• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಎಚ್370 ಪೈಲಟ್ ಖಿನ್ನತೆಯೇ ದುರಂತಕ್ಕೆ ಕಾರಣವಾಯಿತೆ?

|

2014ನೇ ಇಸ್ವಿಯ ಮಾರ್ಚ್ 8ರಂದು ನಿಗೂಢವಾಗಿ ಕಣ್ಮರೆಯಾದ ಮಲೇಶಿಯಾ ಏರ್ ಲೈನ್ಸ್ ವಿಮಾನ ಎಂಎಚ್370 ಕುರಿತಂತೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ತಾಂತ್ರಿಕ ಕಾರಣಗಳಿಂದ ವಿಮಾನಗಳು ಪತನವಾಗುವುದು ಸಹಜ. ಆದರೆ, ಇಲ್ಲಿ ಕಂಡುಕೊಂಡಿರುವ ಸಂಗತಿ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.

ಕೌಲಾಲಂಪುರಂನಿಂದ ಬೀಜಿಂಗ್ ಗೆ ಹೊರಟಿದ್ದ ಎಂಎಚ್370 ವಿಮಾನ ಮಾರ್ಚ್ 8, ವಿಶ್ವ ಮಹಿಳಾ ದಿನಾಚರಣೆಯಂದೇ ವಿಸ್ಮಯಕಾರಿಯಾಗಿ ಕಣ್ಮರೆಯಾಗಿತ್ತು. ಅದರಲ್ಲಿ ವಿಮಾನದ ಸಿಬ್ಬಂದಿಗಳು ಸೇರಿ 239 ಜನರಿದ್ದರು. ಇಂದಿಗೆ ಕೂಡ ಈ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ.

ಎಂಎಚ್370 ಕಣ್ಮರೆ ಪ್ರಕರಣ ದುರಂತ ಅಂತ್ಯ

ಸಮುದ್ರದೊಳಗೆ ಕಣ್ಮರೆಯಾದ, ಕಡೆಗೂ ಸಿಗದ ವಿಮಾನದ ಪೈಲಟ್ ಆಗಿದ್ದ ಜಹರಿ ಅಹ್ಮದ್ ಶಾ ಅವರ ಸ್ನೇಹಿತರೊಬ್ಬರು, ಅಂದು ಆಗಿರಬಹುದಾದ ಘಟನೆಯ ವಿವರವನ್ನು ಬಯಲು ಮಾಡಿದ್ದಾರೆ. ವಿಮಾನ ದುರಂತಕ್ಕೆ ಕಾರಣವಾಗಿದ್ದೇ ಜಹರಿ ಅಹ್ಮದ್ ಶಾ ಅವರ ದುರಂತಮಯ ಪ್ರೇಮ್ ಕಹಾನಿ ಎಂಬುದು ಕೂಡ ಅಷ್ಟೇ ಸತ್ಯ ಎಂದು ವಿಲಿಯಂಸ್ ಲ್ಯಾಂಗೆವೀಶೆ ಎಂಬುವವರ ಮುಂದೆ ತೆರೆದಿಟ್ಟಿದ್ದಾರೆ.

ಪೈಟಲ್ ಅಹ್ಮದ್ ಶಾ ಅವರ ಸ್ನೇಹಿತ ಹೇಳಿರುವುದನ್ನು ಪರಿಗಣಿಸಿದರೆ, ಎಂಎಚ್370 ವಿಮಾನ ಯಾವುದೇ ತಾಂತ್ರಿಕ ತೊಂದರೆಯಿಂದ ಪತನವಾಗಿಲ್ಲ. ಬದಲಾಗಿ, ಉದ್ದೇಶಪೂರ್ವಕವಾಗಿಯೇ 'ಆತ್ಮಾಹುತಿ' ಮಾಡಿಕೊಳ್ಳಲಾಗಿದೆ. ಆದರೆ, ದುರಾದೃಷ್ಟವಶಾತ್ ಅವರೊಂದಿಗೆ ಉಳಿದ ಪ್ರಯಾಣಿಕರೂ ಸಾವನ್ನಪ್ಪುವಂತಾಯಿತು. ದಿ ಟೆಲಿಗ್ರಾಫ್ ವರದಿ ಮಾಡಿರುವ ಈ ದುರಂತದ ಕಥೆ ಕೆಳಗಿನಂತಿದೆ.

ತೀವ್ರ ಖಿನ್ನತೆಗೊಳಗಾಗಿದ್ದ ಪೈಲಟ್ ಶಾ

ತೀವ್ರ ಖಿನ್ನತೆಗೊಳಗಾಗಿದ್ದ ಪೈಲಟ್ ಶಾ

53 ವರ್ಷದ ಜಹರಿ ಅಹ್ಮದ್ ಶಾ ಅವರು ಆ ಸಮಯದಲ್ಲಿ ತೀವ್ರ ಖಿನ್ನತೆಗೊಳಗಾಗಿದ್ದರು. ಬೀಜಿಂಗ್ ಗೆ ಪಯಣಿಸುತ್ತಿದ್ದ ಎಲ್ಲ 227 ಪ್ರಯಾಣಿಕರಿಗೆ ಆಮ್ಲಜನಕ ಸಿಗದಂತೆ ಪೈಲಟ್ ಮೊದಲು ಮಾಡಿದ್ದಾರೆ. ಜೊತೆಗೆ, ಫ್ಲೈಟ್ ತರಬೇತಿ ಪಡೆಯುತ್ತಿದ್ದ 27 ವರ್ಷದ ಫಾರಿಕ್ ಹಮೀದ್ ಅವರನ್ನು ಕಾಕ್ ಪಿಟ್ ನಿಂದ ಹೊರಗೆ ಕಳಿಸಿ, ಕ್ಯಾಬಿನ್ ನಲ್ಲಿ ಲಾಕ್ ಮಾಡಿದ್ದಾರೆ. ನಂತರವೇ, ಎಂಎಚ್370 ವಿಮಾನವನ್ನು ಹಿಂದೂ ಮಹಾಸಾಗರದಲ್ಲಿ ಮುಳುಗಿಸಿದ್ದಾರೆ. ಹಲವಾರು ವರ್ಷಗಳ ಕಾಲ ಇದನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ವಿಮಾನದ ಲವಲೇಶವೂ ಪತ್ತೆಯಾಗಿಲ್ಲ ಮತ್ತು ದೇಹಗಳೂ ದೊರೆತಿಲ್ಲ. ಆದರೆ, ಈ ದುರಂತದ ಹಿಂದಿನ ಕಾರಣ ಇನ್ನೂ ವಿಸ್ಮಯಕಾರಿಯಾಗಿದೆ.

ಇಬ್ಬರು ಸುಂದರಿಯರ ಹಿಂದೆ ಬಿದ್ದಿದ್ದ ಶಾ

ಇಬ್ಬರು ಸುಂದರಿಯರ ಹಿಂದೆ ಬಿದ್ದಿದ್ದ ಶಾ

ಜಹರಿ ಅವರ ವೈವಾಹಿಕ ಜೀವನ ಸುಗಮವಾಗಿರಲಿಲ್ಲ. ಅವರು ಅವರೊಂದಿಗೆ ಪಯಣಿಸುತ್ತಿದ್ದ ಸುಂದರ ಗಗನಸಖಿಯರೊಂದಿಗೆ ಸಂಬಂಧ ಹೊಂದಿದ್ದರು. ಇದು ಅವರ ಪತ್ನಿಗೂ ಗೊತ್ತಿತ್ತು. ಇದರ ಬಗ್ಗೆ ಪತ್ನಿಗೆ ತಕರಾರೂ ಇರಲಿಲ್ಲ. ಏಕೆಂದರೆ, ಇಂಥ ಸಂಬಂಧಗಳು ಸಾಮಾನ್ಯವಾಗಿದ್ದವು. ಆದರೆ, ವೈವಾಹಿಕ ಸಂಬಂಧವನ್ನು ಮುರಿದುಕೊಂಡು ಶಾ ಅವರ ಪತ್ನಿ ಅವರನ್ನು ತೊರೆದ ಮೇಲೆ ಮತ್ತೊಂದು ರೀತಿಯ ಸಮಸ್ಯೆ ಆರಂಭವಾಗಿತ್ತು. ಶಾ ಅವರು ಇಬ್ಬರು ಯುವ ರೂಪದರ್ಶಿಯರನ್ನು ತುಂಬಾ ಹಚ್ಚಿಕೊಂಡಿದ್ದರು. ಅವರನ್ನು ಬಿಟ್ಟಿರದ ಸ್ಥಿತಿಗೆ ತಲುಪಿದ್ದರು. ಅವರೂ ದಕ್ಕದಿದ್ದ ಕಾರಣ ಶಾ ಖಿನ್ನತೆಗೊಳಗಾಗಿದ್ದರು, ಗಂಟೆಗಳ ಕಾಲ ಏಕಾಂಗಿಯಾಗಿ ಸಮಯ ಕಳೆಯುತ್ತಿದ್ದರು.

MH-370 ವಿಮಾನ ಕಣ್ಮರೆ: ನಿಗೂಢವಾಗಿಯೇ ಅಂತ್ಯಗೊಂಡ ತನಿಖೆ

ಪತನಕ್ಕು ಮೊದಲೇ ಪ್ರಯಾಣಿಕರು ಸತ್ತಿದ್ದರು

ಪತನಕ್ಕು ಮೊದಲೇ ಪ್ರಯಾಣಿಕರು ಸತ್ತಿದ್ದರು

ಅಟ್ಲಾಂಟಿಕ್ ಮ್ಯಾಗಜಿನ್ ನಲ್ಲಿ ದಾಖಲಾಗಿರುವ ವಿವರಗಳ ಪ್ರಕಾರ, ವಿಮಾನದಲ್ಲಿನ ಒತ್ತಡವನ್ನು ಪೈಲಟ್ ತೆಗೆದುಹಾಕಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಮತ್ತು ಕ್ಯಾಬಿನ್ ನಲ್ಲಿದ್ದ ಸಿಬ್ಬಂದಿಗಳಿಗೆ ಆಮ್ಲಜನಕ ಸಿಗದಂತಾಗಿ ಉಸಿರಾಡಲು ಸಾಧ್ಯವಾಗದೆ, ವಿಮಾನ ಸಮುದ್ರಕ್ಕೆ ಬೀಳುವ ಮುನ್ನವೇ ಎಲ್ಲರೂ ಸಾವಿಗೀಡಾಗಿದ್ದರು. 13 ಸಾವಿರ ಅಡಿಗಳ ಎತ್ತರದಲ್ಲಿ ಕೇವಲ 15 ನಿಮಿಷಗಳ ಕಾಲ ಮಾತ್ರ ಆಮ್ಲಜನಕ ಲಭ್ಯವಿರುತ್ತದೆ. ಇದಲ್ಲದೆ, ಎಲೆಕ್ಟ್ರಿಕ್ ವ್ಯವಸ್ಥೆಯನ್ನು ಕೂಡ ಶಾ ಆಫ್ ಮಾಡಿದ್ದರಿಂದ ಸೆಟಲೈಟ್ ನಿಂದ ಕೂಡ ಟ್ರಾಕ್ ಮಾಡದಂತೆ ಮಾಡಿದ್ದಾರೆ. ಆದರೆ ಶಾ ಅವರು ತಾವು ಮಾತ್ರ ಆಮ್ಲಜನಕ ಮಾಸ್ಕ್ ಹಾಕಿಕೊಂಡು ಹೆಣವಾದ ಪ್ರಯಾಣಿಕರೊಂದಿಗೆ ಗಂಟೆಗಟ್ಟಲೆ ಸುತ್ತಾಡಿದ್ದಾರೆ. ನಂತರ ವಿಮಾನ ಹಿಂದೂ ಮಹಾಸಾಗರದಲ್ಲಿ ಲೀನವಾಗಿದೆ.

ಮಲೇಷ್ಯಾ ವಿಮಾನದ ಪೈಲಟ್ ಮಗಳು ಬರೆದ ಪತ್ರ

ವಿಮಾನ ಪತನ ಬಾಲಕನಿಗೆ ಮೊದಲೇ ಗೊತ್ತಿತ್ತಾ?

ವಿಮಾನ ಪತನ ಬಾಲಕನಿಗೆ ಮೊದಲೇ ಗೊತ್ತಿತ್ತಾ?

ವಿಮಾನದ ಅವಶೇಶಗಳು ಮತ್ತು ಪ್ರಯಾಣಿಕರು ಸಿಗದಿದ್ದರೂ ದಕ್ಕಿದ್ದು ಮಾತ್ರ ಕೆಲ ಕಣ್ಣೀರ ಕಥೆಗಳು. ಹನ್ನೊಂದು ವರ್ಷದ ಮಿಗೆಲ್ ಎಂಬ ಬಾಲಕ ತನ್ನ ಅಣ್ಣನೊಡನೆ ಅಜ್ಜಿಯನ್ನು ಭೇಟಿಯಾಗಲು ಬಾಲಿಗೆ ತೆರಳುತ್ತಿದ್ದ. ಅಚ್ಚರಿಯೆಂದರೆ, ಮನೆಯಿಂದ ಹೊರಡುವ ಮೊದಲು, 'ಅಮ್ಮಾ ನಿನ್ನೊಂದು ಬಾರಿ ತಬ್ಬಿಕೊಳ್ಳಲಾ' ಎಂದು ಕಣ್ಣೀರುಗರೆಯುತ್ತ ಕೇಳಿದ್ದ. ಇದಕ್ಕೂ ಮೊದಲು, ಸಾವಿನ ಬಗ್ಗೆ, ವಿಮಾನ ಒಂದು ವೇಳೆ ಪತನವಾದರೆ ಏನಾಗುತ್ತದೆ ಎಂದು ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ ಎಂದು ಅವನ ಅಮ್ಮ ನಂತರ ಹೇಳಿದ್ದಾರೆ. ಅತೀಂದ್ರೀಯ ಶಕ್ತಿಯಿಂದ ತಾನು ಸಾವಿಗೀಡಾಗುತ್ತೇನೆಂದು ಆತನಿಗೆ ಮೊದಲೇ ಗೊತ್ತಿತ್ತಾ? ಆತ ಹಾಗೆ ಮಾತನಾಡಿದ್ದಾದರೂ ಏಕೆ? ವಿಧಿಯೇ ಪೈಲಟ್ ನಿಂದ ಇಂಥ ದುರ್ಘಟನೆ ಮಾಡಿಸಿತ್ತಾ? ಈ ಪ್ರಶ್ನೆಗಳಿಗೆ ಉತ್ತರ ಎಂದೂ ಸಿಗುವುದಿಲ್ಲ.

ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?

ಹುಟ್ಟಿಕೊಂಡಿದ್ದವು ತರಹೇವಾರಿ ಕಥೆಗಳು

ಹುಟ್ಟಿಕೊಂಡಿದ್ದವು ತರಹೇವಾರಿ ಕಥೆಗಳು

ಸತ್ಯ ಸಂಗತಿ ಮಾತ್ರ ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋಗಿದೆ. ವಿಮಾನ ಕಣ್ಮರೆಯಾಗಿದ್ದಕ್ಕೆ ನಾನಾ ರೀತಿಯ ಊಹಾಪೋಹಗಳು ಅಂದು ಹರಿದಾಡುತ್ತಿದ್ದವು. ಒಂದು ಥಿಯರಿ ಪ್ರಕಾರ, ವಿಮಾನವನ್ನು ಉಗ್ರರು ಹೊಡೆದುರುಳಿಸಿದ್ದಾರೆ. ಇದು ಒಂದು ಪುಸ್ತಕದಲ್ಲಿ ಕೂಡ ದಾಖಲಾಗಿದೆ. ಮತ್ತೊಂದು ಕಥೆಯ ಪ್ರಕಾರ, ವಿಮಾನವನ್ನು ಇಸ್ಲಾಮಿಕ್ ಉಗ್ರರು ಹೈಜಾಕ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಯಾವುದೇ ಪುರಾವೆ ಸಿಕ್ಕಿರಲಿಲ್ಲ. ಮತ್ತೊಬ್ಬ ಪತ್ರಕರ್ತನ ಪ್ರಕಾರ, ಉಕ್ರೇನ್ ನಲ್ಲಿ ಹೊಡೆದುರುಳಿಸಲಾಗಿದ್ದ ವಿಮಾನ ಫ್ಲೈಟ್ 17 ಅಲ್ಲ ಎಂಎಚ್370 ಎಂದು ಹೇಳಿದ್ದ. ಅಮೆರಿಕದ ಮಿಲಿಟರಿಗೆ ಸೇರಿದೆ ದ್ವೀಪದಲ್ಲಿ ವಿಮಾನವನ್ನು ಅಡಗಿಸಿಡಲಾಗಿದೆ ಎಂದು ಕೂಡ ಹೇಳಲಾಗಿತ್ತು. ಅಮೆರಿಕ ಇದನ್ನು ನಂತರ ಅಲ್ಲಗಳೆಯಬೇಕಾಯಿತು. ಹೀಗೆ ತರಹೇವಾರಿ ಕಥೆಗಳು ಹುಟ್ಟಿಕೊಂಡಿದ್ದವು. ಇದೀಗ, ಪೈಲಟ್ ನ ವಿಫಲ ಪ್ರೇಮದ ಕಥೆ ಹುಟ್ಟಿಕೊಂಡಿದೆ. ಯಾವುದು ನಿಜವೋ, ಯಾವುದು ಸತ್ಯವೋ?

English summary
MH370 flight tragedy mystory : Friend of pilot who was flying the ill fated plane, has narrated that pilot Zaharie Ahmad Shah was clinically depressed, murdered passengers by removing pressure and committed suicide by crashing into sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X