ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೇಷ್ಯಾ ವಿಮಾನ: 6 ಭಾರತೀಯರ ದುರಂತ ಕಥೆಗಳು

By Srinath
|
Google Oneindia Kannada News

ಕೌಲಾಲಂಪುರ, ಮಾರ್ಚ್ 10: ಮಲೇಷಿಯಾದ ಬೋಯಿಂಗ್ ವಿಮಾನವೊಂದು ಕಳೆದ ವಾರಾಂತ್ಯ ನಾಪತ್ತೆಯಾಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿಗತಿಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.

ಈ ಮಧ್ಯೆ, ನತದೃಷ್ಟ ವಿಮಾನವು ಚೀನಾದ ಸಮುದ್ರದೊಳಕ್ಕೆ ಬಿದ್ದಿದೆ ಎನ್ನಲಾಗಿದೆ. ಆದರೆ ತಾಜಾ ವರದಿಗಳ ಪ್ರಕಾರ ಚೀನಾದ ಬೀಜಿಂಗ್ ಗೆ ಹೊರಟಿದ್ದ ಈ ಬೃಹತ್ ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದೂ ಹೇಳಲಾಗಿದೆ. Malaysian Airlines flight MH370 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಭಾರತೀಯರ ವಿವರ ಹೀಗಿದೆ:

Malaysia Airlines Boeing plane missing - 6 Indian passengers details

1) Muktesh Mukherjee: 42 ವರ್ಷದ ಮುಕ್ತೇಶ್ ಮುಖರ್ಜಿ ಮೂಲತಃ ಕೆನಡಾ ನಿವಾಸಿ. ಚೀನಾದಲ್ಲಿ Xcoal Energy and Resources ಕಂಪನಿಯ ಉಪಾಧ್ಯಕ್ಷರಾಗಿದ್ದರು. ಅವರ ಪತ್ನಿ ಚೀನಾ ಮೂಲದ Xiaomo Bai ಸಹ ನಾಪತ್ತೆಯಾಗಿರುವ ವಿಮಾನದಲ್ಲಿದ್ದರು. ಮುಕ್ತೇಶ್ ಅವರಿಗೆ 9 ಮತ್ತು 2 ವರ್ಷದ ಇಬ್ಬರು ಪುತ್ರರಿದ್ದಾರೆ.

ಮುಕ್ತೇಶ್ ಮುಖರ್ಜಿ ಅವರು ಇಂದಿರಾ ಗಾಂಧಿ ಸಂಪುಟದಲ್ಲಿ ಉಕ್ಕು ಸಚಿವರಾಗಿದ್ದ ಮೋಹನ್ ಕುಮಾರಮಂಗಳಂ ಅವರ ಮೊಮ್ಮಗ. ಮೋಹನ್ ಅವರ ಹಿರಿಯ ಪುತ್ರಿ ಉಮಾ ಅವರ ಪುತ್ರ ಮುಕ್ತೇಶ್. ಅಂದಹಾಗೆ, ಮೋಹನ್ ಕುಮಾರಮಂಗಳಂ ಅವರು 1973ರ ಮೇ ತಿಂಗಳಲ್ಲಿ ದಿಲ್ಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ವಿಮಾನಾಪಘಾತದಲ್ಲಿ ಸಾವನ್ನಪ್ಪಿದ್ದರು.

2) Chandrika Sharma: 51 ವರ್ಷದ ಚಂದ್ರಿಕಾ ಶರ್ಮಾ ಸಾಮಾಜಿಕ ಕಾರ್ಯಕರ್ತೆ. FAO ಆಯೋಜಿಸಿದ್ದ ಆಹಾರ ಮತ್ತು ಕೃಷಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮಂಗೋಲಿಯಾಕ್ಕೆ ತೆರಳಿದ್ದರು. ಚೆನ್ನೈ ನಿವಾಸಿಯಾಗಿದ್ದ ಚಂದ್ರಿಕಾ ಅವರು Tata Institute of Social Sciences (TISS) ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದರು.

3) Vinod Kolekar: 63 ವರ್ಷದ ವಿನೋದ್ ಕೋಳೆಕರ್, 59 ವರ್ಷದ ಚೇತನಾ ಕೋಳೆಕರ್ (Chetana Kolekar) ಮತ್ತು 23 ವರ್ಷದ ಸ್ವಾನಂದ ಕೋಳೆಕರ್ (Swanand Kolekar) ಒಂದೇ ಕುಟುಂಬದವರು. ಇವರೆಲ್ಲಾ ಮುಂಬೈ ನಿವಾಸಿಗಳು.

ವಿನೋದ್ ಮತ್ತು ಚೇತನಾ ದಂಪತಿಯ ಹಿರಿಯ ಪುತ್ರ ಸಂವೇದ್ (29) ಇತ್ತೀಚೆಗೆ astrophysicsನಲ್ಲಿ PhD ಪಡೆದಿದ್ದಾನೆ. ಅದರ ಘಟಿಕೋತ್ಸವ ಬೀಜಿಂಗ್ ನಲ್ಲಿ ಆಯೋಜಿಸಲಾಗಿತ್ತು. ಹಿರಿಯ ಪುತ್ರ ಪದವಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ದಂಪತಿ ಮತ್ತು ಕಿರಿಯ ಮಗ ಸ್ವಾನಂದ ನತದೃಷ್ಟ ವಿಮಾನದಲ್ಲಿ ಬೀಜಿಂಗ್ ಗೆ ತೆರಳಿದ್ದರು. ದುರ್ದೈವಿ ಚೇತನಾ ಮೊದಲ ಬಾರಿ ವಿಮಾನ ಹತ್ತಿದ್ದರು.

4) Kranti Shirsat: 44 ವರ್ಷದ ಕ್ರಾಂತಿ ಶಿರಾಸತ್ ಪೂನಾದವರು. ಇವರಿಗೆ ಇಬ್ಬರು ಮಕ್ಕಳು. ಇವರ ಪತಿ ಪ್ರಹ್ಲಾದ್ ಅವರು ಉತ್ತರ ಕೋರಿಯಾದಲ್ಲಿ NGO ನಡೆಸುತ್ತಿದ್ದಾರೆ. ಅವರನ್ನು ಭೇಟಿಯಾಗಲು ನತದೃಷ್ಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

MSc ಪದವೀಧರೆ ಕ್ರಾಂತಿ ಅವರು ಪೂನಾದಲ್ಲಿ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು. ತಜಿಕಿಸ್ತಾನದಲ್ಲಿ ಪ್ರಹ್ಲಾದ್ ಕಾರ್ಯನಿರ್ವಹಿಸುತ್ತಿದ್ದಾಗ ಕುಟುಂಬ ಸಮೇತ ಒಂದಷ್ಟು ವರ್ಷ ಅಲ್ಲಿ ವಾಸವಾಗಿದ್ದರು.

English summary
The whereabouts of the ill fated missing Boeing 777 is not known. Six Indians and at least one person of Indian origin were on board the Malaysia Airlines flight that remains missing. Here is brief details of those 7 Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X