ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ

|
Google Oneindia Kannada News

ಜೂರಿಕ್, ಜೂನ್ 28: ಕಪ್ಪುಹಣಕ್ಕೆ ನಿಯಂತ್ರಣ ಹಾಕುವ ಸರ್ಕಾರದ ಪ್ರಯತ್ನಗಳ ನಡುವೆಯೂ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಹಣದ ಪ್ರಮಾಣ ಶೇ 50ರಷ್ಟು ಹೆಚ್ಚಾಗಿದೆ.

2017ರಲ್ಲಿ ಭಾರತೀಯ ಸಿರಿವಂತರು ಸ್ವಿಸ್‌ ಬ್ಯಾಂಕುಗಳಲ್ಲಿ 7 ಸಾವಿರ ಕೋಟಿ ರೂ. ಹಣ ಇರಿಸಿದ್ದಾರೆ ಎಂದು ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.

ಪಾಕ್‌ನಲ್ಲಿ ಆತ್ಮಾಹುತಿ ದಾಳಿಗೆ ಮಕ್ಕಳ ಬಳಕೆ: ವಿಶ್ವಸಂಸ್ಥೆಪಾಕ್‌ನಲ್ಲಿ ಆತ್ಮಾಹುತಿ ದಾಳಿಗೆ ಮಕ್ಕಳ ಬಳಕೆ: ವಿಶ್ವಸಂಸ್ಥೆ

ಸ್ವಿಸ್ ಬ್ಯಾಂಕುಗಳಲ್ಲಿ ಎಲ್ಲ ವಿದೇಶ ಗ್ರಾಹಕರು ಇರಿಸುವ ಒಟ್ಟಾರೆ ಮೊತ್ತವು ಮೂರು ಪಟ್ಟು ಏರಿಕೆಯಾಗಿದ್ದು, 2017ರಲ್ಲಿ 100 ಲಕ್ಷ ಕೋಟಿ ಹಣ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

money of indians in swiss bank rised to 50%

ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮಾಹಿತಿ ನೀಡುವಂತೆ ಭಾರತ ಸರ್ಕಾರ ಬ್ಯಾಂಕುಗಳಿಗೆ ಮನವಿ ಮಾಡುತ್ತಿದೆ. ಆದರೆ, ಗೋಪ್ಯತೆ ಕಾಪಾಡಿಕೊಳ್ಳುವ ಸಲುವಾಗಿ ಮಾಹಿತಿ ದೊರಕುತ್ತಿಲ್ಲ.

ಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿ

2016ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸುವ ಹಣದ ಪ್ರಮಾಣ ಶೇ 45ರಷ್ಟು ಕುಸಿತವಾಗಿತ್ತು. ಆ ವರ್ಷ 4,500 ಕೋಟಿ ರೂಪಾಯಿ ಹಣ ಜಮೆಯಾಗಿತ್ತು. 1987ರಿಂದ ಬ್ಯಾಂಕುಗಳ ಪ್ರಾಧಿಕಾರ ಹಣದ ಮಾಹಿತಿ ವಿವರ ನೀಡಲು ಆರಂಭಿಸಿದ ಬಳಿಕ ಇದು ಅತಿ ಕಡಿಮೆ ಮೊತ್ತವಾಗಿತ್ತು.

2006ರ ಅಂತ್ಯದ ವೇಳೆಗೆ 23,000 ಕೋಟಿ ರೂ. ಹಣವನ್ನು ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಇರಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಆದರೆ, ದಶಕದಿಂದ ಈಚೆಗೆ ಅದರ ಹತ್ತನೇ ಒಂದು ಭಾಗ ಮಾತ್ರ ಹಣ ಜಮೆಯಾಗುತ್ತಿದೆ.

English summary
The Indian money in the Swiss Banks rose over 50 oper cent in 2017, according to Swiss National Bank annual data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X