ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ಮಯನ್ಮಾರ್ ಮಿಲಿಟರಿ ವಿಮಾನದ ತುಂಡು ಸಮುದ್ರದಲ್ಲಿ ಪತ್ತೆ

By Sachhidananda Acharya
|
Google Oneindia Kannada News

ಮಯನ್ಮಾರ್, ಜೂನ್ 7: ಮಯನ್ಮಾರ್ ನಲ್ಲಿ ಮಿಲಿಟರಿ ವಿಮಾನವೊಂದು ಇಂದು ಮಧ್ಯಾಹ್ನ ನಾಪತ್ತೆಯಾಗಿತ್ತು. 106 ಪ್ರಯಾಣಿಕರಿದ್ದ ವಿಮಾನ ನಾಪತ್ತೆಯಾಗಿರುವುದಾಗಿ ಮಯನ್ಮಾರ್ ಸೇನಾ ಮುಖ್ಯಸ್ಥರು ಹೇಳಿದ್ದರು. ಇದೀಗ ವಿಮಾನ ತುಂಡೊಂದು ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿ ಹೇಳಿದ್ದು ವಿಮಾನಕ್ಕಾಗಿ ಹುಡುಕಾಟ ಮುಂದುವರಿದಿದೆ.

"ವಿಮಾನ ಬುಧವಾರ ಮ್ಯಾಕ್ ನಗರದಿಂದ ಯಂಗೋನ್ ಗೆ ಪ್ರಯಾಣ ಬೆಳೆಸಿತ್ತು. ಈ ಸಂದರ್ಭ ದವಾಯ್ ನಗರ ದಾಟಿದ ವಿಮಾನ 1.35ರ ವೇಳೆಗೆ ಸಂಪರ್ಕ ಕಡಿದುಕೊಂಡಿದೆ," ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಅಂಡಮಾನ್ ಸಮೀಪ ಸಮುದ್ರದ ಮೇಲೆ ಹಾರಾಡುತ್ತಿದ್ದಾಗ ವಿಮಾನ ಸಂಪರ್ಕ ಕಳೆದುಕೊಂಡಿದೆ. ಹೀಗಾಗಿ ವಿಮಾನವನ್ನು ಹುಡುಕಲು ಹಡಗುಗಳು ಹಾಗೂ ವಿಮಾನಗಳನ್ನು ನಿಯೋಜನೆ ಮಾಡಲಾಗಿದೆ.

ವಿಮಾನದಲ್ಲಿ 106 ಪ್ರಯಾಣಿಕರು ಹಾಗೂ 14 ಸಿಬ್ಬಂದಿಗಳಿದ್ದರು. ಪ್ರಯಾಣಿಕರಲ್ಲಿ ಹೆಚ್ಚಿನವರು ಕರಾವಳಿ ಪ್ರದೇಶದಲ್ಲಿ ವಾಸವಾಗಿರುವ ಸೇನೆಯ ಸಿಬ್ಬಂದಿಗಳ ಕುಟುಂಬಸ್ಥರಾಗಿದ್ದಾರೆ.

"ಇನ್ನು ವಿಮಾನ ಹಾರಾಟದ ವೇಳೆ ಹವಾಮಾನ ಸರಿಯಾಗಿತ್ತು. ವಿಮಾನ ತಾಂತ್ರಿಕ ಸಮಸ್ಯೆಗೆ ಸಿಲುಕಿರಬಹುದು. ಆದರೆ ವಿಮಾನಕ್ಕೆ ಏನಾಯ್ತು ಎಂಬ ಬಗ್ಗೆ ಈವರೆಗೆ ಮಾಹಿತಿಗಳಿಲ್ಲ," ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

Military Plane Carrying 116 Missing in Myanmar
English summary
Military plane which is carrying 116 passengers go missing in Myanmar said Army chief of Myanmar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X