ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟದಲ್ಲೂ ಚುನಾವಣೆ ಗೆದ್ದ ದಕ್ಷಿಣ ಕೊರಿಯ ಆಡಳಿತ ಪಕ್ಷ

|
Google Oneindia Kannada News

ದಕ್ಷಿಣ ಕೊರಿಯ, ಏಪ್ರಿಲ್ 16: ಕೊರೊನಾ ವೈರಸ್ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿದೆ. 20 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ, 1.20 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದಕ್ಷಿಣ ಕೊರಿಯದಲ್ಲಿ ಸಂಸತ್ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮೂನ್ ಜೇ ಇನ್ ಅವರ ಡೆಮಾಕ್ರಟಿಕ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.

ದಕ್ಷಿಣ ಕೊರಿಯಾದಲ್ಲಿ ಸಂಸದೀಯ ಚುನಾವಣೆ: ಕೊರೊನಾ ಸೋಂಕಿತರಿಂದ ಮತದಾನದಕ್ಷಿಣ ಕೊರಿಯಾದಲ್ಲಿ ಸಂಸದೀಯ ಚುನಾವಣೆ: ಕೊರೊನಾ ಸೋಂಕಿತರಿಂದ ಮತದಾನ

300 ಕ್ಷೇತ್ರಗಳ ಚುನಾಚಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಸೇರಿ 180 ಸೀಟ್ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಈ ಮೂಲಕ ಹಾಲಿ ಅಧ್ಯಕ್ಷ ಮೂನ್ ಜೇ ಇನ್ ಮತ್ತೊಮ್ಮೆ ದಕ್ಷಿಣ ಕೊರಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಅಧಿಕಾರಿ ಉಳಿಸಿಕೊಂಡಿದ್ದಾರೆ.

Moon Jae In Wins President Election Amid Coronavirus

ದಕ್ಷಿಣ ಕೊರಿಯದ ಇತಿಹಾಸದಲ್ಲಿ ಪಕ್ಷವೊಂದು ಇಷ್ಟು ದೊಡ್ಡ ಮಟ್ಟದ ಗೆಲುವು ಕಂಡಿರುವುದು ಇದೇ ಮೊದಲು ಎನ್ನಲಾಗಿದೆ. 1992ರ ನಂತರ ದಕ್ಷಿಣ ಕೊರಿಯದಲ್ಲಿ ಶೇಕಡಾ 66.2 ರಷ್ಟು ಮತದಾನ ಆಗಿರುವುದು ಇದೇ ಮೊದಲು.

ಅಂದ್ಹಾಗೆ, ದಕ್ಷಿಣ ಕೊರಿಯದಲ್ಲಿ ಇದುವರೆಗೂ 10,613 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 229 ಜನರು ಸಾವನ್ನಪ್ಪಿದ್ದಾರೆ. 7757 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದು, 2627 ಜನರು ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
South Korea’s ruling Democratic Party has won 180 seats and Moon Jae In continue his power. Biggest win by any party since 1987.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X