ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡೆರ್ನಾ ಕೊವಿಡ್ ಲಸಿಕೆ: ಮಾನವನ ಮೇಲೆ ಪ್ರಯೋಗ ಯಶಸ್ವಿ

|
Google Oneindia Kannada News

ಷಿಕಾಗೋ, ಜುಲೈ 15: ಮಾಡೆರ್ನಾ ಇಂಕ್ ತಯಾರಿಸಿರುವ ಕೊವಿಡ್ 19 ರೋಗನಿರೋಧಕ ಚುಚ್ಚು ಮದ್ದು mRNA-1273 ಮಾನವನ ಮೇಲೆ ನಡೆಸಿದ ಮೊದಲ ಪರೀಕ್ಷೆಯಲ್ಲಿ ಪಾಸ್ ಆಗಿದೆ.

Recommended Video

Facebook ತ್ಯಜಿಸಿ ಇಲ್ಲ ಸೇನೆಯಿಂದ ಹೊರನಡೆಯಿರಿ | Oneindia Kannada

ಆರೋಗ್ಯ ಕಾರ್ಯಕರ್ತರಿಗೆ mRNA-1273 ಎರಡು ಚುಚ್ಚುಮದ್ದನ್ನು ಕೊಡಲಾಗಿದೆ. ಕೊವಿಡ್​ನಿಂದ ಚೇತರಿಸಿಕೊಂಡವರಿಗಿಂತ ಎರಡು ಪಟ್ಟು ಹೆಚ್ಚು ಪ್ರಮಾಣದ ಕೊರೊನಾ ವೈರಾಣುವನ್ನು ಕೊಲ್ಲುವ ರೋಗನಿರೋಧಕ ಇದಾಗಿದೆ ಎಂದು ನ್ಯೂ ಇಂಗ್ಲೆಂಡ್​ನ ಜರ್ನಲ್​ ಆಫ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿರುವ ಸಂಶೋಧನಾ ವರದಿಯಲ್ಲಿ ತಿಳಿಸಿದೆ.

ಇದೀಗ ಮೊದಲ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ ಪ್ರಯೋಗವನ್ನು ಶೀಘ್ರವೇ ನಡೆಸಲಿದೆ. ಈ ಚುಚ್ಚುಮದ್ದು ಪಡೆದ ಆರೋಗ್ಯ ಕಾರ್ಯರ್ತರ ಪೈಕಿ ಯಾರಲ್ಲೂ ಗಂಭೀರವಾದ ಅಡ್ಡಪರಿಣಾಮ ಕಂಡುಬಂದಿಲ್ಲ.

ಕೊರೊನೊವೈರಸ್ ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನಲ್ಲೇ 'ಲಸಿಕೆ' ಸಿದ್ಧ!ಕೊರೊನೊವೈರಸ್ ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನಲ್ಲೇ 'ಲಸಿಕೆ' ಸಿದ್ಧ!

ಜನ ಸುಸ್ತು, ತಲೆನೋವು, ಚಳಿ, ಮಾಂಸಖಂಡಗಳಲ್ಲಿ ನೋವು ಅಥವಾ ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವಿನಂಥ ಸಣ್ಣಪುಟ್ಟ ತೊಂದರೆಗಳು ಆಗಿದ್ದಾಗಿ ಹೇಳಿದರು. ಎರಡನೇ ಡೋಸ್​ನ ಚುಚ್ಚುಮದ್ದನ್ನು ಕೊಟ್ಟಾದ ನಂತರ ಅಥವಾ ಹೆಚ್ಚಿನ ಡೋಸ್​ ಕೊಟ್ಟಾದ ನಂತರ ಇಂಥ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಾಡೆರ್ನಾ ಹೇಳಿದೆ.

ಕೊರೊನಾ ಸೋಂಕಿನಿಂದ ಮುಕ್ತಗೊಳಿಸುವ ಚುಚ್ಚುಮದ್ದು

ಕೊರೊನಾ ಸೋಂಕಿನಿಂದ ಮುಕ್ತಗೊಳಿಸುವ ಚುಚ್ಚುಮದ್ದು

ಮಾಡೆರ್ನಾದ ಚುಚ್ಚುಮದ್ದು ವಿಶ್ವದಾದ್ಯಂತ ಕೊರೊನಾದಿಂದ ಘಾಸಿಗೊಳಗಾಗಿರುವ ಲಕ್ಷಾಂತರ ಜನರನ್ನು ಕೊರೊನಾ ಸೋಂಕಿನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ತುರ್ತಾಗಿ ಒಂದು ರೋಗನಿರೋಧಕ ಚುಚ್ಚುಮದ್ದು ಬೇಕಾಗಿದೆ. ಈ ನಿಟ್ಟಿನಲ್ಲಿ ಮಾಡೆರ್ನಾದ ಚುಚ್ಚುಮದ್ದಿನ ಭರವಸೆದಾಯಕ ಫಲಿತಾಂಶ ಜನರಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಜ್ಞರು ಹೇಳಿದ್ದಾರೆ.

ರೋಗನಿರೋಧಕ ಚುಚ್ಚುಮದ್ದಿನ ಅನ್ವೇಷಣೆ

ರೋಗನಿರೋಧಕ ಚುಚ್ಚುಮದ್ದಿನ ಅನ್ವೇಷಣೆ

ಕೊರೊನಾ ಸೋಂಕು ಭಾರಿ ಪಿಡುಗಾಗಿ ಪರಿಣಮಿಸಿದ 66 ದಿನಗಳ ಬಳಿಕ ಕೊರೊನಾ ವೈರಾಣುವಿನ ಸೀಕ್ವೆನ್ಸ್​ ಅನ್ನು ಬಿಡುಗಡೆ ಮಾಡಿದ ನಂತರದಲ್ಲಿ ಅಂದರೆ ಮಾ.16ರಿಂದ ಮಾಡೆರ್ನಾ ಸಂಸ್ಥೆ ರೋಗನಿರೋಧಕ ಚುಚ್ಚುಮದ್ದಿನ ಅನ್ವೇಷಣೆಯಲ್ಲಿ ತೊಡಗಿಕೊಂಡಿದೆ.

ಗಂಭೀರವಾದ ಅಡ್ಡಪರಿಣಾಮ ಕಂಡುಬಂದಿಲ್ಲ

ಗಂಭೀರವಾದ ಅಡ್ಡಪರಿಣಾಮ ಕಂಡುಬಂದಿಲ್ಲ

ಈ ಚುಚ್ಚುಮದ್ದು ಪಡೆದ ಆರೋಗ್ಯ ಕಾರ್ಯರ್ತರ ಪೈಕಿ ಯಾರಲ್ಲೂ ಗಂಭೀರವಾದ ಅಡ್ಡಪರಿಣಾಮ ಕಂಡುಬಂದಿಲ್ಲ. ಅರ್ಧಕ್ಕರ್ಧ ಜನ ಸುಸ್ತು, ತಲೆನೋವು, ಚಳಿ, ಮಾಂಸಖಂಡಗಳಲ್ಲಿ ನೋವು ಅಥವಾ ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವಿನಂಥ ಸಣ್ಣಪುಟ್ಟ ತೊಂದರೆಗಳು ಆಗಿದ್ದಾಗಿ ಹೇಳಿದರು. ಎರಡನೇ ಡೋಸ್​ನ ಚುಚ್ಚುಮದ್ದನ್ನು ಕೊಟ್ಟಾದ ನಂತರ ಅಥವಾ ಹೆಚ್ಚಿನ ಡೋಸ್​ ಕೊಟ್ಟಾದ ನಂತರ ಇಂಥ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಾಡೆರ್ನಾ ಹೇಳಿದೆ.

45 ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು

45 ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು

ಅಂದಾಜು 45 ಆರೋಗ್ಯವಂತ ಕಾರ್ಯಕರ್ತರಿಗೆ ಈ ಚುಚ್ಚುಮದ್ದನ್ನು ಕೊಡಲಾಗಿದ್ದು, ಅವರಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ರೋಗನಿರೋಧಕ ಅಂಶಗಳು ಕಂಡುಬಂದಿದ್ದಾಗಿ ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ.

English summary
Moderna Inc’s experimental vaccine for COVID-19 showed it was safe and provoked immune responses in all 45 healthy volunteers in an ongoing early-stage study, US researchers reported on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X