• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ವಾಯುಸೇನೆಗೆ ರಾಫೆಲ್ ಯುದ್ಧವಿಮಾನದ ಶಕ್ತಿ

By ಒನ್ಇಂಡಿಯಾ ಡಿಫೆನ್ಸ್ ಡೆಸ್ಕ್
|

ಪ್ಯಾರಿಸ್, ಏ. 11 : ಫ್ರಾನ್ಸ್ ದೇಶಕ್ಕೆ ನೀಡಿದ ಮೊದಲ ಭೇಟಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಒಪ್ಪಂದಕ್ಕೆ ಕೈಹಾಕಿದ್ದು, ಫ್ರಾನ್ಸ್‌ನಲ್ಲಿ ನಿರ್ಮಿತವಾದ ಅತ್ಯಾಧುನಿಕ 36 ರಾಫೆಲ್ ಜೆಟ್ ಯುದ್ಧವಿಮಾನಗಳನ್ನು ಕೊಳ್ಳುವುದಾಗಿ ಘೋಷಿಸಿದ್ದಾರೆ. ಭಾರತದ ವಾಯುಪಡೆಗೆ ಈ ಯುದ್ಧವಿಮಾನಗಳು ಭಾರೀ ಶಕ್ತಿ ತುಂಬಲಿವೆ.

ಜಿ7 ರಾಷ್ಟ್ರಗಳ ಭೇಟಿಗಾಗಿ ವಿದೇಶಯಾತ್ರೆಯಲ್ಲಿರುವ ನರೇಂದ್ರ ಮೋದಿ ಅವರು, ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಘೋಷ್ಠಿಯಲ್ಲಿ ಶುಕ್ರವಾರ ಈ ವಿಷಯವನ್ನು ಪ್ರಕಟಿಸಿದರು. "ಹಾರಾಡುವ ಸ್ಥಿತಿಯಲ್ಲಿರುವ 36 ರಾಫೆಲ್ ಜೆಟ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಫ್ರೆಂಚ್ ಸರಕಾರವನ್ನು ಕೇಳಿದ್ದೇವೆ" ಎಂದು ಅವರು ತಿಳಿಸಿದರು.

ಈ ಘೋಷಣೆಯೊಂದಿಗೆ, ಹಿಂದಿನ ಯುಪಿಎ ಸರಕಾರ 126 ಎಂಎಂಆರ್‌ಎಸಿ (ಮೀಡಿಯಂ-ಮಲ್ಟಿ ರೋಲ್ ಕಂಬ್ಯಾಟ್ ಏರ್ಕ್ರಾಫ್ಟ್) ಪೂರೈಕೆ ಮಾಡಲು ಮಾಡಿಕೊಂಡಿದ್ದ ಒಪ್ಪಂದ ನೆನೆಗುದಿಗೆ ಬಿದ್ದಂತಾಗುತ್ತದೆ. ಅದೂ ಅಲ್ಲದೆ, ಈ ಒಪ್ಪಂದದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಕಂಪನಿಗೂ ಹಿನ್ನಡೆಯಾದಂತಾಗಿದೆ.

ರಾಫೆಲ್ ಯುದ್ಧವಿಮಾನಗಳ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆಯಾದರೂ, ಒನ್ಇಂಡಿಯಾಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಫ್ರಾನ್ಸ್ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿದರೂ ಮೊದಲ ರಾಫೆಲ್ ಯುದ್ಧವಿಮಾನ ಭಾರತದ ನೆಲದ ಮೇಲೆ ಇಳಿಯಲು ಇನ್ನೂ ಒಂದು ವರ್ಷ ತೆಗೆದುಕೊಳ್ಳಲಿದೆ.

4 ಬಿಲಿಯನ್ ಡಾಲರ್ ಒಪ್ಪಂದದ ವಿರುದ್ಧ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರೇ ಅಪಸ್ವರ ನುಡಿದಿದ್ದಾರೆ. ಈ ಯುದ್ಧ ವಿಮಾನಗಳನ್ನು ಯಾವ ದೇಶದವರೂ ಕೊಳ್ಳುವುದಿಲ್ಲ. ಒತ್ತಡಕ್ಕೊಳಗಾಗಿ ಮೋದಿಯವರು ಕಡಿಮೆ ಇಂಧನ ಸಾಮರ್ಥ್ಯವುಳ್ಳ ರಾಫೆಲ್ ಯುದ್ಧ ವಿಮಾನಗಳನ್ನು ಕೊಂಡರೆ ನಾನು ಕೋರ್ಟಿಗೆ ಹೋಗುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India will be buying 36 Rafale jets from France. Prime Minister Nardendra Modi confirmed the decision during a joint statement in the company of French President Francois Hollande. 'We have asked the French government to supply 36 Rafale jets in fly-away conditions' Modi said in Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more