ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅಮೆರಿಕ ಪ್ರವಾಸ: ತನ್ನ ವಾಯು ಪ್ರದೇಶ ಬಳಸಲು ಪಾಕ್ ಅನುಮತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಕಾಲ ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನ ಅನುಮತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ನಾಳೆಯಿಂದ 3 ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸೆ. 26ರಂದು ದೆಹಲಿಗೆ ವಾಪಸ್ ಆಗಮಿಸಲಿದ್ದಾರೆ. ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಹಿಂದಿರುವ ಪ್ರಮುಖ ಕಾರಣಗಳುಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಹಿಂದಿರುವ ಪ್ರಮುಖ ಕಾರಣಗಳು

ಬಳಿಕ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗ ಸಭೆಯಲ್ಲಿ ಕೂಡ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

Modis Flight To US Will Avoid Kabul, Pak Gives Nod For Usage Of Airspace

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಗೆ ತೆರಳಲು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲಾಗುತ್ತದೆ. ಪ್ರಧಾನಿಯ ಏರ್ ಇಂಡಿಯಾ ಒನ್ ಬೋಯಿಂಗ್‌ 777-300 ಇಆರ್‌ ವಿಮಾನವು ಪಾಕ್ ವಾಯುಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ತಾನ ಸರ್ಕಾರದ ಅನುಮತಿ ನೀಡಿದೆ.

ಸೆಪ್ಟೆಂಬರ್ 23 ರಿಂದ 3 ದಿನಗಳ ಕಾಲ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ ದೆಹಲಿಯಿಂದ ಹೊರಟಿರುವ ನರೇಂದ್ರ ಮೋದಿ ರಾತ್ರಿ ವೇಳೆಗೆ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ತಲುಪಲಿದ್ದಾರೆ.

ಭಾರತದಲ್ಲಿ ಕೊವಿಡ್ ಅಟ್ಟಹಾಸ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿರುವ ಮೊದಲ ಪ್ರಮುಖ ವಿದೇಶಿ ಪ್ರವಾಸ ಇದಾಗಿದೆ. ನಾಳೆ ಬೆಳಿಗ್ಗೆ ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಆ್ಯಪಲ್ ಸಿಇಓ ಟೀಮ್ ಕುಕ್ ಸೇರಿದಂತೆ ಪ್ರಮುಖ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು.

ಭಾರತದಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳ ಸಿಇಓಗಳನ್ನು ಆಹ್ವಾನಿಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನ ನೀಡುವರು.

ಬಳಿಕ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಕಮಲಾ ಹ್ಯಾರಿಸ್, ಭಾರತ ಮೂಲದವರು. ಹೀಗಾಗಿ ತಮ್ಮ ಆಡಳಿತಾವಧಿಯಲ್ಲಿ ಭಾರತಕ್ಕೆ ಅನುಕೂಲವಾಗುವ ನೀತಿ, ನಿಯಮಗಳನ್ನು ಜಾರಿಗೆ ತರಬೇಕೆಂದು ಕಮಲಾ ಹ್ಯಾರಿಸ್ ಜೊತೆಗೆ ನರೇಂದ್ರ ಮೋದಿ ಚರ್ಚೆ ನಡೆಸುವರು.

ಸೆಪ್ಟಂಬರ್ 25ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುವರು. ಸೆೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿಯೇ ಮೊದಲ ಭಾಷಣಕಾರರು.

2019ರಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಖುದ್ದಾಗಿ ಹೋಗಿ ಭಾಗವಹಿಸಿದ್ದರು. 2020ರಲ್ಲಿ ಕೊರೊನಾದ ಕಾರಣದಿಂದ ವರ್ಚುವಲ್ ಆಗಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾರತದಿಂದಲೇ ಮಾತನಾಡಿದ್ದರು. ಈಗ ಖುದ್ದಾಗಿ ಹೋಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವರು.

2019ರ ಆಗಸ್ಟ್‌ 5 ರಂದು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಭಾರತಕ್ಕೆ ತನ್ನ ವಾಯು ಮಾರ್ಗವನ್ನು ಬಳಸುವುದನ್ನು ಪಾಕಿಸ್ತಾನ ನಿಷೇಧ ಹೇರಿತ್ತು.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಸುತ್ತು ಬಳಸಿ ವಿದೇಶ ಪ್ರವಾಸ ಮಾಡಿದ್ದರು. ಇದೀಗ ಅಮೆರಿಕ ಪ್ರವಾಸಕ್ಕೆ ಮೋದಿ ಅವರಿಗೆ ಪಾಕಿಸ್ತಾನ ತನ್ನ ವಾಯು ಮಾರ್ಗ ಬಳಸಲು ಅನುಮತಿ ನೀಡಿದೆ.

ಈ ಹಿಂದೆ ಪ್ರಧಾನಿ ಮೋದಿಯವರ ಅಮೆರಿಕ ಹಾಗೂ ಜರ್ಮನಿ ಪ್ರವಾಸ ಹಾಗೂ ರಾಷ್ಟ್ರಪತಿ ಕೋವಿಂದ್‌ ಅವರ ಐಲ್ಯಾಂಡ್‌ ಪ್ರವಾಸದ ವೇಳೆ ಪಾಕಿಸ್ತಾನ ತನ್ನ ವಾಯುಸೀಮೆ ಬಳಸಲು ಅವಕಾಶ ನಿರಾಕರಿಸಿತ್ತು.

ಪಾಕಿಸ್ತಾನದ ವಾಯು ಮಾರ್ಗ ಬಳಸಲು ಭಾರತೀಯ ಅಧಿಕಾರಿಗಳು ಪಾಕಿಸ್ತಾನ ಸರ್ಕಾರದೊಂದಿಗೆ ಅನುಮತಿ ಕೋರಿದ್ದು, ಇದಕ್ಕೆ ಪಾಕ್‌ ಅಸ್ತು ಎಂದಿದೆ. ಹೀಗಾಗಿ ಪಾಕ್‌ ವಾಯು ಸೀಮೆ ಬಳಸಿಕೊಂಡೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಹಾರಿದ್ದಾರೆ.

ಇದಾದ ಕೆಲ ದಿನಗಳ ನಂತರ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ತನ್ನ ವಾಯು ಸೀಮೆ ಮೂಲಕ ಪ್ರಯಾಣಿಸಲು ಭಾರತ ಅವಕಾಶ ಕಲ್ಪಿಸಿಕೊಟ್ಟಿತ್ತು.

ಭಾರತದ ಈ ನಿಲುವು ಭಾರೀ ಪ್ರಶಂಸೆಗೂ ಕಾರಣವಾಗಿತ್ತು. ಇದೀಗ ಪಾಕಿಸ್ತಾನ ಕೂಡ ಭಾರತಕ್ಕೆ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿದೆ.

English summary
Prime Minister Narendra Modi's non-stop flight to the US on Wednesday will fly over Pakistan's airspace to avoid Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X