ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಗಣಿ ಮೇಲ್ಛಾವಣಿ ಕುಸಿತ, 19 ಮಂದಿ ಬಲಿ

|
Google Oneindia Kannada News

ಬೀಜಿಂಗ್, ಜನವರಿ 13: ಉತ್ತರ ಚೀನಾದ ಗಣಿಯೊದರ ಮೇಲ್ಛಾವಣಿ ಕುಸಿದಿದ್ದು, 19 ಮಂದಿ ಬಲಿಯಾಗಿದ್ದು, ಇಬ್ಬರು ಗಣಿಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಶಾಂನ್ಷಿ ಪ್ರಾಂತ್ಯದ ಗಣಿಯಲ್ಲಿ ದುರಂತ ಸಂಭವಿಸಿದ ವೇಳೆ 87 ಮಂದಿ ಕಾರ್ಯನಿರತರಾಗಿದ್ದರು ಎಂದು ತಿಳಿದು ಬಂದಿದೆ. ಗಣಿಯಲ್ಲಿ ಸಿಲುಕಿರುವ ಸಿಬ್ಬಂದಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

19 ನೇ ದಿನ, ಗಣಿ ತಳ ತಲುಪಿದ ರಕ್ಷಣಾ ಸಿಬ್ಬಂದಿ... ಕಾರ್ಮಿಕರು ಮಾತ್ರ ನಾಪತ್ತೆ! 19 ನೇ ದಿನ, ಗಣಿ ತಳ ತಲುಪಿದ ರಕ್ಷಣಾ ಸಿಬ್ಬಂದಿ... ಕಾರ್ಮಿಕರು ಮಾತ್ರ ನಾಪತ್ತೆ!

ಅಕ್ರಮ ಗಣಿಗಾರಿಕೆ, ಗಣಿ ದುರಂತ ಚೀನಾದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಅಕ್ಟೋಬರ್ ನಲ್ಲಿ ಪೂರ್ವ ಶಾನ್ ಡೊಂಗ್ ಪ್ರಾಂತ್ಯದಲ್ಲಿ ನಡೆದ ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದರು.

Mining accident in China kills 19, two remain trapped

2017ರಲ್ಲಿ ಸರಿ ಸುಮಾರು 375ಕ್ಕೂ ಅಧಿಕ ಮಂದಿ ಗಣಿದುರಂತದಲ್ಲಿ ಮೃತಪಟ್ಟಿದ್ದು, ಕಳೆದ ವರ್ಷ ಈ ಪ್ರಮಾಣ ಶೇ 28.7ರಷ್ಟು ಇಳಿಕೆಯಾಗಿತ್ತು.

English summary
Nineteen people were killed while two remain trapped underground after a roof collapse at a coal mine in northern China, state media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X