ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಶತಮಾನದ ದಾಖಲೆ ಬರೆದ ಹಿಮಮಾರುತ

|
Google Oneindia Kannada News

ವಾಷಿಂಗ್ಟನ್‌, ಜನವರಿ 25: ನಿಮ್ಮ ಮನೆಯವರು, ಊರಿನವರು , ಅಕ್ಕಪಕ್ಕದವರು ಅಮೆರಿಕದಲ್ಲಿ ವಾಸವಿದ್ದಾರೆಯೇ? ಹಾಗಾದರೆ ಅವರು ಬೆಚ್ಚನೆಯ ಬಟ್ಟೆ ಧರಿಸಿಕೊಂಡು ಮನೆಯ ಮಧ್ಯೆ ಕುಳಿತು ಟೀ ಹೀರುತ್ತಿರಬಹುದು.

ಹೌದು ಪೂರ್ವ ಅಮೆರಿಕದಲ್ಲಿ ಎರಡು ಅಡಿ ಹಿಮ ಬಿದ್ದಿದ್ದೆ, ಬಿಳುತ್ತಲೇ ಇದೆ. ಅಮೆರಿಕದಲ್ಲಿ ಚಳಿಯ ಆರ್ಭಟ, ಜತೆಗೆ ಹಿಮ ಮಾರುತದ ಪ್ರಭಾವ. ಹಿಮಗಾಳಿಗೆ 9 ಜನ ಬಲಿಯಾಗಿದ್ದಾರೆ. ರಾಜಧಾನಿ ವಾಷಿಂಗ್ಟನ್‌ ಒಳಗೊಂಡಂತೆ ಅನೇಕ ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಯಿಂದ ಹೊರಗೆ ಬರುವುದು ಅಸಾಧ್ಯವಾದ ಮಾತೇ ಬಿಡಿ.[ಆಹಾ... ಕುಲು ಮನಾಲಿ ಪ್ರವಾಸ ಕಥನ]

ವಿಮಾನ ಸೇವೆಗಳನ್ನು ಸ್ಥಗಿತ ಮಾಡಲಾಗಿದೆ. ಅಮೆರಿಕದ 10 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸ ಲಾಗಿದ್ದು, 1.20 ಲಕ್ಷ ಮನೆಗಳು ವಿದ್ಯುತ್‌ ಸಂಪರ್ಕ ಕಳೆದುಕೊಂಡಿವೆ. 20 ರಾಜ್ಯಗಳ ಸುಮಾರು 8.5 ಕೋಟಿ ಮಂದಿ ತೊಂದರೆಗೆ ಒಳಗಾಗಿದ್ದಾರೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಜಾರ್ಜಿಯಾ, ನಾರ್ಥ್‌ ಕರೋಲಿನಾ, ಟೆನೆಸ್ಸಿ, ಮೇರಿಲ್ಯಾಂಡ್‌, ವರ್ಜೀನಿಯಾ, ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್‌ ಮತ್ತು ಕೆಂಟುಕಿಯ ಜನರು ಹಿಮದಿಂದ ತತ್ತರಿಸುವಂತಾಗಿದೆ. ಅಮೆರಿದಲ್ಲಿ ಹಿಮ ಮತ್ತು ಚಳಿಯ ಪ್ರಭಾವ ನೋಡಿಕೊಂಡು ಬರೋಣ... ಅಂದ ಹಾಗೆ ಬೆಂಗಳೂರಿನಲ್ಲಿ ಇವತ್ತಿನ ಉಷ್ಣಾಂಶ 28 ಡಿಗ್ರಿ, ನಾವೇ ಪುಣ್ಯವಂತರು ಬಿಡಿ! (ಪಿಟಿಐ ಚಿತ್ರಗಳು)

ರೈಲು ಸಂಚಾರವೂ ಬಂದ್

ರೈಲು ಸಂಚಾರವೂ ಬಂದ್

ಅನೇಕ ಕಡೆ ಸಂಚಾರ ವ್ಯವಸ್ಥೆ ಸ್ತಬ್ಧವಾಗಿದ್ದು ರೈಲು ಮತ್ತು ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ನಾರ್ಥ್‌ ಕರೋಲಿನಾ ಮತ್ತು ನ್ಯೂಯಾರ್ಕ್‌ ನಡುವಣ ಸಂಪರ್ಕ ಕಡಿದುಹೋಗಿದ್ದು ತೀವ್ರ ತೆರೆನಾದ ಹಿಮಗಾಳಿ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣವಿಲ್ಲ.

 ಶತಮಾನದ ದಾಖಲೆ

ಶತಮಾನದ ದಾಖಲೆ

ಈ ವಾರಾಂತ್ಯಕ್ಕೆ ವಾಷಿಂಗ್ಟನ್‌ನಲ್ಲಿ ಎರಡೂವರೆ ಅಡಿಗಳಷ್ಟು (30 ಇಂಚು) ಹಿಮ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 1922 ರಲ್ಲಿ ಇಲ್ಲಿ 28 ಇಂಚುಗಳಷ್ಟು ಹಿಮ ಬಿದ್ದಿದ್ದು ದಾಖಲೆ ಎಂದು ಹೇಳಲಾಗಿದೆ.

 ಇಂಥ ಹಿಮ ಮಾರುತ ಕಂಡಿರಲಿಲ್ಲ

ಇಂಥ ಹಿಮ ಮಾರುತ ಕಂಡಿರಲಿಲ್ಲ

90 ವರ್ಷಗಳ ಇತಿಹಾಸದಲ್ಲಿ ಕೇಳಿರದಂತಹ ಹವಾಮಾನ ಮುನ್ಸೂಚನೆಯನ್ನು ನಾವು ಕೇಳುತ್ತಿದ್ದೇವೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ನಿಜಕ್ಕೂ ನಮ್ಮನ್ನು ಆತಂಕಕ್ಕೆ ದೂಡಿದೆ ಎಂದು ವಾಷಿಂಗ್ಟನ್‌ ಡಿಸಿ ಮೇಯರ್‌ ಮಿರಿಯೆಲ್‌ ಇ ಬೌಸೆರ್‌ ಹೇಳಿದ್ದಾರೆ.

80 ಕಿ ಮೀ ವೇಗದಲ್ಲಿ ಹಿಮ ಮಾರುತ

80 ಕಿ ಮೀ ವೇಗದಲ್ಲಿ ಹಿಮ ಮಾರುತ

ಹಿಮಮಾರುತ ಇನ್ನೂ 36 ಗಂಟೆ ಮುಂದುವರಿಯಲಿದ್ದು, ಕೆಲವು ಪ್ರದೇಶಗಳಲ್ಲಿ ಎರಡು ಅಡಿಗಳಷ್ಟು ಹಿಮ ಬೀಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸುಮಾರು 80 ಕಿ.ಮೀ ವೇಗದಲ್ಲಿ ಹಿಮ ಮಾರುತ ಬೀಸುತ್ತಿದೆ.

ನ್ಯೂಯಾರ್ಕ್ ರಸ್ತೆ ನೋಡಿ

ನ್ಯೂಯಾರ್ಕ್ ರಸ್ತೆ ನೋಡಿ

ನ್ಯೂಯಾರ್ಕ್ ನ ರಸ್ತೆಯೊಂದರಲ್ಲಿ ಕಂಡು ಬಂದ ದೃಶ್ಯ. ನಮ್ಮ ಹಾಗೆ ಇಳಿ ಬಿಸಿಲನ್ನು ಆಸ್ವಾದಿಸುವ ಅವಕಾಶ ಅವರಿಗಿಲ್ಲ.

 ಸೈನಿಕರಲ್ಲ!

ಸೈನಿಕರಲ್ಲ!

ವಾಷಿಂಗ್ ಟನ್ ನಲ್ಲಿರುವ ಕೋರಿಯನ್ ವಾರ್ ಮೆಮೊರಿಯಲ್ ಸಮೀಪ ಪಾದಚಾರಿಯೊಬ್ಬರು ಹಾದು ಹೋದಾಗ ಕಣ್ಣಿಗೆ ಬಿದ್ದ ದೃಶ್ಯ.

 ಹಿಮ ತೆರವು ಸಾಹಸವೇ ಸರಿ

ಹಿಮ ತೆರವು ಸಾಹಸವೇ ಸರಿ

ಅನೆರಿದ ರಾಜಧಾನಿಯಲ್ಲಿ ರಸ್ತೆಯಲ್ಲಿ ತುಂಬಿರುವ ಹಿಮ ತೆರವು ಕಾರ್ಯಾಚರಣೆ ಕಂಡಿದ್ದು ಹೀಗೆ.

 ಮಾಸ್ಕೋ

ಮಾಸ್ಕೋ

ಮಾಸ್ಕೋದಲ್ಲಿಯೂ ಹಿಮದ ಆರ್ಭಟ ಕಡಿಮೆ ಇಲ್ಲ. ಮಕ್ಕಳು ಹಿಮದ ರಾಶಿಯಲ್ಲೇ ಆಟವಾಡುತ್ತ ಕಾಲ ಕಳೆದರು.

English summary
The eastern United States braced for a blizzard that could bury Washington under more snow than it has seen in nearly a century, before moving on to New York. Washington and neighboring cities including Baltimore could see up to two feet of snow accumulate in a short time as a result of the monster storm, which was also expected to generate fierce winds and icy rain in some area, forecasters said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X