ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನ ಅತೀದೊಡ್ಡ ದೇವಸ್ಥಾನ ನಿರ್ಮಾಣಕ್ಕೆ ಮೋದಿ ಅಡಿಗಲ್ಲು

By Sachhidananda Acharya
|
Google Oneindia Kannada News

ದುಬೈ, ಫೆಬ್ರವರಿ 11: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅತೀ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಅಡಿಗಲ್ಲು ಹಾಕಿದರು. ಮುಸ್ಲಿಂ ದೇಶದಲ್ಲಿ ತಲೆ ಎತ್ತಲಿರುವ ಮೊದಲ ದೇವಸ್ಥಾನವಾಗಿದೆ.

ದುಬೈನ 'ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾ (ಬಿಎಪಿಎಸ್)' ದೇವಾಲಯ ನಿರ್ಮಾಣ ಯೋಜನೆಯನ್ನು ಪ್ರಧಾನಿ ಉದ್ಘಾಟನೆ ಮಾಡಿದರು. ನಂತರ ದುಬೈನ ಪ್ರಖ್ಯಾತ 'ಒಪೆರಾ ಹೌಸ್'ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬುರ್ಜ್ ಕಲಿಫಾಕ್ಕೆ ಕಳೆ ನೀಡಿದ ನಮ್ಮ ಹೆಮ್ಮೆಯ ತ್ರಿವರ್ಣಧ್ವಜ!ಬುರ್ಜ್ ಕಲಿಫಾಕ್ಕೆ ಕಳೆ ನೀಡಿದ ನಮ್ಮ ಹೆಮ್ಮೆಯ ತ್ರಿವರ್ಣಧ್ವಜ!

"ಸರಿ ಸುಮಾರು 30 ಲಕ್ಷ ಭಾರತೀಯರಿಗೆ ಮನೆಯ ವಾತಾವರಣ ನಿರ್ಮಿಸಿಕೊಟ್ಟ ಅರಬ್ ದೇಶಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ," ಎಂದು ಪ್ರಧಾನಿ ಮೋದಿ ಹೇಳಿದರು.

Modi inaugurates Hindu Temple project in Dubai

ಅದ್ಭುತ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದಕ್ಕೆ ಹಿಸ್ ಹೈನೆಸ್ ಕ್ರೌನ್ ರಾಜರಿಗೆ ನಾನು 125 ಕೋಟಿ ಭಾರತೀಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಮೋದಿ ತಿಳಿಸಿದರು.

Modi inaugurates Hindu Temple project in Dubai

"ವಿಶ್ವಬ್ಯಾಂಕ್ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಶ್ರೇಯಾಂಕದಲ್ಲಿ ಭಾರತ 142ರಿಂದ 100ಕ್ಕೆ ಏರಿಕೆಯಾಗಿದೆ. ಆದರೆ ನಾವು ಇಷ್ಟಕ್ಕೆ ತೃಪ್ತರಾಗಿಲ್ಲ. ನಾವು ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಬಯಸಿದ್ದೇವೆ. ಇದನ್ನು ಸಾಧಿಸಲು ಬೇಕಾಗಿದ್ದನ್ನೆಲ್ಲಾ ನಾವು ಮಾಡಲಿದ್ದೇವೆ," ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

English summary
PM Narendra Modi inaugurates Bochasanwasi Shri Akshar Purushottam Swaminarayan Sanstha (BAPS) Temple project in Dubai, UAE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X