ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಮರಗಟ್ಟಿಸುವ ಉಗ್ರರ ವಿಡಿಯೋದಲ್ಲಿ ಮೋದಿ ಹೆಸರು

By Prasad
|
Google Oneindia Kannada News

ನವದೆಹಲಿ, ಜನವರಿ 03 : ಮೈಮರಗಟ್ಟಿಸುವ ದೆಹಲಿಯ ಚಳಿಯಲ್ಲಿಯೂ ನೋಡಿದವರಿಗೆ ಬೆವರು ಬರಿಸುವಂಥ ಖರರ್ನಾಕ್ ವಿಡಿಯೋವನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಬಿಡುಗಡೆ ಮಾಡಿದೆ.

ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಟರ್ಕಿಯ ಅಧ್ಯಕ್ಷ ರಿಸೆಪ್ ಟಯಿಪ್ ಎರ್ಡೋಗನ್ ಅವರು ಮುಸ್ಲಿಂ ಮತ್ತು ಇಸ್ಲಾಂನ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಲಾಗಿದೆ.

'ದಿ ಕ್ರಾಸ್ ಶೀಲ್ಡ್' ಎಂಬ 19 ನಿಮಿಷಗಳ ವಿಡಿಯೋಗೆ ಟರ್ಕಿ ಮತ್ತು ಅರೇಬಿಕ್ ಭಾಷೆಯಲ್ಲಿ ವಾಯ್ಸ್ ಓವರ್ ನೀಡಲಾಗಿದೆ. ಇಡೀ ವಿಡಿಯೋ ತುಂಬ ಸಿರಿಯಾದಲ್ಲಿನ ರಕ್ತಪಾತ ಮತ್ತು ವಿಧ್ವಂಸಕ ಕೃತ್ಯಗಳ ಬಗ್ಗೆಯೇ ಮಾತುಗಳು ತುಂಬಿವೆ.[ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು]

Modi, Erdogan are anti Muslim says IS in chilling 10 minute video

ಸಿರಿಯಾದಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ಈ ನಾಯಕರೇ ಕಾರಣ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ಸಿರಿಯಾದಲ್ಲಿ ಯುದ್ಧದಂಥ ವಾತಾವರಣ ಸೃಷ್ಟಿಸಿದ್ದೇ ಟರ್ಕಿಯ ಅಧ್ಯಕ್ಷ ಎರ್ಡೋಗನ್ ಎಂದು ಹೀಗಳಿಯಲಾಗಿದೆ.

ಈ ಕಾರಣದಿಂದಾಗಿಯೇ, ಇಸ್ಲಾಮಿಕ್ ಸ್ಟೇಟ್ ಉಗ್ರರು ಕಳೆದ ವರ್ಷದುದ್ದಕ್ಕೂ ಟರ್ಕಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಸೇಡು ತೀರಿಸಿಕೊಂಡಿದ್ದಾರೆ. ಹೊಸವರ್ಷದ ಮುನ್ನಾದಿನ ಪಾರ್ಟಿ ನಡೆಯುತ್ತಿದ್ದಾಗ ಓರ್ವ ಮನಸೋಇಚ್ಛೆ ಗುಂಡಿಕ್ಕಿ 39 ಜನರನ್ನು ಹತ್ಯೆಗೈದಿರುವುದು ಇನ್ನೂ ಕೆಂಪಾಗಿದೆ.[ಬಾರಾಮುಲ್ಲಾದಲ್ಲಿ ಉಗ್ರನ ಹೊಡೆದುರುಳಿಸಿದ ರಕ್ಷಣಾ ಸಿಬ್ಬಂದಿ]

ಟರ್ಕಿಯಲ್ಲಿ 2015ರ ನವೆಂಬರ್ ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಎರ್ಡೋಗನ್ ಜೊತೆ ನರೇಂದ್ರ ಮೋದಿಯವರು ಕ್ಲಿಕ್ಕಿಸಿಕೊಂಡಿರುವ ಚಿತ್ರವೂ ವಿಡಿಯೋದಲ್ಲಿದೆ. ಈ ನಾಯಕರ ಹೊರತಾಗಿ ಬರಾಕ್ ಒಬಾಮಾ, ಸಿರಿಯಾ ಅಧ್ಯಕ್ಷ ಬಶಾರ್ ಅಲ್ ಅಸಾದ್, ಪೋಪ್ ಫ್ರಾನ್ಸಿಸ್ ಅವರಿಗೂ ಮುಸ್ಲಿಂ ವಿರೋಧಿ ಪಟ್ಟ ಕಟ್ಟಲಾಗಿದೆ.

ಅಫಘಾನಿಸ್ತಾನದಲ್ಲಿ ಉದ್ಭವವಾಗಿರುವ ಪರಿಸ್ಥಿತಿಯ ಬಗ್ಗೆಯೂ ವಿಡಿಯೋದಲ್ಲಿ ಪ್ರಸ್ತಾಪವಿದೆ. ಈ ವಿಡಿಯೋವನ್ನು ಟರ್ಕಿಯಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡಕ್ಕೆ ಮುನ್ನ ಹಲವಾರು ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

English summary
A chilling video released by the Islamic State says that leaders Narendra Modi, Recep Erdogan, Vladimir Putin among others work against the interest of Muslims and Islam. A gory 19 minute clip which is filled with bloodshed and the devastation in Syria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X