ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ವಲಸೆ ನೀತಿ ವಿರುದ್ಧ ಮೈಕ್ರೋಸಾಫ್ಟ್, ಗೂಗಲ್, ಆ್ಯಪಲ್ ದಾವೆ

ಏಳು ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕ ಪ್ರವೇಶಿಸಲು ನಿರ್ಬಂಧ ಹೇರಿರುವುದರ ವಿರುದ್ಧ ಕೋರ್ಟ್ ಗೆ ಅಮೆರಿಕದ ಸಿಲಿಕಾನ್ ವ್ಯಾಲಿಯ ದೈತ್ಯ ಕಂಪನಿಗಳ ಮೊರೆ.

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 7: ಏಳು ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕ ಪ್ರವೇಶಿಸಲು ನಿರ್ಬಂಧ ಹೇರಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮವನ್ನು ಸಿಲಿಕಾನ್ ವ್ಯಾಲಿಯ ದೈತ್ಯಾತಿದೈತ್ಯ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್, ಆ್ಯಪಲ್ ಸೇರಿದಂತೆ 97 ಕಂಪನಿಗಳು ನೂತನ ವಲಸೆ ನೀತಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿವೆ.

ನೈನ್ತ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅಹವಾಲಿನಲ್ಲಿ ಅಮೆರಿಕಾಧ್ಯಕ್ಷರ ನೂತನ ನಿಯಮಗಳು ಸಂವಿಧಾನ ಹಾಗೂ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಧ್ಯಕ್ಷರ ಈ ಆದೇಶದಿಂದಾಗಿ ಅಮೆರಿಕಾ ಕಂಪನಿಗಳ ಮೇಲೆ ಗಾಢವಾದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕಂಪನಿಗಳು ಅಲವತ್ತುಕೊಂಡಿವೆ.

Microsoft, Apple, Google file legal action against Trump's travel ban

ಈ ಬಗ್ಗೆ ನ್ಯಾಯಾಲಯವು ಪರಾಮರ್ಶೆ ಮಾಡಿ, ಅಧ್ಯಕ್ಷರ ಆದೇಶಕ್ಕೆ ತಡೆ ನೀಡಬೇಕೆಂದು ಈ ಕಂಪನಿಗಳು ನ್ಯಾಯಪೀಠವನ್ನು ಪ್ರಾರ್ಥಿಸಿವೆ. ಈ ದಾವೆಯನ್ನು ಟ್ವಿಟರ್, ನೆಟ್ ಫ್ಲಿಕ್ಸ್ ಹಾಗೂ ಉಬರ್ ಕಂಪನಿಗಳೂ ಬೆಂಬಲಿಸಿರುವುದು ಗಮನಾರ್ಹ.

ಟ್ರಂಪ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮನ್ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.

English summary
Silicon Valley's top firms, including Microsoft, Apple and Google, are among 97 technology giants that have filed a motion in a US court against President Donald Trump's controversial immigration order calling it "violation" of the laws and the Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X