ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಮೊಹರಂ ದಿನ ಪೆಟ್ರೋಲ್ ಗಿಂತ ಹಾಲು ದುಬಾರಿ

|
Google Oneindia Kannada News

ಕರಾಚಿ, ಸೆಪ್ಟೆಂಬರ್ 10: ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಹಾಲಿನ ದರ ಆಕಾಶವನ್ನೂ ಮೀರಿ ಮೇಲೆ ಚಿಮ್ಮಿದೆ. ಮೊಹರಂ ಆಚರಣೆ ದಿನವಾದ ಮಂಗಳವಾರ ಭಾರೀ ಬೆಲೆಗೆ ಹಾಲಿನ ಮಾರಾಟ ಮಾಡಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಒಂದು ಲೀಟರ್ ಹಾಲನ್ನು 140 ರುಪಾಯಿಗೆ (ಪಾಕಿಸ್ತಾನ ರುಪಾಯಿ) ಮಾರಲಾಗಿದೆ.

ಆಸಕ್ತಿಕರ ಸಂಗತಿ ಏನೆಂದರೆ, ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಹಾಲಿನ ದರಕ್ಕಿಂತ ಕಡಿಮೆ ಇದೆ. ಎರಡು ದಿನದ ಹಿಂದಷ್ಟೇ ಪೆಟ್ರೋಲ್ ಪ್ರತಿ ಲೀಟರ್ ಗೆ 113 ರುಪಾಯಿಯಂತೆ ಮಾರಾಟ ಆಗುತ್ತಿದ್ದರೆ, ಡೀಸೆಲ್ ಲೀಟರ್ ಗೆ 91 ರುಪಾಯಿಯಂತೆ ಮಾರಲಾಗಿದೆ.

ಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲುಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲು

ವರದಿಗಳ ಪ್ರಕಾರ, ಸಿಂಧ್ ಪ್ರಾಂತ್ಯದ ಹಲವೆಡೆ ಪ್ರತಿ ಲೀಟರ್ ಹಾಲಿಗೆ 140 ರುಪಾಯಿಯಂತೆ ಮಾರಲಾಗಿದೆ. ಬೇಡಿಕೆ ವಿಪರೀತ ಹೆಚ್ಚಾಗಿದ್ದರಿಂದ ಕರಾಚಿ ನಗರದಲ್ಲಿ 120ರಿಂದ 140 ರುಪಾಯಿ ತನಕ ಲೀಟರ್ ಹಾಲನ್ನು ಮಾರಾಟ ಮಾಡಲಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

Milk Costlier Than Petrol In Pakistan On Muharram

ಮೊಹರಂನಲ್ಲಿ ಪವಿತ್ರ ಮೆರವಣಿಗೆ ಮಾಡಲಾಗುತ್ತದೆ. ಆ ವೇಳೆ ನಗರದ ವಿವಿಧೆಡೆ ಹಾಲು, ಹಣ್ಣಿನ ರಸ, ತಂಪಾದ ನೀರು ನೀಡಲಾಗುತ್ತದೆ. ಆ ಕಾರಣಕ್ಕೆ ಹಾಲಿಗೆ ವಿಪರೀತ ಬೇಡಿಕೆ ಇದೆ. ಹೀಗೆ ಬೇಡಿಕೆ ಇರುವುದರಿಂದಲೇ ಹಾಲಿನ ಬೆಲೆ ವಿಪರೀತ ಏರಿಕೆ ಆಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಕರಾಚಿ ಕಮಿಷನರ್ ಕಚೇರಿಯು ಲೀಟರ್ ಹಾಲಿಗೆ ನಿಗದಿ ಪಡಿಸಿರುವ ದರ 94 ರುಪಾಯಿ. ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ. ಆದರೆ ಕಾನೂನು ಪಾಲನೆಯೇ ಆಗುತ್ತಿಲ್ಲ.

English summary
Milk per liter sold at 140 rupee (Pakistan Rupee) Karachi city and part of Sindh province on Muharram on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X