• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಟ್‌ವಾಕ್ ಮಾಡುತ್ತಲೇ ಸ್ತನ್ಯಪಾನ: ಚರ್ಚೆಗೆ ಗ್ರಾಸವಾದ ರೂಪದರ್ಶಿ

|

ಮಿಯಾಮಿ, ಜುಲೈ 18: ಅಮೆರಿಕದ ರೂಪದರ್ಶಿಯೊಬ್ಬರು ಮಗುವಿಗೆ ಎದೆಹಾಲು ಉಣಿಸುತ್ತಲೇ ಕ್ಯಾಟ್‌ವಾಕ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ತನ್ಯಪಾನ ಮಾಡುವ ವಿಚಾರದಲ್ಲಿ ಮಹಿಳೆಯರು ಮುಜುಗರ ಅನುಭವಿಸುವ ಕುರಿತು ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಈ ರೂಪದರ್ಶಿಯ ದಿಟ್ಟತನ ಒಂದೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಟೀಕೆಗಳು ಸಹ ವ್ಯಕ್ತವಾಗಿದೆ.

ಮುಕ್ತ ಸ್ತನ್ಯಪಾನದಲ್ಲಿ ಯಾವುದೇ ಅಶ್ಲೀಲತೆಯಿಲ್ಲ : ಹೈಕೋರ್ಟ್

ಭಾನುವಾರ ನಡೆದ ಸ್ಫೋರ್ಟ್ಸ್‌ ಇಲ್ಲುಸ್ಟ್ರೇಟೆಡ್ ಸ್ವಿಮ್ ಸೂಟ್ ಶೋದಲ್ಲಿ ಬಿಕಿನಿ ಧರಿಸಿಕೊಂಡು ಬಂದ ಮಾರಾ ಮಾರ್ಟಿನ್, ತಮ್ಮ ಐದು ತಿಂಗಳ ಮಗಳು ಅರಿಯಾಗೆ ಕ್ಯಾಟ್ ವಾಕ್ ಮಾಡುತ್ತಲೇ ಹಾಲುಣಿಸಿದರು.

ಅದನ್ನು ಕಂಡು ನೆರೆದಿದ್ದವರೆಲ್ಲ ಜೋರಾಗಿ ಕರತಾಡನ ಮಾಡಿದರು. ಆ ಸದ್ದಿನಿಂದ ತನ್ನ ಮಗಳಿಗೆ ತೊಂದರೆ ಆಗದಂತೆ ಮೊದಲೇ ಅವರು ನೀಲಿ ವರ್ಣದ ಹೆಡ್‌ಫೋನ್‌ಗಳಿಂದ ಅಕೆಯ ಕಿವಿಗಳನ್ನು ಮುಚ್ಚಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಮಾರ್ಟಿನ್, 'ಅದ್ಭುತ ರಾತ್ರಿ. ಸ್ತನ್ಯಪಾನವು ಸಹಜ ಪ್ರಕ್ರಿಯೆ ಎಂಬುದನ್ನು ಹಾಗೂ ಮಹಿಳೆಯರು ಇದನ್ನು ಮಾಡಬಹುದು ಎಂದು ಇತರರಿಗೂ ತೋರಿಸಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು

ನಾನು ನನ್ನ ಮಗಳೊಂದಿಗೆ ನಿತ್ಯ ಮಾಡುವ ಕೆಲಸವನ್ನು ಮಾಡಿದ್ದಕ್ಕೆ ಒಬ್ಬರೂ ಪತ್ರಿಕೆಗಳ ಶೀರ್ಷಿಕೆಯಲ್ಲಿ ಬಂದಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

'ಶೋ ತಡವಾಗಿದ್ದರಿಂದ ಕ್ಯಾಟ್‌ವಾಕ್ ಮಾಡುವ ನನ್ನ ಸರದಿ ಬರುವ ವೇಳೆ ಆಕೆ ಹಸಿದಿದ್ದಳು. ಅದು ಅವಳ ಆಹಾರ ಸೇವನೆ ಸಮಯ. ತಂಡದ ಸದಸ್ಯರೊಬ್ಬರು ವಾಕ್ ಮಾಡುತ್ತಲೇ ಆಕೆಗೆ ಹಾಲುಣಿಸುವಂತೆ ಸಲಹೆ ಮಾಡಿದರು' ಎಂದು ಮಾರ್ಟಿನ್ ವಿವರಿಸಿದ್ದಾರೆ.

ಬಿಕಿನಿ ಧರಿಸಿ ಮಾರ್ಜಾಲ ನಡಿಗೆ ನಡೆಯುತ್ತಲೇ ಮುಜುಗರ ಪಡದೆ ಮಗುವಿಗೆ ಹಾಲುಣಿಸಿದ ಮಾರ್ಟಿನ್ ಅವರ ದಿಟ್ಟತನಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!

ಮಗುವಿಗೆ ಜನ್ಮ ನೀಡಿದ ಒಂದು ವಾರದಲ್ಲಿಯೇ ಕೆಲಸಕ್ಕೆ ಹಿಂದಿರುಗುವ ತಾಯಂದಿರಿಗೆ ಕಚೇರಿ ಹಾಗೂ ಸಾರ್ವಜನಿಕದ ಸ್ಥಳಗಳಲ್ಲಿ ಎದೆಹಾಲು ಉಣಿಸುವುದು ದೊಡ್ಡ ಸಮಸ್ಯೆಯಾಗಿದೆ.

ಮಗುವಿಗೆ ಹಾಲುಣಿಸುವುದು ಮುಖ್ಯವಾದ ಕೆಲಸ. ಸಾರ್ವಜನಿಕ ಸ್ಥಳಗಳಲ್ಲಿಯೇ ಇದ್ದರೂ ಅದರ ಬಗ್ಗೆ ತಲೆಕಡೆಸಿಕೊಳ್ಳಬಾರದು. ಅದೊಂದು ನೈಸರ್ಗಿಕ ಕ್ರಿಯೆ. ಹೀಗಾಗಿ ಅದರ ಬಗ್ಗೆ ಮುಜುಗರ ಪಡಬಾರದು ಎಂದು ಉತ್ತೇಜನ ನೀಡುವ ಅನೇಕ ಚಟುವಟಿಕೆಗಳು ನಡೆದಿವೆ.

ಭಾರತದಲ್ಲಿನ್ನೂ ಸ್ತನ್ಯಪಾನದ ಮಹತ್ವ ಅರಿವಾಗಿಲ್ಲ!

ಮಾರ್ಟಿನ್ ಅವರ ಧೈರ್ಯ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತು ಪ್ರಶಂಸೆ ವ್ಯಕ್ತವಾಗಿದೆ.

ಆದರೆ, ಮಾರ್ಟಿನ್ ಅವರ ವಿರುದ್ಧ ಟೀಕೆಗಳೂ ಸಹ ಕೇಳಿಬಂದಿವೆ. ಮಾರ್ಟಿನ್ ಅವರ ನಡೆ ಸೂಕ್ತವಾಗಿರಲಿಲ್ಲ ಎಂದು ಕೆಲವು ಹೇಳಿದ್ದಾರೆ.

ಮಹಿಳಾವಾದಿ ವರದಿಗಳನ್ನು ಪ್ರಕಟಿಸುವ ವೆಬ್‌ಸೈಟ್ ಜೆಜೆಬೆಲ್ 'ಸ್ತನ್ಯಪಾನದ 'ಸಬಲೀಕರಣ' ತಮಾಷೆಯ ವಸ್ತುವಾಗಿಬಿಟ್ಟಿದೆ' ಎಂಬುದಾಗಿ ಟೀಕಿಸಿದೆ.

ಕೆಲವರು ಮಾರ್ಟಿನ್ ಅವರು ಪ್ರಚಾರ ಗಿಟ್ಟಿಸಿಕೊಳ್ಳಲು ಈ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿಯಾಗುವ ಸಲುವಾಗಿ ಸ್ತನ್ಯಪಾನ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Amercian model breastfed her five months old baby on a Miami Catwalk has been hailed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more