ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಾಡ: ತಲೆಗೆ ಪೆಟ್ಟು ಬಿದ್ದಿದ್ದೆ ತಡ ಕುರುಡುತನ ಮಾಯ!

By Mahesh
|
Google Oneindia Kannada News

ಫ್ಲೋರಿಡಾ, ಮೇ 10: ವಿಶ್ವದ ಅನೇಕ ಕಡೆ ಧಾರ್ಮಿಕ ನಂಬಿಕೆಯಿಂದ ಪವಾಡಗಳು ನಡೆಯುವುದನ್ನು ನೋಡಿರಬಹುದು, ಕೇಳಿರಬಹುದು, ಎಷ್ಟೋ ವರ್ಷಗಳ ನಂತರ ಕಣ್ಣಿಲ್ಲದವರಿಗೆ ದೃಷ್ಟಿ ಬರುವುದು ಸಿನಿಮಾಗಳಲ್ಲಿ, ಕಥೆ ಪುಸ್ತಕಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಂಭವಿಸುತ್ತದೆ ಎಂಬುದಕ್ಕೆ ಫ್ಲೋರಿಡಾದ ಮಹಿಳೆ ಜೀವಂತ ಸಾಕ್ಷಿಯಾಗಿದ್ದಾರೆ.

ಮೇರಿ ಆನ್ ಫ್ರಾಂಕೊ ಎಂಬ 70 ವರ್ಷದ ವೃದ್ಧೆಗೆ ಸುಮಾರು 20 ವರ್ಷಗಳ ಬಳಿಕ ಕಣ್ಣಿನ ದೃಷ್ಟಿ ಬಂದಿದೆ. 1993ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಕಣ್ಣಿನ ನರಗಳಿಗೆ ಪೆಟ್ಟು ತಿಂದು ದೃಷ್ಟಿ ಕಳೆದುಕೊಂಡಿದ್ದರು. ಆದರೆ, ಮನೆಯಲ್ಲಿ ಜಾರಿ ಬಿದ್ದ ವೃದ್ಧೆ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ ಬಳಿಕ ಆಕೆಗೆ ದಿಢೀರ್ ಆಗಿ ಕಣ್ಣು ಬಂದಿದೆ.[ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!]

20ವರ್ಷಗಳ ಕೆಳಗೆ ಅಪಘಾತದಿಂದ ಬೆನ್ನುಮೂಳೆಗೆ ಭಾರಿ ಪೆಟ್ಟು ತಿಂದು ಕುರುಡಾಗಿದ್ದ ಫ್ರಾಂಕೊ ಈಗ ಮತ್ತೊಮ್ಮೆ ದೃಷ್ಟಿ ಪಡೆದಿರುವ ನಿಜಕ್ಕೂ ವಿಸ್ಮಯಕಾರಿ ಘಟನೆ ಎಂದು ವೈದ್ಯರು ಘೋಷಿಸಿದ್ದಾರೆ.

Mary Ann Franco

ಮನೆಯಲ್ಲಿ ಜಾರಿ ಬಿದ್ದ ಮೇಲೆ ಕುತ್ತಿಗೆಗೆ ಪ್ಯಾಕ್ ಹಾಕಿಕೊಂಡಿದ್ದ ವೃದ್ಧೆಗೆ ಇತ್ತೀಚೆಗೆ ಸರ್ಜರಿ ಮಾಡಲಾಯಿತು. ಸರ್ಜರಿ ಮಾಡಿದ ಕೆಲ ಗಂಟೆಗಳ ಬಳಿಕ ಪ್ರಜ್ಞೆ ಪಡೆದುಕೊಂಡ ಫ್ರಾಂಕೊ ಅವರು ಮೊದಲಿನಂತೆ ಕಣ್ಬಿಟ್ಟು ನೋಡಲು ಆರಂಭಿಸಿದ್ದರು.

ಇದನ್ನು ವೈಜ್ಞಾನಿಕ ತಳಹದಿಯಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ನರವಿಜ್ಞಾನ ವಿಭಾಗದ ತಜ್ಞ ವೈದ್ಯ ಡಾ. ಜಾನ್ ಅಫ್ಶರ್ ಅವರು ಎಬಿಸಿ ನ್ಯೂಸ್ ಗೆ ಹೇಳಿದ್ದಾರೆ. 20 ವರ್ಷಗಳ ಹಿಂದೆ ಅಪಘಾತವಾಗಿ ಬೆನ್ನುಮೂಳೆ ಮುರಿದುಕೊಂಡಿದ್ದರು. ವರ್ಷದ ಕೆಳಗೆ ಜಾರಿ ಬಿದ್ದು ಕುತ್ತಿಗೆ ಮೂಳೆ ಮುರಿದುಕೊಂಡಿದ್ದರು. ಮೆದುಳಿನಿಂದ ಕಣ್ಣಿನ ನರಗಳಿಗೆ ರಕ್ತ ಸಂಚಾರವೇ ಇರಲಿಲ್ಲ. ತಲೆಗೆ ಪೆಟ್ಟುಬಿದ್ದ ಪರಿಣಾಮ ರಕ್ತ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಆಕೆಗೆ ಮತ್ತೊಮ್ಮೆ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಲಭಿಸಿದೆ ಎಂದು ಡಾ, ಜಾನ್ ಹೇಳಿದ್ದಾರೆ.

ಇದು ದೇವರ ಕೃಪೆ, ನಾನು ನನ್ನ ಕುಟುಂಬ, ಗಿಡ, ಮರ, ಚರ್ಚ್ ಎಲ್ಲವನ್ನು ನೋಡುತ್ತಿದ್ದೇನೆ. ನನ್ನ ಕಲ್ಪನೆಗಿಂತ ಎಲ್ಲವೂ ಕಿರಿದಾಗಿ ಕಾಣುತ್ತಿದೆ. ಅಪಘಾತಕ್ಕೂ ಮುನ್ನ ಕಣ್ಣಿಗೆ ಸರ್ಜರಿ ಮಾಡಿಸಲು ಮುಂದಾಗಿದ್ದೆ. ಈಗ ಯಾವ ಸರ್ಜರಿಯೂ ಬೇಡ, ನನಗೆ ದೃಷ್ಟಿ ಮರುಕಳಿಸಿದೆ ಎಂದು ಫ್ರಾಂಕೋ ಸಂತಸದಿಂದ ಹೇಳಿದ್ದಾರೆ.

English summary
Mary Ann Franco became blind after injuring her spine in a car accident in 1993. A 70-year-old woman in Florida who was been blind for over 20 years has regained her sight after falling over and hitting her head at her home, baffling her neurosurgeon who says it is a “true miracle.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X