ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್‌ಟಾಕ್‌ಗೆ ಸೆಡ್ಡು ಹೊಡೆದಿದ್ದ 'ಮಿತ್ರೋ'ಗೆ ಗೇಟ್‌ಪಾಸ್ ನೀಡಿದ ಗೂಗಲ್

|
Google Oneindia Kannada News

ದೆಹಲಿ, ಜೂನ್ 2: ಚೀನಾ ಮೂಲದ ಟಿಕ್‌ಟಾಕ್‌ಗೆ ಪೈಪೋಟಿ ಎಂದು ಹೇಳಲಾಗುತ್ತಿದ್ದ ಮಿತ್ರೋ appಗೆ ಗೂಗಲ್ ಪ್ಲೇ ಸ್ಟೋರ್ ಗೇಟ್ ಪಾಸ್ ನೀಡಿದೆ.

Recommended Video

ಕೊರೊನಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ | Oneindia Kannada

ಪ್ರಧಾನಿ ಮೋದಿ ಸ್ವದೇಶಿ ವಸ್ತುಗಳ ಬಳಕೆ ಮಾಡಿ ಎಂದು ಭಾಷಣದಲ್ಲಿ ಉಲ್ಲೇಖ ಮಾಡಿದ ಬಳಿಕ, ಮಿತ್ರೋ ಆಪ್ ಕುರಿತು ಭಾರತೀಯರು ಹೆಚ್ಚು ಆಸಕ್ತಿ ನೀಡಿದರು. ಚೀನಾದ ಟಿಕ್‌ಟಾಕ್ ಬ್ಯಾನ್ ಮಾಡಿ, ಸ್ವದೇಶದ ಮಿತ್ರೋ ಬಳಸಿ ಎಂದು ಅಭಿಯಾನ ಶುರು ಮಾಡಿದರು.

ಭಾರತದಲ್ಲಿ ಟಿಕ್‌ಟಾಕ್‌ಗೆ 'ಅಂತ್ಯ'ಕಾಲ: ಚೀನಾಗೆ ಸೆಡ್ಡು ಹೊಡೆದ ಸ್ವದೇಶಿ ಮಿತ್ರೋ?ಭಾರತದಲ್ಲಿ ಟಿಕ್‌ಟಾಕ್‌ಗೆ 'ಅಂತ್ಯ'ಕಾಲ: ಚೀನಾಗೆ ಸೆಡ್ಡು ಹೊಡೆದ ಸ್ವದೇಶಿ ಮಿತ್ರೋ?

ನೋಡು ನೋಡುತ್ತಿದ್ದಂತೆ ಐದು ಮಿಲಿಯನ್ ಗ್ರಾಹಕರು ಮಿತ್ರೋ ಡೌನ್‌ಲೌಡ್ ಮಾಡಿದರು. ಅಷ್ಟರಲ್ಲೇ ಮಿತ್ರೋ ಆಪ್ ಭಾರತದ್ದಲ್ಲ ಎಂಬ ವಿಷಯ ಹೊರಬಿತ್ತು. ಮಿತ್ರೋ ಆಪ್ ಅಭಿವೃದ್ದಿ ಪಡಿಸಿರುವುದು ಪಾಕಿಸ್ತಾನ ಸಂಸ್ಥೆ ಎಂಬ ವಿಷಯ ಚರ್ಚೆಯಾಗುತ್ತಿದ್ದಂತೆ ಮಿತ್ರೋಗೆ ಭಾರತದಲ್ಲಿ ವಿರೋಧ ವ್ಯಕ್ತವಾಯಿತು. ಈ ನಡುವೆ ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಹೊರಬಿದ್ದಿದೆ. ಮುಂದೆ ಓದಿ....

ಪಾಕಿಸ್ತಾನ ಕೋಡ್, ಭಾರತಕ್ಕೆ ಮಾರಾಟ

ಪಾಕಿಸ್ತಾನ ಕೋಡ್, ಭಾರತಕ್ಕೆ ಮಾರಾಟ

ಪಾಕಿಸ್ತಾನದ ಕ್ಯೂಬಾಕ್ಸಸ್ ಸಂಸ್ಥೆಯ ಆರಂಭದಲ್ಲಿ ಟಿಕ್‌ಟಿಕ್‌ ಎಂಬ ಆಪ್ ಅಭಿವೃದ್ದಿ ಪಡಿಸಿತ್ತು. ಈ ಆಪ್ ಕೋಡ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಇದನ್ನು ಕೇವಲ 2600 ರೂಪಾಯಿಗಳಿಗೆ ಖರೀದಿಸಿದ್ದರು. ಇದೀಗ, ಅದೇ ಆಪ್‌ನ್ನು ಲೋಗೋ ಬದಲಾಯಿಸಿ ಮಿತ್ರೋ ಎಂದು ನಾಮಕರಣ ಮಾಡಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ ಎಂಬ ವಿಷಯ ಹೊರಬಿದ್ದಿದೆ.

ಕ್ಯೂಬಾಕ್ಸಸ್ ಸಂಸ್ಥೆ ಮಾಲೀಕ ಹೇಳಿದ್ದೇನು?

ಕ್ಯೂಬಾಕ್ಸಸ್ ಸಂಸ್ಥೆ ಮಾಲೀಕ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಕ್ಯೂಬಾಕ್ಸಸ್ ಸಂಸ್ಥೆಯ ಮಾಲೀಕ ಇರ್ಫಾನ್ ಶೇಖ್ 'ಟಿಕ್‌ಟಿಕ್‌ ಕೋಡ್‌ ಬಳಸಿ, ಅದರ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮಿತ್ರೋ ಆಪ್ ಅಭಿವೃದ್ದಿಪಡಿಸಲಾಗಿದೆ' ಎಂದು ತಿಳಿಸಿದ್ದಾರೆ. ಅಲ್ಲಿಗೆ ಕೋಡ್‌ ಪಾಕಿಸ್ತಾನದ್ದು, ಅಭಿವೃದ್ದಿ ಪಡಿಸಿ ಹೆಸರು ಬದಲಿಸಿರುವ ಕಾರಣ ಮಿತ್ರೋ ಭಾರತದ್ದು ಆಗಿದೆ.

ಗೂಗಲ್ ನಿಯಮ ಉಲ್ಲಂಘನೆ

ಗೂಗಲ್ ನಿಯಮ ಉಲ್ಲಂಘನೆ

ಗೂಗಲ್ ನಿಯಮವನ್ನು ಮಿತ್ರೋ ಆಪ್ ಉಲ್ಲಂಘನೆ ಮಾಡಿದ ಎಂಬ ಕಾರಣಕ್ಕೆ, ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. ಮೂಲ ವಿಷಯವನ್ನು ನಕಲು ಮಾಡುವುದು ಮತ್ತು ಅದರ ಮೌಲ್ಯವನ್ನು ಅನುಸರಿಸುವುದು ಗೂಗಲ್ ಅನುಮೋದಿಸುವುದಿಲ್ಲ. ಹಾಗಾಗಿ, ಮಿತ್ರೋ ಆಪ್ ಗೆ ಗೇಟ್ ಪಾಸ್ ನೀಡಿದೆ. ಐಐಟಿ ರೂರ್ಕಿಯ ಶಿವಾಂಕ್ ಅವರು ಈ ಆಪ್ ಅಭಿವೃದ್ದಿ ಪಡಿಸಿದ್ದಾರೆ ಎಂದು ಹೇಳಲಾಗಿದೆ. ಶಿವಾಂಕ್ ಈವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

5 ಮಿಲಿಯನ್ ಡೌನ್‌ಲೌಡ್

5 ಮಿಲಿಯನ್ ಡೌನ್‌ಲೌಡ್

ಇದಕ್ಕೂ ಮುಂಚೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಿತ್ರೋ ಆಪ್ ಡೌನ್‌ಲೌಡ್ ಹೆಚ್ಚಾಗಿತ್ತು. ಸುಮಾರು 5 ಮಿಲಿಯನ್ (50 ಲಕ್ಷ) ಜನರು ಆಪ್ ಡೌನ್‌ಲೌಡ್‌ ಮಾಡಿದ್ದರು. ಜೊತೆಗೆ ರೇಟಿಂಗ್ ಕೂಡ ಹೆಚ್ಚಿತ್ತು. ಇದರಿಂದ ಟಿಕ್‌ಟಾಕ್‌ ರೇಟಿಂಗ್ ಕಡಿಮೆಯಾಗಿತ್ತು. ಆದ್ರೀಗ, ಮಿತ್ರೋ ಆಪ್ ಬಗ್ಗೆ ನಕಲಿ-ಅಸಲಿ ಚರ್ಚೆ ಆಗುತ್ತಿರುವುದರಿಂದ ಆಪ್ ಬಗ್ಗೆ ನಂಬಿಕೆ ಇಲ್ಲದಂತಾಗಿದೆ.

English summary
Mitron App Officially Removed From Google Play Store. now, its good time for Tiktok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X