ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಲಸಿಕೆಗೆ 1854 ರಿಂದ 2744 ರೂಪಾಯಿ ಮಾತ್ರ!

|
Google Oneindia Kannada News

ನವದೆಹಲಿ, ನವೆಂಬರ್.22: ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಲಸಿಕೆಗಳು ಇನ್ನೇನು ಬಿಡುಗಡೆಯಾಗುತ್ತವೆ ಎನ್ನುವಷ್ಟರಲ್ಲೇ ಅದರ ಬೆಲೆ ಎಷ್ಟಿರಬಹುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಕೊವಿಡ್-19 ಲಸಿಕೆ ಸಿಗುತ್ತದೆಯೋ ಇಲ್ಲವೋ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆಯನ್ನು ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು?ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು?

ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವ ಲಸಿಕೆಗೆ ಕಂಪನಿಯು 740 ರೂಪಾಯಿಯಿಂದ 3708 ರೂಪಾಯಿವರೆಗೂ ದರ ನಿಗದಿಗೊಳಿಸಲಾಗಿರುತ್ತದೆ ಎಂದು ಜರ್ಮನ್ ಕಂಪನಿಗೆ ಮಾಹಿತಿ ನೀಡಿದ್ದಾರೆ.

ಯುರೋಪಿಯನ್ ರಾಷ್ಟ್ರಗಳ ನಡುವೆ ಒಪ್ಪಂದ

ಯುರೋಪಿಯನ್ ರಾಷ್ಟ್ರಗಳ ನಡುವೆ ಒಪ್ಪಂದ

ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಯುರೋಪಿಯನ್ ರಾಷ್ಟ್ರಗಳು ಕೂಡಾ ಲಸಿಕೆಯ ಹುಡುಕಾಟದಲ್ಲಿವೆ. ಇತ್ತೀಚಿಗೆ ನಡೆದ ಸಭೆಯಲ್ಲಿ ಯುರೋಪಿಯನ್ ರಾಷ್ಟ್ರಗಳ ಆಯೋಗದ ಅಧಿಕಾರಿಗಳು ಸಭೆ ನಡೆಸಿದ್ದರು. ಮಾಡರ್ನ ಕಂಪನಿಯ ಲಸಿಕೆಯನ್ನು ಕನಿಷ್ಠ ಬೆಲೆ ನೀಡುವಂತೆ ಚರ್ಚೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. 1854 ರೂಪಾಯಿ(25 ಡಾಲರ್)ಗೆ ಲಕ್ಷಗಟ್ಟಲೆ ಕೊವಿಡ್-19 ಲಸಿಕೆ(ಡೋಸ್) ನೀಡುವಂತೆ ಕಂಪನಿಯನ್ನು ಕೋರಲಾಗಿದೆ. ಆದರೆ ಈ ಸಂಬಂಧ ಯಾವುದೇ ರೀತಿಯ ಅಧಿಕೃತ ಒಪ್ಪಂದಗಳನ್ನು ಮಾಡಿಕೊಂಡಿಲ್ಲ.

ಶೇ.94.5ರಷ್ಟು ಮಾಡರ್ನ ಕಂಪನಿಯ ಲಸಿಕೆ ಪರಿಣಾಮಕಾರಿ

ಶೇ.94.5ರಷ್ಟು ಮಾಡರ್ನ ಕಂಪನಿಯ ಲಸಿಕೆ ಪರಿಣಾಮಕಾರಿ

ಕೊರೊನಾವೈರಸ್ ಲಸಿಕೆ ಸಂಶೋಧನಾ ಸಂದರ್ಭದಲ್ಲಿ ನಡೆಸಿದ ವೈದ್ಯಕೀಯ ಪ್ರಯೋಗವು ಬಹುಪಾಲು ಯಶಸ್ವಿಯಾಗಿದೆ. ಮಾಡರ್ನ ಕಂಪನಿಯ ಕೊವಿಡ್-19 ಲಸಿಕೆಯು ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಶೇ.94.5ರಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಎನಿಸಿದೆ. ಈ ಹಿನ್ನೆಲೆ ಮಾಡರ್ನ ಕಂಪನಿಯ ಜೊತೆಗೆ ಯುರೋಪಿಯನ್ ರಾಷ್ಟ್ರಗಳು ಒಪ್ಪಂದಕ್ಕೆ ಸಿದ್ಧವಾಗಿವೆ.

ಜುಲೈ ತಿಂಗಳಿನಿಂದ ಮಾಡರ್ನ ಜೊತೆ ಒಪ್ಪಂದ

ಜುಲೈ ತಿಂಗಳಿನಿಂದ ಮಾಡರ್ನ ಜೊತೆ ಒಪ್ಪಂದ

ಕೊರೊನಾವೈರಸ್ ಸೋಂಕಿನ ಭೀತಿ ಆರಂಭವಾದ ದಿನಗಳಿಂದಲೂ ಯುರೋಪಿಯನ್ ರಾಷ್ಟ್ರಗಳಿಗೆ ಮಾಡರ್ನ ಕಂಪನಿಯ ಲಸಿಕೆ ಮೇಲಿನ ವಿಶ್ವಾಸ ಹೆಚ್ಚಿದೆ. ಹೀಗಾಗಿ ಕಳೆದ ಜುಲೈ ತಿಂಗಳಿನಿಂದ ಯುರೋಪ್ ಖಂಡದ ಬಹುತೇಕ ರಾಷ್ಟ್ರಗಳು ಮತ್ತು ಯುರೋಪಿಯನ್ ಆಯೋಗವು ಕಂಪನಿಯ ಜೊತೆಗೆ ಕೊವಿಡ್-19 ಲಸಿಕೆ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿತ್ತು. ಇದೀಗ ಚರ್ಚೆ ಒಂದು ಹಂತಕ್ಕೆ ತಲುಪಿದ್ದು, ಲಸಿಕೆಗೆ ದರ ನಿಗದಿಗೊಳಿಸಲಾಗಿದೆ. ಸರ್ಕಾರಗಳು ಆದೇಶ ನೀಡುವ ಲಸಿಕೆ ಪ್ರಮಾಣದ ಮೇಲೆ ಲಸಿಕೆಗೆ ದರವನ್ನು ನಿಗದಿಗೊಳಿಸುವುದಾಗಿ ಕಂಪನಿಯು ಹೇಳಿಕೊಂಡಿದೆ.

ಭಾರತದಲ್ಲಿ ಕನಿಷ್ಠ ಬೆಲೆಗೆ ಕೊರೊನಾವೈರಸ್ ಲಸಿಕೆ ಲಭ್ಯ

ಭಾರತದಲ್ಲಿ ಕನಿಷ್ಠ ಬೆಲೆಗೆ ಕೊರೊನಾವೈರಸ್ ಲಸಿಕೆ ಲಭ್ಯ

ಅಗ್ಗದ ದರದಲ್ಲಿ ಭಾರತೀಯರಿಗೆ ಕೊವಿಡ್-19 ಲಸಿಕೆಯನ್ನು ಒದಗಿಸಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನಾವಾಲಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಲ್ಪಟ್ಟ ಕೊರೊನಾವೈರಸ್ ಸೋಂಕಿನ ಲಸಿಕೆಯು ಭಾರತೀಯರಿಗೆ ಅತ್ಯಂತ ಅಗ್ಗದ ದರದಲ್ಲಿ ಸಿಗಲಿದೆ. ಸಾಮಾನ್ಯರಲ್ಲೇ ಸಾಮಾನ್ಯ ಜನರಿಗೆ ಕೇವಲ 500 ರಿಂದ 600 ರೂಪಾಯಿಗೆ ಕೊರೊನಾವೈರಸ್ ಲಸಿಕೆಯು ಸಿಗಲಿದೆ ಎಂದು ಪೂನಾವಾಲಾ ಮಾಹಿತಿ ನೀಡಿದ್ದಾರೆ. ಯುನೈಟೆಡ್ ಕಿಂಗ್ ಡಮ್ ಸರ್ಕಾರಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಲಸಿಕೆಯನ್ನು ತುರ್ತು ದೃಢೀಕರಿಸುವಂತೆ ಕೋರಲಾಗಿದೆ.

English summary
Covid-19 Vaccine News: Moderna Company To Charge $25-$37 Per Dose For Its Coronavirus Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X