ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೋದಿ

|
Google Oneindia Kannada News

ವಾಷಿಂಗ್ಟನ್,ಸೆಪ್ಟೆಂಬರ್ 25: ವಿಶ್ವಸಂಸ್ಥೆ ತನ್ನ ಕಾರ್ಯವೈಖರಿ ಬದಲಿಸಿಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಿಂದಲೇ ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ಜಾಗತಿಕ ಸಂಸ್ಥೆಗಳ ವಿರುದ್ಧ ವಿಶ್ವದ ಇತರೆ ನಾಯಕರು ಅಸಮಾಧಾನ ಹೊರಹಾಕಲು ಆರಂಭಿಸಿದ್ದರು.

ಈ ಹಿಂದೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗದಿರುವುದು, ವಿಶ್ವಸಂಸ್ಥೆ ಸಂರಚನೆ ಬದಲಿಸದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ಹೊರಹಾಕಿದ್ದರು.

ಆದರೆ ಈ ಬಾರಿ ಪ್ರಧಾನಿ ಮೋದಿಯು ಇನ್ನಷ್ಟು ತೀಕ್ಷ್ಣವಾಗಿ ವಿಶ್ವಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಶ್ವಸಂಸ್ಥೆಯ ಈಗಿನ ಕಾರ್ಯವೈಖರಿ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ, ಹವಾಮಾನ ವೈಪರಿತ್ಯ ಹಾಗೂ ಕೋವಿಡ್ ವಿಚಾರದಲ್ಲಿ ಇದನ್ನು, ಸಾಕ್ಷ್ಮೀಕರಿಸುವಂತ ಉದಾಹಣೆಗಳನ್ನು ಕಂಡಿದ್ದೇವೆ.

Narendra Modi

ವಿಶ್ವದ ನಾಣಾ ಭಾಗಗಳಲ್ಲಿ ನಡೆಯುತ್ತಿರುವ ಪ್ರಾಕ್ಸಿ ಯುದ್ಧ ಅಥವಾ ಭಯೋತ್ಪಾದನೆ ಹಾಗೂ ಈಗ ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ವಿಶ್ವಸಂಸ್ಥೆಯ ನಡೆಯ ಬಗ್ಗೆ ಪ್ರಶ್ನೆಗಳು ಎದದ್ದಿವೆ. ಕೊರೊನಾ ಸೋಂಕಿನ ಮೂಲ ಹಾಗೂ ಉದ್ಯಮ ಸ್ನೇಹಿ ರಾಂಕಿಂಗ್ ವಿಚಾರದಲ್ಲಿ ವಿಶ್ವಸಂಸ್ಥೆಯೊಂದಿಗೆ ಹೊಂದಿಕೊಂಡಿರುವ ಇತರೆ ಸಂಸ್ಥೆಗಳು ದಶಕಗಳಿಂದ ಇರುವ ವಿಶ್ವಾಸವನ್ನು ಕಳೆದುಕೊಂಡಿದೆ.

ವಿಶ್ವಸಂಸ್ಥೆಯು ಜಾಗತಿಕ ಕಾನೂನು ಮೌಲ್ಯ, ಹಾಗೂ ನೀತಿ ನಿರೂಪಣೆಗೆ ಅನುಸಾರವಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.

ಈ ಮೂಲಕ ವಿಶ್ವಸಂಸ್ಥೆಯು ಕೆಲ ದೇಶಗಳ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ, ಕೊರೊನಾ ಮೂಲ ತನಿಖೆಯು ಚೀನಾದತ್ತ ಮುಖಮಾಡಿದಾಗ ಅದು ಅರ್ಧಕ್ಕೆ ನಿಂತಿತ್ತು, ಚೀನಾದಿಂದ ಕೊರೊನಾ ಹಬ್ಬಿದೆ ಎಂಬ ಸಾಕಷ್ಟು ವಿರೊಧಗಳಿದ್ದರೂ, ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು, ಈ ಕುರಿತು ಚೀನಾದ ವಿರುದ್ಧ ವಿಶ್ವಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

English summary
PM Modi at UNGA: Modi Has Expressed His Displeasure Over The Performance Of The UN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X