• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೇಷ್ಯಾ ವಿಮಾನದ ಪೈಲಟ್ ಮಗಳು ಬರೆದ ಪತ್ರ

By Srinath
|

ಕೌಲಾಲಂಪುರ, ಮಾರ್ಚ್ 20: ಮಲೇಷಿಯಾದ ಬೋಯಿಂಗ್ ವಿಮಾನ ಎಲ್ಹೋಯ್ತೋ/ ಏನಾಯ್ತೋ ಪ್ರಪಂಚಕ್ಕೆ ಇನ್ನೂ ತಿಳಿದುಬಂದಿಲ್ಲ. ಅದರಲ್ಲಿದ್ದ 239 ಮಂದಿ ಪ್ರಯಾಣಿಕರು ಏನಾದರು ಎಂಬುದೂ ಗೊತ್ತಾಗುತ್ತಿಲ್ಲ. ವಿಮಾನ ಹೈಜಾಕ್ ಆಗಿದೆಯಾ? ಅದೂ ಗೊತ್ತಾಗುತ್ತಿಲ್ಲ.

ಈ ಮಧ್ಯೆ, ವಿಮಾನದ ಪೈಲಟ್ ಒಬ್ಬರು ವಿಮಾನ ಚಾಲನೆ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡರೆಂದೂ, ಅವರೇ ವಿಮಾನ ಅಪಹರಿಸಿದ್ದಾರೆಂದೂ ಗಾಳಿಸುದ್ದಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನತದೃಷ್ಟ ವಿಮಾನದ ಪೈಲಟ್ ಕ್ಯಾಪ್ಟನ್ ಅಬೀದ್ ರಹೀಂ ಹರುಣ್ ಅವರ ಮಗಳು ನೂರ್ ನಾಡಿಯಾ ಅಬೀದ್ ರಹೀಂ ಅವರು ಸಾರ್ವಜನಿಕವಾಗಿ ಪತ್ರವೊಂದನ್ನು ಬರೆದಿದ್ದಾರೆ.

(ಮಲೇಷ್ಯಾ ವಿಮಾನ: 6 ಭಾರತೀಯರ ದುರಂತ ಕಥೆಗಳು)

ಪತ್ರದಲ್ಲಿ ತಮ್ಮ ತಂದೆ Captain Abd Rahim Harun ಬಗ್ಗೆ ಮಗಳು ನೂರ್ ನಾಡಿಯಾ ಸಹಜವಾಗಿಯೇ ಅಪಾರ ಪ್ರೀತಿ, ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪತ್ರದ ಆಯ್ದ ಭಾಗಗಳು: Malaysia Airlines ಸಂಸ್ಥೆಯ ಹೆಮ್ಮೆಯ ಪೈಟಲ್ ಅವರು. ಅವರಿಗೂ ಸಂಸ್ಥೆಯ ಬಗ್ಗೆ ಅಪಾರ ವಿಶ್ವಾಸವಿತ್ತು.

ಅದೊಮ್ಮೆ ಮನೆಗೆ ದರೋಡೆಕೋರರು ನುಗ್ಗಿದ್ದರು. ನಮ್ಮಮ್ಮ ಗರ್ಭಿಣಿಯಾಗಿದ್ದರೂ. ಆದರೂ ಅಪ್ಪನಿಗೆ ಒಂದು ಮಾತೂ ಹೇಳದೆ ಎಲ್ಲವನ್ನೂ ನಿಭಾಯಿಸಿದರು. ಏಕೆಂದರೆ ನಮ್ಮಪ್ಪನ ಹೆಗಲ ಮೇಲೆ ನೂರಾರು ಪ್ರಯಾಣಿಕರ ಜೀವವಿತ್ತು. ಅಪ್ಪನನ್ನು ಗಾಬರಿಪಡಿಸಲಿಲ್ಲ.

ಪೈಲಟ್ ಆಗಿದ್ದ ನಮ್ಮಪ್ಪ ಹೆಚ್ಚಾಗಿ ವಿದೇಶಗಳಲ್ಲೇ ಕಾಲ ಕಳೆಯುತ್ತಿದ್ದರು. ಅವರನ್ನು ನಾವು ಯಾವಾಗಲೋ ನೋಡುತ್ತಿದ್ದೆವು. ಆದರೂ ನಮಪ್ಪ ನಮಗಾಗಿ ಎಲ್ಲೋ ಕಷ್ಟಪಡುತ್ತಿದ್ದಾರೆ ಎಂದು ಸಮಾಧಾನಪಡುತ್ತಿದ್ದೆವು. (ಮಲೇಷ್ಯಾ ವಿಮಾನ: ಮೌನಿ ಕೇಂದ್ರದ ವಿರುದ್ಧ ಕುಟುಂಬ ಕಿಡಿ)

ಈಗ ನಡೆದಿರಬಹುದಾದ ದುರಂತ ನೆನಪಿಸಿಕೊಂಡರೆ ದುಃಖವಾಗುತ್ತದೆ. ಆದರೆ ಜನ ತಮ್ಮ ತೀರ್ಪುಗಳನ್ನು ನೀಡುವ ಮುನ್ನ, ಬೆರಳೆತ್ತಿ ತೋರಿಸಿ ದೂಷಿಸುವ ಮುನ್ನ, ಊಹಾಪೋಹಗಳು, ಗಾಳಿಸುದ್ದಿ ಹಬ್ಬುವ ಮುನ್ನ ಒಮ್ಮೆ ಸತ್ಯದ ಮತ್ತೊಂದು ಮುಖವನ್ನೂ ನೋಡಿ. MH370 ಎಲ್ಲೇ ಇದ್ದರೂ ಮರಳಿ ಬರಲೆಂದು ನಾನು ಪ್ರಾರ್ಥಿಸುತ್ತೇನೆ.

ಪತ್ರ ಪೂರ್ಣ ಪಾಠಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:

English summary
The whereabouts of the ill fated missing MH 370 Boeing 777 is not yet known. In the meanwhile Malaysia Airlines pilot Captain Abd Rahim Harun's daughter Nur Nadia Abd Rahim has written an open letter. In her letter, Nur Nadia Abd Rahim expresses her love and appreciation for her father. It was first uploaded on www.nst.com.my. Read the entire letter here:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X