ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ತೈಲ, ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರರ ದಾಳಿ: 14 ಬಲಿ

|
Google Oneindia Kannada News

ಕರಾಚಿ, ಅಕ್ಟೋಬರ್ 16: ಬಲೂಚಿಸ್ತಾನದಲ್ಲಿ ಆಯಿಲ್ ಆಂಡ್ ಗ್ಯಾಸ್ ಡೆವಲಪ್‌ಮೆಂಟ್ ಕಂಪನಿಯ ಕೆಲಸಗಾರರನ್ನು ಕರೆದೊಯ್ಯತ್ತಿದ್ದಾಗ ಉಗ್ರರು ದಾಳಿ ನಡೆಸಿರುವ ಪರಿಣಾಮ 14 ಮಂದಿ ಸಾವನ್ನಪ್ಪಿದ್ದಾರೆ.

ಸರ್ಕಾರಿ ಸ್ವಾಮ್ಯದ ಕಂಪನಿಯ ಕೆಲಸಗಾರರನ್ನು ಗ್ವಾದಾರ್‌ ಜಿಲ್ಲೆಯ ಓರ್ಮಾರಾ ಪಣ್ಣದಲ್ಲಿ ಕರೆದೊಯ್ಯುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದಾರೆ, ಘಟನೆಯಲ್ಲಿ ಏಳು ಮಂದಿ ಯೋಧರು ಸೇರಿ 14 ಮಂದಿ ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವುಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವು

ಉಗ್ರರು ಓರ್ಮಾರ ಸಮೀಪದಲ್ಲಿ ಬಲೂಚಿಸ್ತಾನ-ಹಬ್ ಕಚಾರಿ ಕೋಸ್ಟಲ್ ಹೈವೇ ಹತ್ತಿರ ಬೆಟ್ಟದ ಮೇಲಿಂದ ಕಾವಲುಪಡೆ ಮೇಲೆ ದಾಳಿ ನಡೆಸಿದ್ದರು.ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್ ಈ ಕುರಿತು ಸ್ಪಷ್ಟಪಡಿಸಿದೆ.

Militants Ambush Oil Convoy In Pakistan, Kill 14 People

ಪರಸ್ಪರ ಗುಂಡಿನ ದಾಳಿಯಾಗಿದೆ. ದಾಳಿಯ ಸಂದರ್ಭದಲ್ಲಿ ಕಾರ್ಮಿಕರು ಯಾರೂ ಇರಲಿಲ್ಲ. ಈ ಬೆಂಗಾವಲು ಪಡೆಯವರು ಅವರನ್ನು ತೈಲ ಪ್ಲಾಂಟ್‌ಗೆ ಬಿಟ್ಟು ಬರುತ್ತಿದ್ದ ವೇಳೆ ದಾಳಿ ನಡೆದಿದೆ. ಉಳಿದವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಸೆವೆನ್ ಫ್ರಂಟಿಯರ್ ಕಾರ್ಪ್ಸ್ನ ಏಳು ಯೋಧರು ಮತ್ತು ಖಾಸಗಿ ಸೆಕ್ಯುರಿಟಿ ಸಂಸ್ಥೆಯ ಏಳು ಗಾರ್ಡ್‌ಗಳು ಸಾವನ್ನಪ್ಪಿದ್ದಾರೆ.

English summary
Militants ambushed a convoy of oil and gas workers escorted by paramilitary troops in Pakistan’s restive southwestern province of Baluchistan, killing 14 people, including 7 soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X