ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್‌ನಲ್ಲಿ ಮೋದಿ: ನೂತನ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ವಿಶೇಷ ಸ್ನೇಹ

|
Google Oneindia Kannada News

ಪ್ಯಾರಿಸ್ ಮೇ 05: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ಯುರೋಪಿಯನ್ ರಾಷ್ಟ್ರಗಳ ಪ್ರವಾಸದ ಮೂರನೇ ಮತ್ತು ಅಂತಿಮ ದಿನದಲ್ಲಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ತೆರಳಿದ್ದಾರೆ. ಫ್ರಾನ್ಸ್ನಲ್ಲಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದರು. ಸಂವಾದದ ಸಮಯದಲ್ಲಿ, ಫ್ರೆಂಚ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆಯಾದ ಮ್ಯಾಕ್ರನ್ ಅವರನ್ನು ಪ್ರಧಾನಿ ಅಭಿನಂದಿಸಿದರು.

ಪ್ಯಾರಿಸ್‌ನ ಎಲಿಸೀ ಪ್ಯಾಲೇಸ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ ನೀಡಿದರು. ಈ ವೇಳೆ ಮಾಕನ್ ಮತ್ತು ಮೋದಿ ಪರಸ್ಪರ ಅಪ್ಪಿಕೊಂಡರು. ಪ್ಯಾರಿಸ್‌ನಲ್ಲಿರುವ ಫ್ರಾನ್ಸ್ ಅಧ್ಯಕ್ಷರ ಅಧಿಕೃತ ನಿವಾಸ ಎಲಿಸೀ ಪ್ಯಾಲೇಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರು ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ನಾಯಕರ ನಡುವೆ ಹಲವು ಪ್ರಮುಖ ವಿಷಯಗಳ ಕುರಿತು ವ್ಯಾಪಕ ಚರ್ಚೆ ನಡೆದಿದೆ.

ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ, ಇಂದು ಫ್ರಾನ್ಸ್ ಭೇಟಿಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ, ಇಂದು ಫ್ರಾನ್ಸ್ ಭೇಟಿ

ಪ್ರಧಾನಿ ಕಾರ್ಯಾಲಯ (PMO) ಟ್ವೀಟ್‌ನಲ್ಲಿ, "ಪಿಎಂ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ಯಾರಿಸ್‌ನಲ್ಲಿ ಭೇಟಿಯಾದರು. ಈ ಸಭೆಯು ಇಂಡೋ-ಫ್ರೆಂಚ್ ಸ್ನೇಹಕ್ಕೆ ಪ್ರಚೋದನೆಯನ್ನು ನೀಡುತ್ತದೆ" ಎಂದು ಬರೆಯಲಾಗಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‌ನಲ್ಲಿ, "ಭಾರತ ಹಾಗೂ ಫ್ರಾನ್ಸ್ ಇಬ್ಬರು ಸ್ನೇಹಿತರ ನಡುವಿನ ಸಭೆ ನಡೆದಿದೆ. ಫ್ರೆಂಚ್ ಅಧ್ಯಕ್ಷರ ಹೊಸ ಸಂಭಾಷಣೆ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಅವಕಾಶ" ಎಂದು ಹೇಳಿದ್ದಾರೆ.

ಮೋದಿಗೆ ಆಟೋಗ್ರಾಫ್ ಕೇಳಿದ ಮಕ್ಕಳು

ಮೂರು ದಿನಗಳ ಯುರೋಪ್ ಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಫ್ರಾನ್ಸ್‌ಗೆ ತೆರಳಿದ್ದು, ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ಯಾರಿಸ್ ತಲುಪಿದ ನಂತರ ಪ್ರಧಾನಿ ಮೋದಿ ತಲುಪಿದ ಹೋಟೆಲ್‌ನ ಹೊರಗೆ ಭಾರತೀಯ ಸಮುದಾಯದ ಜನರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೂ ಹಾಜರಿದ್ದು ಅವರಲ್ಲಿ ಹಲವರು ಪ್ರಧಾನಿಯವರಿಂದ ಆಟೋಗ್ರಾಫ್ ಕೇಳಿದರು. ಪ್ಯಾರಿಸ್ ತಲುಪಿದ ನಂತರ ಪ್ರಧಾನಿ ಮೋದಿ ಅವರು ಫ್ರಾನ್ಸ್ ಭಾರತದ ಪ್ರಬಲ ಪಾಲುದಾರರಲ್ಲಿ ಒಂದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಫ್ರಾನ್ಸ್ ಅಧ್ಯಕ್ಷರಿಗೆ ಮೋದಿ ಅಭಿನಂದನೆ

ಏಪ್ರಿಲ್‌ನಲ್ಲಿ ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನಂತರ ಮ್ಯಾಕ್ರನ್ ಅವರೊಂದಿಗೆ ಸಭೆ ನಡೆಸಿದ ಮೊದಲ ವಿಶ್ವ ನಾಯಕ ಮೋದಿ. ಮೋದಿ ಮತ್ತು ಮ್ಯಾಕ್ರನ್ ನಡುವಿನ ಭೇಟಿಯನ್ನು ಹಲವು ರೀತಿಯಲ್ಲಿ ವಿಶೇಷವೆಂದು ಪರಿಗಣಿಸಲಾಗುತ್ತಿದೆ. ವರದಿಗಳ ಪ್ರಕಾರ, ರಫೇಲ್ ಮೆರೀನ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಬಹುದು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಡೆನ್ಮಾರ್ಕ್ ರಾಜಧಾನಿ ಕೋಪನ್ ಹೇಗನ್ ವಿಮಾನ ನಿಲ್ದಾಣದಿಂದ ಫ್ರಾನ್ಸ್ ಗೆ ತೆರಳಿದ್ದರು.

ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ

ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ

ಬುಧವಾರ ಕೋಪನ್‌ಹೇಗನ್‌ನಲ್ಲಿ ನಡೆದ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಇದರಲ್ಲಿ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ನಾವೀನ್ಯತೆ, ಡಿಜಿಟಲೀಕರಣ, ಹಸಿರು ಮತ್ತು ಸ್ವಚ್ಛ ಅಭಿವೃದ್ಧಿಯಲ್ಲಿ ಬಹುಪಕ್ಷೀಯ ಸಹಕಾರವನ್ನು ಚರ್ಚಿಸಲಾಯಿತು.

ಪ್ರಧಾನಿ ಮೋದಿ ಮಾರ್ಗರೆಥೆ ಸ್ವಾಗತ

ಪ್ರಧಾನಿ ಮೋದಿ ಮಾರ್ಗರೆಥೆ ಸ್ವಾಗತ

ಡೆನ್ಮಾರ್ಕ್ ರಾಣಿ ಮಾರ್ಗರೆಥೆ II ಮಂಗಳವಾರ ಕೋಪನ್ ಹ್ಯಾಗನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತವನ್ನು ಕೋರಿದರು. ರಾಣಿಯ ಆಳ್ವಿಕೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. 82 ವರ್ಷ ವಯಸ್ಸಿನ ರಾಣಿ 1972 ರಿಂದ ಡೆನ್ಮಾರ್ಕ್‌ನ ಆಳ್ವಿಕೆಯ ರಾಣಿಯಾಗಿದ್ದಾರೆ. ಡ್ಯಾನಿಶ್ ರಾಜಪ್ರಭುತ್ವವು ವಿಶ್ವದ ಅತ್ಯಂತ ಹಳೆಯದಾಗಿದೆ.

English summary
PM Narendra Modi meets French President Emmanuel Macron on the third day of his tour of three European countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X