ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೇಷಿಯನ್ ವಿಮಾನ ದುರಂತ ಚಿತ್ರಗಳು

By Mahesh
|
Google Oneindia Kannada News

ಮಾಸ್ಕೋ, ಜು.18: ಯುದ್ಧ ಪೀಡಿತ ಉಕ್ರೇನ್ ಆಗಸದಲ್ಲಿ ಸಾಗುತ್ತಿದ್ದ ಮಲೇಷಿಯಾ ವಿಮಾನ ಪತನಗೊಂಡು 295ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುಅ ದುರ್ಘಟನೆಗೆ ಇಡೀ ವಿಶ್ವವೇ ಮರುಕಪಟ್ಟಿದೆ. ಎಂಎಚ್ 370 ವಿಮಾನ ನಾಪತ್ತೆ ಪ್ರಕರಣದ ಬೆನ್ನಲ್ಲೇ ಎಂಎಚ್ 17 ದುರಂತ ಕಂಡು ಮಲೇಷಿಯಾ ಜನತೆ ಬೆಚ್ಚಿದ್ದಾರೆ.

ಪೂರ್ವ ಉಕ್ರೇನ್ ಮೇಲೆ ಸಾಗುತ್ತಿದ್ದ ಮಲೇಷ್ಯಾ ವಿಮಾನವನ್ನು ಉಕ್ರೇನ್ ಉಗ್ರರು ಕ್ಷಿಪಣಿ ಮೂಲಕ ಹೊಡೆದು ಉರುಳಿಸಿದ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅದೇ ಪ್ರದೇಶದಲ್ಲಿ ಸಂಚರಿಸಿದೆ. ಅದೃಷ್ಟವಶಾತ್ ನರೇಂದ್ರ ಮೋದಿ ಅವರು ಸುರಕ್ಷಿತವಾಗಿ ತವರಿಗೆ ಮರಳಿದ್ದು, ಮತ್ತೊಂದು ಘೋರ ದುರಂತ ತಪ್ಪಿದಂತಾಗಿದೆ ಎಂಬ ಸುದ್ದಿಯೂ ಬಂದಿದೆ.[ಕ್ಷಿಪಣಿ ದಾಳಿಗೆ ಮಲೇಷ್ಯಾ ವಿಮಾನ ಪತನ, 295 ಸಾವು ]

ಆದರೆ, ಭಾರತದ ಪ್ರಧಾನಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಯಾವುದೇ ಅಪಾಯ ಬೆದರಿಕೆ ಅಥವಾ ಪ್ರಯಾಣದ ವೇಳೆ ತೊಂದರೆ ಉಂಟಾಗಿಲ್ಲ. ಮೋದಿ ಅವರು ಸುರಕ್ಷಿತವಾಗಿ ದೆಹಲಿ ತಲುಪಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ರಾಜು ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಲ್ಲಿ ಮಲೇಷ್ಯಾದ ವಿಮಾನ ಪತನಗೊಂಡು 295 ಮಂದಿ ಅಸುನೀಗಿದ್ದಾರೆ. ಈ ಪೈಕಿ 280 ಪ್ರಯಾಣಿಕರು ಮತ್ತು 15 ಮಂದಿ ಸಿಬ್ಬಂದಿ ಇದ್ದರು. ಅಪಘಾತಕ್ಕೆ ಈಡಾದ ವಿಮಾನ ಆಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರಕ್ಕೆ ತೆರಳುತ್ತಿತ್ತು.

ಉಗ್ರರು ಕ್ಷಿಪಣಿ ಉಡಾಯಿಸಿ ವಿಮಾನ ಪತನಗೊಳಿಸಿದ್ದಾರೆ. ಏಪ್ರಿಲ್‌ನಲ್ಲಿ 250 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿರುವ ಬೆನ್ನಲ್ಲೇ ದುರಂತ ನಡೆದಿದೆ. ದುರಂತಕ್ಕೆ ಕಾರಣ ಏನೇ ಇರಬಹುದು. ಬೆರಳೆಣಿಕೆಯಷ್ಟು ಮಂದಿ ಭಾರತೀಯರು ಮಾತ್ರ ಸಾವನ್ನಪ್ಪಿರಬಹುದು ಆದರೆ, ದುರಂತದ ಶೋಕ ವಿಶ್ವವನ್ನೇ ಆವರಿಸಿದೆ.

ಮೊಬೈಲ್ ಫೋನಿನಲ್ಲಿ ಸೆರೆಸಿಕ್ಕ ಎಂಎಚ್ 17ರ ಚಿತ್ರ

ಮೊಬೈಲ್ ಫೋನಿನಲ್ಲಿ ಸೆರೆಸಿಕ್ಕ ಎಂಎಚ್ 17ರ ಚಿತ್ರ

ಉಕ್ರೇನ್: ಆಂಡ್ರೆ ಕಷ್ಟನೋವ್ ಎಂಬುವರು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಎಂಎಚ್ 17 ವಿಮಾನ ದುರಂತ ಚಿತ್ರ, ಪೂರ್ವ ಉಕ್ರೇನ್ ಗಡಿ ಭಾಗದಲ್ಲಿ ನಡೆದ ಘೋರ ದುರ್ಘಟನೆ

ಉಕ್ರೇನ್ ಗಡಿಯಲ್ಲಿ ಹಬ್ಬಿದ ಹೊಗೆ

ಉಕ್ರೇನ್ ಗಡಿಯಲ್ಲಿ ಹಬ್ಬಿದ ಹೊಗೆ

ಉಕ್ರೇನ್ ಗಡಿಯಲ್ಲಿರುವ ಗ್ರಾಬೊವೊ ಗ್ರಾಮದ ಸುತ್ತಾ ವಿಮಾನ ದುರಂತದ ನಂತರ ದಟ್ಟವಾದ ಹೊಗೆ ಹಬ್ಬಿದೆ.

ಕೀವ್ ನಲ್ಲಿ ಪ್ರತಿಭಟನೆ ನಿರತ ಮಹಿಳೆ

ಕೀವ್ ನಲ್ಲಿ ಪ್ರತಿಭಟನೆ ನಿರತ ಮಹಿಳೆ

ಉಕ್ರೇನ್ನಿನ ನಗರ ಕೀವ್ ನಲ್ಲಿ ಉಕ್ರೇನಿ ಮಹಿಳೆ ಡಚ್ ರಾಯಭಾರಿ ಕಚೇರಿ ಎದುರು ಮಲಗಿಕೊಂಡು 'ಪುಟಿನ್ ನರಹಂತಕ' ಎಂಬ ಫಲಕ ಎದೆ ಮೇಲೆ ಹಾಕಿಕೊಂಡಿದ್ದಾರೆ.

ಅವಶೇಷಗಳ ನಡುವೆ ಸಂಚಾರ

ಅವಶೇಷಗಳ ನಡುವೆ ಸಂಚಾರ

ಎಂಎಚ್ 17 ವಿಮಾನದ ಅವಶೇಷಗಳ ನಡುವೆ ಸಂಚಾರ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ಪೆಟ್ರೋ ಪೊರೊಶೆಂಕೋ ದುರಂತದಲ್ಲಿ ದೇಶದ ಸೈನ್ಯದ ಪಾತ್ರವಿಲ್ಲ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಮಾನ ಹೊಡೆದು ಉರುಳಿಸಿದ್ದನ್ನು ಖಂಡಿಸಿದ್ದಾರೆ.

ಗಡಿ ಭಾಗದಲ್ಲಿ ನಡೆದ ದುರಂತದ ವಿಡಿಯೋ

ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಿಂದ 50 ಕಿಮೀ ದೂರದಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಉಗ್ರರು ಭುವಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಯಿಂದ ಉಡಾಯಿಸಿದ್ದಾರೆ.

English summary
MH17 tragedy in Pictures : The Malaysian aircraft from Amsterdam to Kuala Lumpur crashed in Ukraine on Thursday, killing 298 people onboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X