• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಂಕಾಂಗ್‌ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..?

|

ಹಾಂಕಾಂಗ್‌ ವಿಚಾರವಾಗಿ ಅಮೆರಿಕ-ಚೀನಾ ನಡುವಿನ ವಾಕ್ಸಮರ ಮುಂದುವರಿದಿದೆ. ಇತ್ತೀಚೆಗೆ ಹಾಂಕಾಂಗ್‌ ಮೂಲದ 12 ಹೋರಾಟಗಾರರನ್ನು ಚೀನಾ ಬಂಧಿಸಿತ್ತು. ಇದರ ಹಿಂದೆ ಚೀನಾ ಸರ್ಕಾರ ಷಡ್ಯಂತ್ರ ಅಡಗಿತ್ತು. ಹೀಗಾಗಿ ನೇರಾನೇರ ಚೀನಾಗೆ ವಾರ್ನಿಂಗ್ ಮಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಪಾಂಪಿಯೋ, ಚೀನಾ ಬಂಧಿಸಿದ ಹಾಂಕಾಂಗ್‌ ಮೂಲದ 12 ಜನರ ಜೊತೆ ನಾವು ನಿಲ್ಲುತ್ತೇವೆ ಎಂದಿದ್ದಾರೆ.

ಈ ಮೂಲಕ ಈಗಾಗಲೇ ಹೊತ್ತಿ ಉರಿಯುತ್ತಿರುವ ಎರಡೂ ದೇಶಗಳ ಸೇಡಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇಷ್ಟುದಿನ ಮುಸುಕಿನ ಗುದ್ದಾಟದಂತಿದ್ದ ಎರಡೂ ದೇಶಗಳ ಜಗಳ ಬೀದಿಗೆ ಬಂದು ನಿಂತಿದೆ. ಕೆಲವು ದಿನಗಳ ಹಿಂದಷ್ಟೇ ಹಾಂಕಾಂಗ್‌ನಿಂದ ಕೆಲವರು ದೋಣಿಗಳ ಮೂಲಕ ತೈವಾನ್‌ಗೆ ಎಸ್ಕೇಪ್ ಆಗುತ್ತಿದ್ದರು. ಹಾಂಕಾಂಗ್‌ನಿಂದ ಸಮುದ್ರ ಮಾರ್ಗವಾಗಿ ಪ್ರಯಾಣಿಸಿದರೆ ತೈವಾನ್ ತುಂಬಾ ಹತ್ತಿರ. ಹೀಗೆ ಎಸ್ಕೇಪ್ ಆಗಲು ಯತ್ನಿಸಿದವರಲ್ಲಿ ಬಹುಪಾಲು ಜನರು, ಕಳೆದ ವರ್ಷ ಹಾಂಕಾಂಗ್‌ನಲ್ಲಿ ನಡೆದಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಹಾಂಗ್ ಕಾಂಗ್, ಚೀನಾಗೆ ಹೋಗುವ ಮುನ್ನ ಎಚ್ಚರ: US ಹೊಸ ನಿಯಮ!

ಆದರೆ ಹೋರಾಟಗಾರರನ್ನೇ ಟಾರ್ಗೆಟ್ ಮಾಡಿರುವ ಚೀನಾ ಹಾಂಕಾಂಗ್‌ನಲ್ಲಿ ಹೊಸ ಕಾನೂನು ಹೇರಿಕೆ ಮಾಡಿದ್ದು, ಹೋರಾಟಗಾರರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ. ಹೀಗಾಗಿ ಜೀವ ಉಳಿಸಿಕೊಳ್ಳಲು ನೂರಾರು ಮಂದಿ ಈಗಾಗಲೇ ಹಾಂಕಾಂಗ್‌ ಬಿಟ್ಟು ಓಡಿ ಹೋಗಿದ್ದಾರೆ. ಹೀಗೆ ಎಸ್ಕೇಪ್ ಆಗುವಾಗ ತೈವಾನ್-ಹಾಂಕಾಂಗ್‌ನ ಸಮುದ್ರ ಮಧ್ಯೆ 10 ಮಂದಿ ಸಿಕ್ಕಿದ್ದರು. ಹಾಗೂ ಚೀನಾ ಗಡಿಯಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು.

ಹಾಂಕಾಂಗ್‌ ಮೇಲೇಕೆ ಚೀನಾ ಕಣ್ಣು..?

ಹಾಂಕಾಂಗ್‌ ಮೇಲೇಕೆ ಚೀನಾ ಕಣ್ಣು..?

ಹೌದು, ಇಂತಹದ್ದೊಂದು ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿರುತ್ತದೆ. ಅಂದಹಾಗೆ ಚೀನಾಗೆ ಅದೆಷ್ಟೇ ಭೂಮಿ ಇದ್ದರೂ ಮತ್ತಷ್ಟು ಜಾಗ ನನ್ನದಾಗಬೇಕು ಎಂಬ ದುರಾಸೆ. ಚೀನಿ ಗ್ಯಾಂಗ್‌ಗೆ ಮತ್ತೊಂದು ದೇಶದ ಜಾಗ ಕೊಳ್ಳೆ ಹೊಡೆಯುವುದೇ ಕೆಲಸ. ಇದೇ ರೀತಿ ರಷ್ಯಾ ಮೇಲೂ ಜಗಳಕ್ಕೆ ಹೋಗಿ ಒಮ್ಮೆ ಸರಿಯಾಗೇ ಏಟು ತಿಂದು ಬಂದಿದೆ ಚೀನಾ. ಮತ್ತೊಂದ್ಕಡೆ ಹಾಂಕಾಂಗ್ ಮೇಲೆ ಚೀನಾ ಕಣ್ಣಿಡಲು ಬಲವಾದ ಕಾರಣವೂ ಇದೆ. ಆಯಕಟ್ಟಿನ ಜಾಗದಲ್ಲಿರುವ ಹಾಗೂ ಚೀನಾ ಗಡಿಯಿಂದ ಕೂಗಳತೆ ದೂರದಲ್ಲಿರುವ ಶ್ರೀಮಂತ ದೇಶ ಈ ಹಾಂಕಾಂಗ್. ಹೀಗಾಗಿ ಹಾಂಕಾಂಗ್ ತನ್ನ ವೈರಿ ದೇಶಗಳ ವಶವಾಗಿ, ತನ್ನ ವಿರುದ್ಧವೇ ಮಸಲತ್ತು ಮಾಡಲು ನಿಂತರೆ ಕಷ್ಟ ಎಂಬುದು ಚೀನಾಗೆ ಎದುರಾಗಿರುವ ಭಯ. ಈ ಕಾರಣಕ್ಕೆ ಹಾಂಕಾಂಗ್ ದೇಶವನ್ನ ಕಂಟ್ರೋಲ್ ಮಾಡಲು ಚೀನಿ ಗ್ಯಾಂಗ್ ಏನು ಬೇಕಾದರೂ ಮಾಡಲು ಸಿದ್ಧವಿದೆ.

ನೆಮ್ಮದಿಯಾಗಿ ಉಸಿರಾಡಲೂ ಆಗುತ್ತಿಲ್ಲ

ನೆಮ್ಮದಿಯಾಗಿ ಉಸಿರಾಡಲೂ ಆಗುತ್ತಿಲ್ಲ

ಚೀನಾ ಎಂಬ ಭಸ್ಮಾಸುರನ ಕರಿನೆರಳು ಬಿದ್ದಕಡೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹಾಂಕಾಂಗ್‌ನಲ್ಲಿ ಆಗಿರುವುದು ಕೂಡ ಅದೇ. ಹಾಂಕಾಂಗ್ ತನ್ನಿಂದ ದೂರ ಹೋಯಿತು ಎನ್ನುವಷ್ಟರಲ್ಲಿ ರಾಜಕಾರಣಿಗಳನ್ನೆಲ್ಲಾ ಬುಟ್ಟಿಗೆ ಹಾಕಿಕೊಂಡ ಕುತಂತ್ರಿ ಚೀನಾ, ಹಾಂಕಾಂಗ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು ಕಾನೂನು ಜಾರಿಗೆ ತಂದಿತ್ತು.

ಚೀನಾ-ಅಮೆರಿಕ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ..!

ಹಾಂಕಾಂಗ್ ನಾಯಕರಿಂದ ಹೊಸ ಕಾನೂನು ಜಾರಿಗೆ

ಹಾಂಕಾಂಗ್ ನಾಯಕರಿಂದ ಹೊಸ ಕಾನೂನು ಜಾರಿಗೆ

ಹೊಸ ಕಾನೂನಿನಲ್ಲಿ ಹೋರಾಟ ಹತ್ತಿಕ್ಕುವುದರಿಂದ ಹಿಡಿದು, ಹೋರಾಟಗಾರರ ನೆಮ್ಮದಿ ಕೆಡಿಸುವ ತನಕ ಎಲ್ಲವನ್ನೂ ಚೀನಾ ಪ್ಲಾನ್ ಮಾಡಿ ಕೊಟ್ಟಿತ್ತು. ಅದರಂತೆ ಹಾಂಕಾಂಗ್ ನಾಯಕರು ಹೊಸ ಕಾನೂನು ಜಾರಿಗೆ ತಂದಿದ್ದು, ಹಾಂಕಾಂಗ್‌ನಲ್ಲಿ ಖಾಸಗಿ ಮಾಹಿತಿಗಳನ್ನೂ ಸರ್ಕಾರ ಕದಿಯುತ್ತಿದೆ. ಜಿಮ್ಮಿ ಲಾಯಿ ಅವರಂತಹ ಮಾಧ್ಯಮ ದಿಗ್ಗಜರನ್ನು ಕೂಡ ಹಿಡಿದು, ಹಿಡಿದು ಒಳಗೆ ಹಾಕುತ್ತಿದ್ದಾರೆ. ಆದರೆ ಕೋರ್ಟ್‌ನಲ್ಲಿ ಗೆಲುವು ಕಂಡ ಜಿಮ್ಮಿ ಲಾಯಿ ಬಿಡುಗಡೆಗೆ ಆಗಿದ್ದರೂ ಅವರ ಮೇಲೆ ಚೀನಾ ಸರ್ಕಾರ ಇನ್ನೂ ಕಣ್ಣಿಟ್ಟಿದೆ.

ಚೀನಾ v/s ಅಮೆರಿಕ ರಾಜತಾಂತ್ರಿಕ ''ನಿರ್ಬಂಧ'' ಯುದ್ಧ..!

ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್

ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್

ಹಲವು ವರ್ಷಗಳ ಕಾಲ ಬ್ರಿಟಿಷರ ಅಡಿಯಾಳಾಗಿದ್ದ ಹಾಂಕಾಂಗ್ ಸ್ವತಂತ್ರಗೊಂಡರೂ ನೆಮ್ಮದಿಯೇ ಇಲ್ಲ. ಏಕೆಂದರೆ ಅಲ್ಲಿ ಚೀನಾ ಎಂಟ್ರಿ ಕೊಟ್ಟಿತ್ತು. ಸ್ವತಂತ್ರ ದೇಶದಂತೆ ಬಾಳಿದ್ದ ಹಾಂಕಾಂಗ್ ಮೇಲೆ ಚೀನಾ ಮೆಲ್ಲಗೆ ಹಿಡಿತ ಸಾಧಿಸಿತ್ತು. ಹಾಂಕಾಂಗ್‌ ರಾಜಕಾರಣಿಗಳ ಬ್ರೈನ್ ವಾಶ್ ಮಾಡಿ ಹೈಜಾಕ್ ಮಾಡಿದೆ. ಪರಿಣಾಮ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಅಷ್ಟೊಂದು ಅಭಿವೃದ್ಧಿ ಹೊಂದಿದ್ದರೂ ಬೇರೆ ಯಾವುದೋ ದೇಶ ಹಾಂಕಾಂಗ್ ಜನರನ್ನ ಕಂಟ್ರೋಲ್ ಮಾಡುತ್ತಿದೆ. ಅತ್ತ ತೈವಾನ್ ಮೇಲೂ ಕಣ್ಣಿಟ್ಟು ಕೂತಿರುವ ಚೀನಾಗೆ ಹಾಂಕಾಂಗ್ ಕೂಡ ಬೇಕಾಗಿದೆ. ಇದು ನನಸಾಗದಂತೆ ತಡೆಯಲು ಅಮೆರಿಕ ಶತಾಯಗತಾಯ ದಾಳ ಉರುಳಿಸುತ್ತಿದೆ.

ಚೀನಾಗೆ ಕಪಾಳಮೋಕ್ಷ: ಡ್ರ್ಯಾಗನ್ ಶತ್ರು ಬಿಡುಗಡೆ

English summary
Rivalry between the US-China over Hong Kong has reached another level. US demanded release of 12 Hong Kong-based detainees who recently detained by China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X