ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: 23 ಮಂದಿ ಬಲಿ ಪಡೆದ ಮೆಕ್ಸಿಕೋ ಮೆಟ್ರೋ ದುರಂತ

|
Google Oneindia Kannada News

ಮೆಕ್ಸಿಕೋ ನಗರ, ಮೇ 5: ಮೆಟ್ರೋ ರೈಲು ಸಾಗುತ್ತಿದ್ದ ವೇಳೆ ಮೇಲ್ಸೇತುವೆಯಿಂದ ಕುಸಿದು ಭಾರಿ ದುರಂತ ಸಂಭವಿಸಿದೆ. ಜನನಿಬಿಡ ರಸ್ತೆ ಮೇಲೆ ಮೇಲ್ಸೇತುವೆ ಕುಸಿದು ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 79 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ದೇಹಗಳನ್ನು ಹೊರ ತೆಗೆಯಲಾಗಿದೆ. ಮೇಲ್ನೋಟಕ್ಕೆ ಮೆಟ್ರೋ ಮೇಲ್ಸೇತುವೆ ಕಳಪೆ ಕಾಮಗಾರಿಯೇ ಈ ಕುಸಿತಕ್ಕೆ ಕಾರಣ ಎಂದು ತಿಳಿದು ಬಂದಿದೆ.

Mexico City metro overpass collapses killing more than 23

ಮೆಕ್ಸಿಕೋ ನಗರದ ಮೇಯರ್ ಕ್ಲೌಡಿಯಾ ಶೀನ್ ಬಾಮ್ ಅವರು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯವನ್ನು ಪರಿಶೀಲಿಸುತ್ತಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ರೇನ್ ಬಳಸಿ, ಲೇನ್ 12ರ ಮೆಟ್ರೋ ಬೋಗಿಯನ್ನು ಮೇಲಕ್ಕೇತ್ತಲಾಗಿದೆ.

Mexico City metro overpass collapses killing more than 23

1969ರಿಂದ ಇಲ್ಲಿ ತನಕ ಇಂಥ ದುರಂತವನ್ನು ನಮ್ಮ ನಗರ ಎದುರಿಸಿರಲಿಲ್ಲ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು, ಮೊದಲು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆ ಎಂದು ಮೇಯರ್ ಕ್ಲೌಡಿಯಾ ಪ್ರತಿಕ್ರಿಯಿಸಿದ್ದಾರೆ.

Mexico City metro overpass collapses killing more than 23

ಮೆಕ್ಸಿಕೋ ನಗರದಲ್ಲಿ 12 ಲೇನ್ ಮೆಟ್ರೋ ರೈಲು ಪ್ರತಿ ನಿತ್ಯ ಸಂಚರಿಸುತ್ತಿದೆ. 1975ರ ಅಕ್ಟೋಬರ್ ತಿಂಗಳಲ್ಲಿ ಎರಡು ಮೆಟ್ರೋ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ 23 ಮಂದಿ ಮೃತಪಟ್ಟು, 55 ಗಾಯಗೊಂಡಿದ್ದರು. 2021ರ ಜನವರಿಯಲ್ಲಿ ಮೆಟ್ರೋ ಕಂಟ್ರೋಲ್ ಕೇಂದ್ರದಲ್ಲಿ ಬೆಂಕಿ ದುರಂತದಲ್ಲಿ ಒಬ್ಬರು ಮೃತಪಟ್ಟು, 29 ಮಂದಿ ತೀವ್ರ ಉಸಿರಾಟ ತೊಂದರೆ ಅನುಭವಿಸಿದ್ದರು.

ಕೊರೊನಾವೈರಸ್ ಸಂಕಷ್ಟದಲ್ಲಿರುವ ಮೆಕ್ಸಿಕೋದಲ್ಲಿ ಇಲ್ಲಿ ತನಕ 217,000 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ನಿರ್ಬಂಧಗಳ ನಡುವೆ ಸಂಚಾರ, ಸಾರಿಗೆಗೆ ಅನುಮತಿ ನೀಡಲಾಗಿದೆ.

English summary
An elevated section of the Mexico City metro collapsed and sent a subway car plunging toward a busy boulevard late Monday, killing at least 20 people and injuring about 70, city officials said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X