ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ 'ಓಮಿಕ್ರಾನ್' ರೂಪಾಂತರಕ್ಕೆ ಲಸಿಕೆ ಯಾವಾಗ ಸಿಗುತ್ತೆ?

|
Google Oneindia Kannada News

ನವದೆಹಲಿ, ನವೆಂಬರ್ 29: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್ ಸೋಂಕಿನ ಹೊಸ ಓಮಿಕ್ರಾನ್ ರೂಪಾಂತರ ತಳಿಯು ಈಗ ವಿತರಿಸಲಾಗುತ್ತಿರುವ ಲಸಿಕೆಗಳಿಂದ ಜಾರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದು ಮಾಡರ್ನಾ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಪೌಲ್ ಬರ್ಟನ್ ಶಂಕಿಸಿದ್ದಾರೆ.

"ಜಾಗತಿಕ ಮಟ್ಟದಲ್ಲಿ ವಿತರಿಸಲಾಗುತ್ತಿರುವ ಕೊವಿಡ್-19 ಲಸಿಕೆಯಿಂದ ಓಮಿಕ್ರಾನ್ ತಳಿಯು ತಪ್ಪಿಸಿಕೊಳ್ಳುವ ಶಂಕಿಯಿದೆ. ಒಂದು ವೇಳೆ ಹಾಗಾದರೆ 2022ರ ಆರಂಭಿಕ ಹಂತದಲ್ಲಿಯೇ ಹೊಸದಾಗಿ ಸಂಶೋಧಿಸಿದ ಲಸಿಕೆಯನ್ನು ಪರಿಚಯಿಸಲಾಗುವುದು," ಎಂದು ಅವರು ಹೇಳಿದ್ದಾರೆ.

ಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ

"ಪ್ರಸ್ತುತ ನಾವು ನೀಡುತ್ತಿರುವ ಕೊರೊನಾವೈರಸ್ ಲಸಿಕೆಯು ಮುಂದಿನ ಕೆಲವು ವಾರಗಳವರೆಗೂ ನಮಗೆ ರಕ್ಷಣೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತಿಳಿದುಕೊಂಡಿರಬೇಕು," ಎಂದು ಬಿಬಿಸಿಯ "ಆಂಡ್ರ್ಯೂ ಮಾರ್ ಶೋ" ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ. ಕೊವಿಡ್-19 ಲಸಿಕೆ ಹಾಗೂ ಹೊಸ ರೂಪಾಂತರ ತಳಿಯ ಬಗ್ಗೆ ಮಾಡರ್ನಾ ಸಂಸ್ಥೆಯ ಮುಖ್ಯ ಆರೋಗ್ಯಾಧಿಕಾರಿ ಹೇಳಿದ್ದೇನು ಎಂಬುದನ್ನು ಮುಂದೆ ತಿಳಿಯಿರಿ.

ಕ್ಷಿಪ್ರಗತಿಯಲ್ಲಿ ಹೊಸ ಲಸಿಕೆ ಉತ್ಪಾದನೆ

ಕ್ಷಿಪ್ರಗತಿಯಲ್ಲಿ ಹೊಸ ಲಸಿಕೆ ಉತ್ಪಾದನೆ

"ಒಂದು ವೇಳೆ ನಾವು ಹೊಸ ಲಸಿಕೆಯನ್ನೇ ಸಂಶೋಧಿಸಬೇಕು ಎಂದಾದರೆ, ಅದು 2022ರ ಆರಂಭದಲ್ಲಿಯೇ ಸಿಗಲಿದೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಲಸಿಕೆಯು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಲಿದೆ," ಎಂದು ಅವರು ಹೇಳಿದ್ದಾರೆ. ಅಲ್ಲದೇ, "ಎಮ್ಆರ್ಎನ್ಎ ಲಸಿಕೆಗಳ ಬಗ್ಗೆ ಗಮನಾರ್ಹವಾದ ವಿಷಯವೆಂದರೆ ಮಾಡರ್ನಾ ವೇದಿಕೆಯಾಗಿದೆ, ನಾವು ತುಂಬಾ ವೇಗವಾಗಿ ಲಸಿಕೆ ಉತ್ಪಾದಿಸಲು ಸಾಧ್ಯವಿದೆ," ಎಂದು ಪೌಲ್ ಬರ್ಟನ್ ಹೇಳಿದ್ದಾರೆ.

ಕೊರೊನಾ ವಿರುದ್ಧ mRNA ಲಸಿಕೆ ಹೇಗೆ ಪರಿಣಾಮಕಾರಿ?

ಕೊರೊನಾ ವಿರುದ್ಧ mRNA ಲಸಿಕೆ ಹೇಗೆ ಪರಿಣಾಮಕಾರಿ?

ಕೊರೊನಾವೈರಸ್ ಸೋಂಕಿಗಾಗಿ ನೀಡುವ ಈ mRNA ಲಸಿಕೆಯ ಮೂಲಕ ದೇಹದ ಕಣಗಳನ್ನು ನೀಡುವ ಮೂಲಕ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಮಾಡರ್ನಾ ಲಸಿಕೆಯು mRNA ಕಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ mRNA ಮಾದರಿಯ ಲಸಿಕೆಯ ಪರಿಣಾಮವು ಆರು ತಿಂಗಳಿನಿಂದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿವರೆಗೂ ಇರುತ್ತದೆ. ಈ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ರೋಗಾಣುವನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಬಲ್ಲ ಪ್ರತಿಕಾಯಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮಾಡರ್ನಾ mRNA ಮಾದರಿಯ ಲಸಿಕೆಯಾಗಿದ್ದು, ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.

ಕೊರೊನಾವೈರಸ್ ಲಸಿಕೆ ಮತ್ತು ಸೋಂಕಿನ ಅಂತರ?

ಕೊರೊನಾವೈರಸ್ ಲಸಿಕೆ ಮತ್ತು ಸೋಂಕಿನ ಅಂತರ?

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಎಷ್ಟು ದಿನಗಳ ಹಿಂದೆ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂಬುದರ ಮೇಲೆ ಸೋಂಕಿನಿಂದ ರಕ್ಷಣೆ ಸಿಗಲಿದೆ. ಲಸಿಕೆಯ ಸಾಮರ್ಥ್ಯ ಇರುವವರೆಗೂ ಸೋಂಕಿನಿಂದ ಅಷ್ಟಾಗಿ ಅಪಾಯ ಇರುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಒಂದು ಪ್ರಮಾಣಿತ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದು ಉತ್ತಮ ಸಲಹೆಯಾಗಿರುತ್ತದೆ," ಎಂದು ಮಾಡರ್ನಾ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಪೌಲ್ ಬರ್ಟನ್ ಹೇಳಿದ್ದಾರೆ.

ಸಾರ್ವಜನಿಕರು ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳಲಿ

ಸಾರ್ವಜನಿಕರು ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳಲಿ

"ನೀವು ಇದುವರೆಗೂ ಯಾವುದೇ ಕೊವಿಡ್-19 ಲಸಿಕೆಯನ್ನು ಪಡೆದುಕೊಳ್ಳದಿದ್ದರೆ, ಮೊದಲು ಲಸಿಕೆ ಹಾಕಿಸಿಕೊಳ್ಳಿರಿ. ಇದು ಅಪಾಯಕಾರಿ ರೋಗಾಣುವಿನಂತೆ ಗೋಚರಿಸುತ್ತಿದೆ, ಆದರೆ ಈ ರೋಗಾಣುವಿನ ವಿರುದ್ಧ ಹೋರಾಡುವುದಕ್ಕೆ ನಮ್ಮ ಬಳಿ ಈಗಾಗಲೇ ಸಾಕಷ್ಟು ಅಸ್ತ್ರಗಳಿವೆ," ಎಂದು ಪೌಲ್ ಬರ್ಟನ್ ಹೇಳಿದ್ದಾರೆ.

ಓಮಿಕ್ರಾನ್ ರೂಪಾಂತರ ತಳಿಯಿಂದಾಗಿ ದಕ್ಷಿಣ ಆಫ್ರಿಕಾದಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ನಿರ್ಬಂಧವನ್ನು ವಿಧಿಸಲಾಗುತ್ತಿದೆ. ಚಳಿಗಾಲದ ಸಮಯದಲ್ಲಿ ಉತ್ತರ ಗೋಳಾರ್ಧದಲ್ಲಿ ಈ ರೋಗಾಣು ಕೊವಿಡ್-19 ಭೀತಿಯನ್ನು ಹೆಚ್ಚಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಚೇತರಿಕೆಗೆ ಹೊಸ ರೂಪಾಂತರವು ಪೆಟ್ಟು ಕೊಡುವಂತೆ ಗೋಚರಿಸುತ್ತಿದೆ.

ಹೊಸ ಮಾದರಿ ಸಂಶೋಧನೆಗೆ 60 ರಿಂದ 90 ದಿನ

ಹೊಸ ಮಾದರಿ ಸಂಶೋಧನೆಗೆ 60 ರಿಂದ 90 ದಿನ

ಒಮಿಕ್ರಾನ್ ರೂಪಾಂತರದ ವಿರುದ್ಧ ಪ್ರಸ್ತುತ ಲಸಿಕೆಯನ್ನು ಪರೀಕ್ಷಿಸುವುದು ಹಾಗೂ ಎರಡು ಬೂಸ್ಟರ್ ಮಾದರಿ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದು ಮಾಡರ್ನಾ ಹೇಳಿದೆ. 2021ರ ಆರಂಭಿಕ ಹಂತದಿಂದ ಒಂದು ಪ್ರಬೇಧದ ರೂಪಾಂತರದ ಮೇಲೆ ಸಮಗ್ರ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿದೆ. ಕೇವಲ 60 ರಿಂದ 90 ದಿನಗಳಲ್ಲಿ ಕೊವಿಡ್-19 ಸೋಂಕಿನ ಹೊಸ ಮಾದರಿಯ ಲಸಿಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸಂಶೋಧಿಸುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದೆ ಎಂದು ಮಾಡರ್ನಾ ಹೇಳಿದೆ.

Recommended Video

Omicron ಎಷ್ಟು ಅಪಾಯಕಾರಿ ಎಂದು ತಿಳಿಯಲು ಇನ್ನೂ ಕಾಲಾವಕಾಶ ಬೇಕು | Oneindia Kannada

English summary
Moderna Inc. Chief Medical Officer Paul Burton said new vaccine for Covid variant omicron could be available early in 2022. Know more. Moderna Inc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X