದ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ. ಇದು ಟೆಲಿಕಾಂ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯಾಗಲಿದೆ ಎಂದಿದ್ದಾರೆ.

English summary
The Moon will get its first 4G mobile network next year, enabling high-definition streaming from the lunar landscape back to Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X