ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡುವಾಸಿ ಮಾಡರ್ನ್ ‘ರ‍್ಯಾಂಬೋ’ ಹಿಡಿಯಲು ಹರಸಾಹಸ..!

By ಅನಿಕೇತ್
|
Google Oneindia Kannada News

ಒಪ್ಪೆನುಯು(ಜರ್ಮನಿ), ಜುಲೈ 19: ಜರ್ಮನ್ ಪೊಲೀಸರು 'ಮಾಡರ್ನ್ ರ‍್ಯಾಂಬೋ'ನನ್ನ ಬಲೆಗೆ ಕೆಡವಿದ್ದಾರೆ. ನೈಋತ್ಯ ಜರ್ಮನಿಯ ಒಪೆನಾವ್ ಅಡವಿಯಲ್ಲಿ ಅಡಗಿ ಕೂತಿದ್ದ ವಿಚಿತ್ರ ವ್ಯಕ್ತಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಥೇಟ್ ಹಾಲಿವುಡ್‌ನ ರ‍್ಯಾಂಬೋ ಚಿತ್ರವನ್ನೇ ಹೋಲುವ ಈ ಘಟನೆ, ಇಡೀ ಜರ್ಮನಿಯನ್ನೇ ಬೆಚ್ಚಿಬೀಳಿಸಿತ್ತು.

Recommended Video

BBMP commissioner Anil Kumar transferred | Oneindia Kannada

ಅಂದಹಾಗೆ ಒಪೆನಾವ್ ಸಿಟಿ ಹೊರವಲಯದ ಅರಣ್ಯದ ಬಳಿ ಗಸ್ತು ತಿರುಗುವಾಗ ಜರ್ಮನ್ ಪೊಲೀಸರು ಅನಾಮಿಕನೊಬ್ಬನನ್ನ ಕಂಡಿದ್ದರು. ಈ ವೇಳೆ ಆತನನ್ನ ವಿಚಾರಿಸಲು ಮುಂದಾಗಿದ್ದು, ತಕ್ಷಣ ಪೊಲೀಸರ ಮೇಲೆಯೇ ಎಗರಿ ಬಿದ್ದ ಅನಾಮಿಕ, ನಾಲ್ವರು ಪೊಲೀಸ್ ಅಧಿಕಾರಿಗಳ ಬಳಿ ಇದ್ದ ಪಿಸ್ತೂಲ್ ಕಿತ್ತುಕೊಂಡಿದ್ದಾನೆ. ಪಿಸ್ತೂಲ್‌ಗಳನ್ನ ಕಿತ್ತುಕೊಂಡ ತಕ್ಷಣ ಅಲ್ಲಿಂದ ಕಾಡಿನಲ್ಲಿ ಮರೆಯಾಗಿದ್ದಾನೆ. ಜರ್ಮನ್ ಕಾಲಮಾನದ ಪ್ರಕಾರ ಭಾನುವಾರ ಈ ಘಟನೆ ನಡೆದಿತ್ತು. ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದ್ರೆ, ಖಾಕಿ ಪಡೆ ಬಿಡೋಕೆ ಸಾಧ್ಯಾನಾ..? ನೋ ವೇ.

ಹೀಗೆ ಆಗಂತುಕನ ಹೆಡೆಮುರಿ ಕಟ್ಟೋದಕ್ಕೆ ಸಜ್ಜಾದ ಜರ್ಮನ್ ಪೊಲೀಸರು, 2500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳ ಜೊತೆ ಕೂಂಬಿಂಗ್ ಆರಂಭಿಸಿದ್ದರು. ಇಡೀ ಅಡವಿಯಲ್ಲಿ ಅಗಂತುಕನಿಗೆ ಸರ್ಚಿಂಗ್ ನಡೆದಿತ್ತು. ಹೆಲಿಕಾಪ್ಟರ್ಸ್, ಥರ್ಮಲ್ ಡಿಟೆಕ್ಟರ್, ಸ್ನಿಫರ್ ಡಾಗ್ ಸ್ಕ್ವ್ಯಾಡ್ ಸೇರಿದಂತೆ ಅತ್ಯುನ್ನತ ತರಬೇತಿ ಪಡೆದಿದ್ದ ಭದ್ರತಾ ಸಿಬ್ಬಂದಿಯನ್ನೇ ಈ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಆದರೆ ಕಾಡಿನಲ್ಲಿ ಕಳೆದು ಹೋಗಿದ್ದ ಆಸಾಮಿ ಹಲವು ದಿನಗಳ ಕಾಲ ಪತ್ತೆಯೇ ಆಗಿರಲಿಲ್ಲ.

4 ಗನ್, ಒಂದು ಕೊಡಲಿ ಪತ್ತೆ..!

4 ಗನ್, ಒಂದು ಕೊಡಲಿ ಪತ್ತೆ..!

ಇಂತಹ ವಿಚಿತ್ರ ವ್ಯಕ್ತಿ ಬಗ್ಗೆ ಹರಿದಾಡಿದ ಸುದ್ದಿ ಜರ್ಮನಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿತ್ತು. ಅಲ್ಲದೆ ಅನಾಮಿಕನ ಪತ್ತೆಗೆ ಒತ್ತಡವೂ ಜಾಸ್ತಿಯಾಗಿತ್ತು. ಹೀಗಾಗಿ ಇಡೀ ಅರಣ್ಯವನ್ನು ಜರ್ಮನ್ ಪೊಲೀಸರು ಸುಮಾರು 5 ದಿನಗಳ ಕಾಲ ತಡಕಾಡಿದ್ದರು. ಕಡೆಗೂ ಕಾಡಿನ ಪೊದೆಯಲ್ಲಿ ಪ್ರತ್ಯಕ್ಷನಾದ ಈ ಮಹಾಶಯನ ಬಳಿ 4 ಗನ್‌ಗಳು ಸೇರಿದಂತೆ ಒಂದು ಕೊಡಲಿ ಸಿಕ್ಕಿದೆ. ಕೂಡಲೇ ಆತನನ್ನ ವಶಕ್ಕೆ ಪಡೆದ ಪೊಲೀಸರು, ವಿಚಾರಿಸಿದಾಗ ತನ್ನ ನಾಮಧೇಯ ಈವ್ ರಾಶ್ ಅಂತಾ ತಿಳಿಸಿದ್ದಾನೆ.

ಕಾಡು ಎಂದರೆ ಸಿಕ್ಕಾಪಟ್ಟೆ ಇಷ್ಟ..!

ಕಾಡು ಎಂದರೆ ಸಿಕ್ಕಾಪಟ್ಟೆ ಇಷ್ಟ..!

31 ರ ಹರೆಯದ ಈವ್ ರಾಶ್ ಬಗ್ಗೆ ಆತನ ತಾಯಿ ಭಯಾನಕ ಸಂಗತಿಗಳನ್ನ ರಿವೀಲ್ ಮಾಡಿದ್ದಾರೆ. ಚಿಕ್ಕವನಿದ್ದಾಗಲೇ ನಾಡಿಗಿಂತ ಕಾಡಿನ ಬಗ್ಗೆಯೇ ಈವ್ ರಾಶ್ ಒಲವು ತೋರಿಸುತ್ತಿದ್ದನಂತೆ. ಅಲ್ಲದೆ ನಗರ ಬಿಟ್ಟು ಕಾಡಿನ ಅಂಚಿನಲ್ಲಿ ವಾಸಿಸಲು ಇಷ್ಟಪಡುತ್ತಿದ್ದ ಅಂತಾ ಈವ್ ತಾಯಿ ತಿಳಿಸಿದ್ದಾರೆ. ತನ್ನ ಆಹಾರವನ್ನು ತಾನೇ ಬೆಳೆದುಕೊಳ್ಳುತ್ತಿದ್ದ ಈತ, ಸ್ವಾವಲಂಬಿ ಬದುಕು ಸಾಗಿಸುತ್ತಿದ್ದ. ಕಾಡಿನ ಅಂಚಿನಲ್ಲಿ ಗುಡಿಸಲು ಹಾಕಿಕೊಂಡಿದ್ದ ಈವ್, ಇತ್ತೀಚೆಗೆ ತಾನು ವಾಸವಿದ್ದ ಬಾಡಿಗೆ ಮನೆ ಬಿಟ್ಟು ಬಂದಿದ್ದನಂತೆ. ಹೀಗೆ ಹೊರ ಬಂದವನು ಕಾಡಿನ ಅಂಚಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ. ಇದಿಷ್ಟೇ ಅಲ್ಲ, ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ಇರುವುದು ಕೂಡ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಥೇಟ್ ‘ರ‍್ಯಾಂಬೋ’ ಸಿನಿಮಾ ಸ್ಟೋರಿ..!

ಥೇಟ್ ‘ರ‍್ಯಾಂಬೋ’ ಸಿನಿಮಾ ಸ್ಟೋರಿ..!

ಅಂದಹಾಗೆ ಈವ್ ರಾಶ್ ಟ್ರ್ಯಾಜಿಡಿಗೂ, 1982ರಲ್ಲಿ ರಿಲೀಸ್ ಆಗಿದ್ದ ಹಾಲಿವುಡ್ ಬ್ಲಾಕ್‌ಬಸ್ಟರ್ ‘ರ‍್ಯಾಂಬೋ' ಸಿನಿಮಾ ಸ್ಟೋರಿಗೂ ಸಿಕ್ಕಾಪಟ್ಟೆ ಹೋಲಿಕೆ ಇದೆ. ‘ರ‍್ಯಾಂಬೋ' ಚಿತ್ರದಲ್ಲಿ ಅಮೆರಿಕ ಸೇನಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ವಿಯೇಟ್ನಾಂ ಯುದ್ಧದಲ್ಲಿ ಪಾಲ್ಗೊಂಡು ತವರಿಗೆ ಮರಳುತ್ತಾನೆ. ಹೀಗೆ ಬಂದ ಅನಾಮಿಕನನ್ನು ಕಂಡು ಪೊಲೀಸರಿಗೆ ಅನುಮಾನ ಮೂಡುತ್ತದೆ.

ಸೆರೆಹಿಡಿದರೂ ಪರಾರಿ ಆಗ್ತಾನೆ

ಸೆರೆಹಿಡಿದರೂ ಪರಾರಿ ಆಗ್ತಾನೆ

ಕಡೆಗೆ ಆತನ ಬೆನ್ನುಬಿದ್ದು ಸೆರೆಹಿಡಿದರೂ, ಆತ ಪೊಲೀಸರಿಂದ ಪರಾರಿ ಆಗ್ತಾನೆ. ಈತನ ಬೆನ್ನುಬೀಳುವ ಪೊಲೀಸರು ದಿನಕಳೆದರೂ ಹಿಡಿಯಲು ಆಗುವುದಿಲ್ಲ. ‘ರ‍್ಯಾಂಬೋ' ಸಿನಿಮಾದಲ್ಲಿ ಖ್ಯಾತ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ನಟಿಸಿದ್ದರು. ಈವ್ ರಾಶ್ ರೀತಿಯೇ ಸಿಲ್ವೆಸ್ಟರ್ ಸ್ಟಲ್ಲೋನ್ ಕಾಡಿನಲ್ಲಿ ಅಡಗಿ ಕುಳಿತು, ಅಮೆರಿಕ ಪೊಲೀಸ್ ಪಡೆಯನ್ನ ಕಾಡಿದ್ದರು. ಈಗ ನಡೆದಿರುವ ಘಟನೆ ಕೂಡ ಥೇಟ್ ‘ರ‍್ಯಾಂಬೋ' ಸಿನಿಮಾದ ಸ್ಟೋರಿಯ ರೀತಿಯೇ ಇದೆ. ಈ ಹಿನ್ನೆಲೆಯಲ್ಲಿ ಜರ್ಮನಿಯ ಮಾಧ್ಯಮಗಳು ಈ ಘಟನೆಯನ್ನ ‘ರ‍್ಯಾಂಬೋ' ಸಿನಿಮಾಗೆ ಹೋಲಿಸಿವೆ.

English summary
German police succeed in arresting of a suspected gunman Yves Rausch nicknamed ‘Rambo’. After five-days of manhunt in the black forest near Oppenau, in south-west Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X