ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋ ಸಾಫ್ಟ್ ಕಂಪನಿಯಲ್ಲಿ ಸಾವಿರಗಟ್ಟಲೆ ಉದ್ಯೋಗ ಕಡಿತ?

ಮೈಕ್ರೋಸಾಫ್ಟ್ ಕಂಪನಿಯು ತನ್ನಲ್ಲಿನ ಸಾವಿರ ಗಟ್ಟಲೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ನಿರ್ಧಾರಕ್ಕೆ ಕೈ ಹಾಕಿದೆ. ಮಾರುಕಟ್ಟೆ ವಿಭಾಗದಲ್ಲಿ ಪ್ರಮುಖವಾಗಿ ಈ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

|
Google Oneindia Kannada News

ನ್ಯೂಯಾರ್ಕ್, ಜುಲೈ 4: ಮಾಹಿತಿ ತಂತ್ರಜ್ಞಾನ ಲೋಕದ ದಿಗ್ಗಜ ಮೈಕ್ರೋ ಸಾಫ್ಟ್ ನಲ್ಲಿ ಸಾವಿರಗಟ್ಟಲೆ ಉದ್ಯೋಗಗಳನ್ನು ಕಡಿತ ಮಾಡುವ ಲೆಕ್ಕಾಚಾರದಲ್ಲಿ ನಿರತವಾಗಿದೆ.

ಸದ್ಯಕ್ಕೆ ಬಂದಿರುವ ಮಾಹಿತಿಗಳ ಪ್ರಕಾರ, ಆರಂಭದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಈ ಉದ್ಯೋಗ ಕಡಿತ ಆಗಲಿದೆ. ಆನಂತರ, ಅವಶ್ಯಕತೆ ಬಿದ್ದರೆ ಕಂಪನಿಯ ಸಾಫ್ಟ್ ವೇರ್ ತಂತ್ರಜ್ಞರ ವಲಯ ಹಾಗೂ ಆಡಳಿತ ಮಂಡಳಿಗಳ ವಲಯಕ್ಕೂ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.

Microsoft Could Lay Off Thousands Of Employees Amid Big Shake-Up

ಇತ್ತೀಚೆಗೆ, ಮೈಕ್ರೋ ಸಾಫ್ಟ್ ಕಂಪನಿಯು ತನ್ನ ಮಾರುಕಟ್ಟೆ ವಲಯವನ್ನು ಪರಿಷ್ಕರಣೆಗೊಳಪಡಿಸಿದ್ದು, ಆ ಸಂದರ್ಭದಲ್ಲಿ ಕಂಪನಿಯ ಖರ್ಚು, ವೆಚ್ಛ ನಿರ್ವಹಣೆಗಾಗಿ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿತ್ತೆಂದು ಹೇಳಲಾಗಿದೆ.

ಇದೇ ವರ್ಷ ಮಾರ್ಚ್ 31ರ ವೇಳೆಗೆ, ಕಂಪನಿಯ ಮಾರುಕಟ್ಟೆ ವಿಭಾಗದಲ್ಲಿ (ಒಟ್ಟಾರೆ) ಸುಮಾರು 1,21,567 ಉದ್ಯೋಗಿಗಳಿದ್ದರೆಂದು ಅಂಕಿ-ಅಂಶಗಳು ತಿಳಿಸಿವೆ.

English summary
Microsoft Corp. reorganized its sales and marketing operations in a bid to woo more customers in areas like artificial intelligence and the cloud by providing sales staff with greater technical and industry-specific expertise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X